ತುಮಕೂರು: ಶರವೇಗದಲ್ಲಿ ಬೆಳೆಯುತ್ತಿರುವ ಮಹಾನಗರದಲ್ಲಿ ಕುಡಿವ ನೀರಿನ ಅಗತ್ಯ ಪೂರೈಸಿಕೊಳ್ಳಲು ದೂರದೃಷ್ಟಿ ಯೋಜನೆಗಳು ಅವಶ್ಯವಾಗಿ ನಡೆಯುತ್ತಿದೆ. ನಗರದ ಬಹುತೇಕ ಬಡಾವಣೆಗಳಿಗೆ ಈಗಲೂ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದು ಹೊಸದೇನಲ್ಲ. ಸಾಕಷ್ಟು ಒತ್ತೂವರಿ ಕೆರೆಗಳನ್ನು ಸಂರಕ್ಷಿಸುವ ಕಾರ್ಯವೂ ನಡೆಯುತ್ತಲಿದೆ. ಇದೇ ವೇಳೆ ನಗರದ ಕ್ಯಾತಸಂದ್ರದಿಂದ 7 ಕಿಮೀ ದೂರದ ಮೈದಾಳ ಕೆರೆ ಅತ್ಯಂತ ಪುರಾತನ ಹಾಗೂ ಐತಿಹಾಸಿಕ ವಿಶೇಷತೆಗಳನ್ನು ಹೊಂದಿದೆ ಎಂದು ಕೃಷಿಕ, ಸಾಮಾಜಿಕ ಹೋರಾಟಗಾರ, ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯಕ್ ತಿಳಿಸಿದ್ದಾರೆ.
ಈ ಹಿಂದೆ ಮೈದಾಳ ಕೆರೆಯಿಂದ ನಗರದ ಹಲವು ಭಾಗಗಳಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಇಂತಹ ವಿಶಾಲವಾದ ಕೆರೆಯಲ್ಲಿ ಪೊದೆಗಳು ಬೆಳೆದು ಅಗಾಧವಾಗಿ ಹೂಳು ತುಂಬಿಕೊಂಡಿದೆ. ಕೆರೆ ಕಲುಷಿತಗೊಳ್ಳುತ್ತಿದೆ. ನೀರು ಕುಡಿಯಲು ಯೋಗ್ಯವಾಗಿಲ್ಲ, ಹೆಚ್ಚುವರಿ ನೀರು ಶೇಖರಣೆಯಾಗಲು ಕೆರೆ ಸ್ವಚ್ಛತೆಗೆ ಮಹಾನಗರ ಪಾಲಿಕೆ ಮುಂದಾಗಬೇಕಿದೆ. ಕೆರೆ ಶುಚಿಗೊಳಿಸಿ ಪ್ರಾಣಿ, ಪಕ್ಷಿ, ಜಲಚರಗಳನ್ನು ರಕ್ಷಿಸುವ ಕೆಲಸ ಮಾಡಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮೈದಾಳ ಕೆರೆ ಸ್ವಚ್ಛಗೊಳಿಸಿ
Get real time updates directly on you device, subscribe now.
Prev Post
Comments are closed.