ನಿಯಮ ಮೀರಿ ಉತ್ಸವ- ದೂರು ದಾಖಲು

521

Get real time updates directly on you device, subscribe now.

ಕುಣಿಗಲ್‌: ಕೊವಿಡ್-19 ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಜಿನ್ನಾಗರ ಸಮೀಪದ ಹೊಸಕೆರೆ ಹುಚ್ಚಮ್ಮ ದೇವಾಲಯದಲ್ಲಿ ಉತ್ಸವ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಜಿನ್ನಾಗರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್‌ ಅಮೃತೂರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಅಮೃತೂರು ಹೋಳಿಯ ಜಿನ್ನಾಗರೆ ಸಮೀಪದ ಹೊಸಕೆರೆ ಹೊನ್ನರಳಿಹುಚ್ಚಮ್ಮ ದೇವಾಲಯದಲ್ಲಿ ಜೂನ್‌ 19 ರಂದು ಸರ್ಕಾರ ಕೊವಿಡ್‌ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿದ್ದ ಮಾರ್ಗಸೂಚಿಗಳನ್ನು ಕಡೆಗಣಿಸಿ ನೂರಾರು ಮಂದಿ ಸೇರಿಕೊಂಡು ಉತ್ಸವ ಆಚರಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಹರಿದಾಡಿದ್ದ ಮೇರೆಗೆ ತಹಶೀಲ್ದಾರ್‌ ಸೂಚನೆ ಮೇರೆಗೆ ಪಿಡಿ ರವಿಕುಮಾರ್‌, ಅಲ್ಲಿನ ಕೊವಿಡ್‌ ಟಾಸ್ಕ್ ಫೋರ್ಸ್‌ ಸಮಿತಿಯವರೊಂದಿಗೆ ಸೇರಿ ವಿಚಾರಣೆ ನಡೆಸಲಾಗಿ ಗ್ರಾಮದ ಮುಖಂಡರು ನಡೆಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪಿಡಿಒ ಗ್ರಾಮದ ಮುಖಂಡರಾದ ಶ್ರೀಧರ, ಬೋರೇಗೌಡ, ತಮ್ಮಣ್ಣಗೌಡ, ಶಿವಕುಮಾರ, ಶಿವಣ್ಣ, ನಂಜೆಗೌಡ ಇವರ ಮೇಲೆ ಅಮೃತೂರು ಪೊಲೀಸರಿಗೆ ದೂರು ನೀಡಿ ಮೇರೆಗೆ ಪೊಲೀಸರು ಕರ್ನಾಟಕ ಎಪಿಡಮಿಕ್‌ ಡಿಸೀಸ್‌ ಆಕ್ಟ್ 2020ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!