ಪಾರಂಪರಿಕ ಕೆರೆ ಕಟ್ಟೆಗಳ ರಕ್ಷಣೆಗೆ ಒತ್ತು: ಮಸಾಲೆ

204

Get real time updates directly on you device, subscribe now.

ತುರುವೇಕೆರೆ: ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕೆರೆಕಟ್ಟೆಗಳಿಗೆ ಶ್ರಮವಹಿಸಿ ಹೇಮೆ ನೀರನ್ನು ಹರಿಸಿದರ ಫಲವಾಗಿ ಇಂದು ಅಂತರ್ಜಲದ ಪ್ರಮಾಣ ಚೇತರಿಕೆ ಕಂಡಿರುವುದು ಅತ್ಯಂತ ಸಂತಸ ತಂದಿದೆ ಎಂದು ಶಾಸಕ ಮಸಾಲ ಜಯರಾಮ್‌ ತಿಳಿಸಿದರು.
ತಾಲೂಕಿನ ಮಾವಿನಕೆರೆ ಕೆರೆ ಅಭಿವೃದ್ಧಿಗೆ ಚಾಲನೆ ದೊರಕಿಸಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಶಾಸಕನಾದ ನಂತರ ಬಹುತೇಕ ಕೆರೆಕಟ್ಟೆಗಳಿಗೆ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದೇನೆ, ಕಳೆದ ಕೆಲ ವರ್ಷಗಳಿಂದ ಜಂಗಲ್‌ ಕಟಿಂಗ್‌ ಹಾಗೂ ದುರಸ್ತಿ ಭಾಗ್ಯ ಕಾಣದ ನಾಲೆಗಳಿಗೆ ಕಾಯಕಲ್ಪ ಒದಗಿಸಲಾಗಿದೆ. ಇದರ ಫಲವಾಗಿ ಸರಾಗವಾಗಿ ಹೇಮೆಯ ನೀರು ನೀರಿಕ್ಷಿತ ಮಟ್ಟದಲ್ಲಿ ಎಲ್ಲಾ ಕೆರೆಕಟ್ಟೆಗಳಿಗೆ ಹರಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಜಲಮೂಲಗಳಾದ ಕೆರೆಕಟ್ಟೆಗಳ ಸಂರಕ್ಷಣೆಗೆ ಒತ್ತು ನೀಡುತ್ತೇನೆ. ಆರಂಭಿಕ ಹಂತದಲ್ಲಿ ದೊಡ್ಡಶೆಟ್ಟಿಕೆರೆ, ಮಾವಿನಕೆರೆ, ಕೆರೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.
ಕೆರೆಗಳ ಸಂರಕ್ಷಣೆ ಕೇವಲ ಇಲಾಖೆಗಳ ಜವಾಬ್ದಾರಿಯಾಗದೆ ಸಮಾಜದ ಎಲ್ಲರದ್ದಾಗಬೇಕಿದೆ, ಈ ನಿಟ್ಟಿನಲ್ಲಿ ಪ್ರಕೃತಿಯ ಅನನ್ಯ ಕೊಡುಗೆಯಾದ ಜೀವಜಲ ಸಂರಕ್ಷಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಾಗಿದೆ. ಮಾವಿನಕೆರೆ ಕೆರೆ ಅಭಿವೃದ್ಧಿ ಕಾಮಗಾರಿಗೆ 83.55 ಲಕ್ಷ ರೂ. ವೆಚ್ಚದಲ್ಲಿ ಹಣ ಬಿಡುಗಡೆಗೊಳಿಸಲಾಗಿದೆ. ಸದರಿ ಕಾಮಗಾರಿಗೆ ಚಾಲನೆ ದೊರಕಿಸುವ ವೇಳೆ ಗ್ರಾಮಸ್ಥರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಗುತ್ತಿಗೆದಾರಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ. ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗೆ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಸತೀಶ್‌, ಪಿಎಸಿಬಿ ಮಾಜಿ ಅಧ್ಯಕ್ಷ ನಿಂಗಪ್ಪಗೌಡ, ದಬ್ಬೇಘಟ್ಟ ಹೋಬಳಿ ಭಾಜಪ ಅಧ್ಯಕ್ಷ ಮಂಜೇಗೌಡ, ಮುಖಂಡರಾದ ದಾನಿಗೌಡ, ತಮ್ಮಣ್ಣಗೌಡ, ಗಂಗಾಧರ್‌, ಗೌಡ, ಮೋಹನ್‌, ತ್ರಿಜಯ್, ರಮೇಶ್‌, ಗೋವಿಂದರಾಜ್‌, ಕಾಳಂಜಿಹಳ್ಳಿ ಸೋಮಶೇಖರ್‌, ಗುತ್ತಿಗೆದಾರ ಕೆಂಪೇಗೌಡ, ಎಇಇ ದೀಪು ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!