ಜೂ. 30ರೊಳಗೆ ದಾಖಲಾತಿಗೆ ಸೂಚನೆ

ಜುಲೈ 1 ರಿಂದ ಸ್ಕೂಲ್ಸ್ ಓಪನ್

304

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಜುಲೈ 1 ರಿಂದ ಶಾಲೆಗಳನ್ನು ಪ್ರಾರಂಭಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಜೂನ್‌ 21 ರಿಂದ ಆರಂಭಿಸಿರುವ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಜೂ.30 ರೊಳಗೆ ಪೂರ್ಣಗೊಳಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಸೂಚಿಸಿದ್ದಾರೆ.
ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಒಂದನೇ ತರಗತಿಗೆ ಅರ್ಹ ಮಕ್ಕಳ ಪಟ್ಟಿ ಪಡೆದು ಪೋಷಕರು ಹಾಗೂ ಎಸ್‌ಡಿಎಂಸಿ, ಸದಸ್ಯರನ್ನು ಭೇಟಿ ಮಾಡಿ ಅರ್ಹ ಎಲ್ಲಾ ಮಕ್ಕಳನ್ನು ಜೂ.30 ರೊಳಗೆ ದಾಖಲಾತಿ ಮಾಡಿಕೊಂಡು ಎಸ್‌ಎಟಿಎಸ್‌ನಲ್ಲಿ ಇಂದೀಕರಿಸಬೇಕು.
ಉಳಿದಂತೆ 2 ರಿಂದ 10ನೇ ತರಗತಿಗೆ ಜೂ.30 ರೊಳಗೆ ದಾಖಲಾತಿಯನ್ನೂ ಪೂರ್ಣಗೊಳಿಸಲು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಕ್ರಮವಹಿಸಬೇಕು. ಜುಲೈ 1 ರಿಂದ ಶಾಲೆಗಳನ್ನು ಪ್ರಾರಂಭಿಸಬೇಕಾಗಿರುವುದರಿಂದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ವ್ಯಾಪ್ತಿಯ ಪುರಸಭೆ ಮುಖ್ಯಾಧಿಕಾರಿ, ನಗರಪಾಲಿಕೆ ಆಯುಕ್ತರು, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಸಹಕಾರದಲ್ಲಿ ಶಾಲೆಗಳಿಗೆ ಸ್ಯಾನಿಟೈಸೇಷನ್‌ ಮಾಡಿಸಿ ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಬೇಕು. ಶಾಲೆ ಪ್ರಾರಂಭ ಮಾಡಲು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸುಸಜ್ಜಿತಗೊಳಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಇಲಾಖೆಯ ಆದೇಶ, ನಿರ್ದೇಶನಗಳನ್ನು ಅನುಸರಿಸಿ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.
ಆಯುಕ್ತರ ಮುಂದಿನ ನಿರ್ದೇಶನದ ಮೇರೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಜುಲೈ-21 ರಿಂದಲೇ ಆನ್‌ಲೈನ್‌ ಅಥವಾ ಆಫ್‌ ಲೈನ್‌ನಲ್ಲಿ ಅನುಷ್ಠಾನಗೊಳಿಸತಕ್ಕದ್ದು ಎಂದು ಶಾಲಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!