ಕುಣಿಗಲ್: ಪಟ್ಟಣದ ಮಹಾತ್ಮಗಾಂಧಿ ಕಾಲೇಜಿನಲ್ಲಿ ಆಯೋಜಿಸಿರುವ ಕೊವಿಡ್ ಲಸಿಕೆ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ಸಮರ್ಪಕ ಮಾಹಿತಿ ನೀಡುವ ಜೊತೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಲಸಿಕೆ ಕೇಂದ್ರದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದು, ಯಾರಿಗೆ ಎಷ್ಟು ಲಸಿಕೆ ನೀಡಲಾಗುತ್ತದೆ ಎಂಬ ಮಾಹಿತಿ ನೀಡುವುದಿಲ್ಲ. 18 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಯುವಕರು ಬೆಳಗ್ಗೆ ಆರು ಗಂಟೆಯಿಂದಲೆ ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯಲು ಕಾಯುತ್ತಿದ್ದರೆ, ಒಂಭತ್ತು ಗಂಟೆಗೆ ಬರುವ ಸಿಬ್ಬಂದಿ ಕೇವಲ 45 ಕ್ಕಿಂತ ಮೇಲ್ಪಟ್ಟವರಿಗೆ ಎಂಬ ಉತ್ತರ ನೀಡುತ್ತಾರೆ. ಯುವ ಜನತೆಗೆ ಯಾವಾಗ ಎಷ್ಟು ಲಸಿಕೆ ಕೊಡುತ್ತಾರೆ ಎಂಬ ಮಾಹಿತಿಯೂ ನೀಡುವುದಿಲ್ಲ. ಕೇಳಿದರೆ ಸ್ಥಳೀಯ ಸಿಬ್ಬಂದಿ ಮೌನಕ್ಕೆ ಶರಣಾಗುತ್ತಾರೆ. ದಿನಾಲೂ ಯುವ ಜನತೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲುವ ಕೆಲಸವಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಿ ಸರಿಯಾದ ಮಾಹಿತಿಯೇ ನೀಡೊಲ್ಲ ಎಂದು ಯುವಕ ಕಾರ್ತಿಕ್ ಆರೋಪಿಸುತ್ತಾರೆ.
ಸರತಿ ಸಾಲಿನಲ್ಲಿ ನಿಂತ ಯುವತಿಯರು ಸರ್ಕಾರ ಲಸಿಕೆ ಹಾಕಿಸಿಕೊಳ್ಳಿ ಎನ್ನುತ್ತದೆ, ಇಲ್ಲಿ ಬಂದು ನೋಡಿದರೆ ಎಷ್ಟು ಲಸಿಕೆ ಇದೆ, ಯಾರಿಗೆ ಕೊಡುತ್ತಾರೆ ಎಂಬ ಮಾಹಿತಿ ನೀಡಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳೊಣ, ತಾಲೂಕು ಆಡಳಿತದ ಅಧಿಕಾರಿಗಳು ಲಸಿಕೆ ಕೇಂದ್ರ ಸಮರ್ಪಕವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಜೊತೆಯಲ್ಲಿ ಮುಂಚಿತವಾಗಿ ಲಸಿಕೆ ಪಡೆಯುವವರಿಗೆ ಟೋಕನ್ ನೀಡುವುದು, ಮಾಹಿತಿ ನೀಡುವುದು ಈ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೋವಿಡ್ ಲಸಿಕೆ ಕೇಂದ್ರ ಅವ್ಯವಸ್ಥೆಯ ಆಗರ
Get real time updates directly on you device, subscribe now.
Next Post
Comments are closed.