ಆಂಜನೇಯ ವಿಗ್ರಹ ಪತ್ತೆ

798

Get real time updates directly on you device, subscribe now.

ಗುಬ್ಬಿ: ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಕೆರೆಯ ಮಧ್ಯ ಭಾಗದಲ್ಲಿ 200 ವರ್ಷಗಳ ಹಳೆಯದಾದ ಆಂಜನೇಯ ವಿಗ್ರಹ ಸಿಕ್ಕಿದೆ.
ಕಳೆದ 3 ತಿಂಗಳ ಹಿಂದೆ ಇದೇ ಕೆರೆಯಲ್ಲಿ ವಿಷ್ಣುವಿನ ಸುಂದರ ವಿಗ್ರಹ ಸಿಕ್ಕಿತ್ತು, ಅದನ್ನು ಬೆಂಗಳೂರಿನ ವೆಂಕಟಪ್ಪ ಗ್ಯಾಲರಿಯಲ್ಲಿ ಇಡಲಾಗಿದೆ. ಈಗ ಮತ್ತೊಂದು ವಿಗ್ರಹ ಸಿಕ್ಕಿದ್ದು ಬಹಳ ವಿಶೇಷ ಎನಿಸಿದೆ, ಈ ವಿಗ್ರಹವು 3 ಅಡಿ ಉದ್ದ ಹಾಗೂ 2 ಅಡಿ ಅಗಲವಿದ್ದು ಬೂದು ಬಳಪದ ಕಲ್ಲನ್ನು ಒಳಗೊಂಡಿದೆ, ಈ ಭಾಗದಲ್ಲಿ ಹಾಗಲವಾಡಿಯ ಪಾಳೇಗಾರರು ಹಿಂದೆ ಆಳ್ವಿಕೆ ಮಾಡುತ್ತಿದ್ದು ನೂರಾರು ದೇವಾಲಯಗಳು ಈ ಗ್ರಾಮದಲ್ಲಿತ್ತು, ಹಾಗಾಗಿ ಈ ಗ್ರಾಮದಲ್ಲಿ ಸಾಕಷ್ಟು ಇಂತಹ ಹಳೆಯ ಕಾಲದ ವಸ್ತು, ವಿಗ್ರಹಗಳು ಆಗಾಗ್ಗೆ ಸಿಗುತ್ತಿವೆ ಎಂದು ಇತಿಹಾಸ ಸಂಶೋಧಕ ಅಮ್ಮನಘಟ್ಟ ಶ್ರೀನಿವಾಸ್‌ ಮಾಹಿತಿ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!