ಭದ್ರ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಟಿ.ಬಿ.ಜಯಚಂದ್ರ ಆಕ್ರೋಶ

ಹಣ ಖರ್ಚಾಗ್ತಿದೆ, ಕಾಮಗಾರಿಯೇ ಆಗ್ತಿಲ್ಲ

389

Get real time updates directly on you device, subscribe now.

ತುಮಕೂರು: ಮಧ್ಯ ಕರ್ನಾಟಕ ಹಲವು ಜಿಲ್ಲೆಗಳಿಗೆ ನೀರು ಒದಗಿಸುವ 12,340 ಕೋಟಿ ರೂ.ಗಳ ಭದ್ರ ಮೇಲ್ದಂಡೆ ಯೋಜನೆಯ ತುಮಕೂರು ನಾಲಾ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದು, ಇದನ್ನು ತ್ವರಿತಗೊಳಿಸುವಂತೆ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಾಲಾ ಕಾಮಗಾರಿ ಶೇ.10 ರಷ್ಟು ಮಾತ್ರ ನಡೆದಿದ್ದು, ಇದೇ ರೀತಿ ಕಾಮಗಾರಿ ನಡೆದರೆ ಶಿರಾ, ಚಿಕ್ಕನಾಯಕನಹಳ್ಳಿ ಭಾಗಕ್ಕೆ ಭದ್ರ ನೀರು ಬರಲು 10 ವರ್ಷಗಳೇ ಬೇಕಾಗಬಹುದು, 160 ಕಿ.ಮೀ ಗಳ ನಾಲಾ ಕಾಮಗಾರಿಗೆ 2,420 ಎಕರೆ ಭೂಮಿ ಅಗತ್ಯವಿದ್ದು, 540 ಎಕರೆ ಭೂಮಿ ಹೊರತು ಪಡಿಸಿದರೆ ಉಳಿದ ಭೂಮಿ ವಶಪಡಿಸಿಕೊಳ್ಳಲು ಅಧಿಸೂಚನೆಯೇ ಹೊರಡಿಸಿಲ್ಲ ಎಂದರು.
ಕೃಷ್ಣಾ ಟ್ರುಬುನಲ್ ನ ಬಿ ಸ್ಕಿಂನಲ್ಲಿ ನಿಗದಿಪಡಿಸಲಾಗದ 29.90 ಟಿಎಂಸಿ ತರಲು ತುಂಗಾದಿಂದ ಭದ್ರಾಗೆ ನೀರು ತಂದು ಅಲ್ಲಿಂದ ವೇದಾವತಿ ನದಿ ಉಗಮ ಸ್ಥಾನ ಅಜ್ಜಂಪುರದ ಬಳಿ ಚಿತ್ರದುರ್ಗಕ್ಕೆ ಹೋಗುವ ಎಡದಂಡೆ ನಾಲೆ ಮತ್ತು ತುಮಕೂರಿಗೆ ಬರುವ ಬಲದಂಡೆ ನಾಲೆ ನಿರ್ಮಿಸುವ ಕಾಮಗಾರಿಯಲ್ಲಿ ಶೇ.60 ರಷ್ಟು ಕೆಲಸ ಕಳೆದ 12 ವರ್ಷಗಳಲ್ಲಿ ಮುಗಿದಿದೆ, ಇನ್ನೂ ಶೇ.40 ರಷ್ಟು ಕಾಮಗಾರಿ ಬಾಕಿ ಇದೆ, ಅಲ್ಲದೆ ಹೇಮಾವತಿ ನಾಲೆಯ 165 ಕಿ.ಮೀ ನಲ್ಲಿ ಸರಕಾರಿ ಜಾಗವಿರುವ 10 ಕಿ.ಮೀ ಗಳಲ್ಲಿ ಮಾತ್ರ ಕಾಮಗಾರಿ ನಡೆದಿದೆ. ಉಳಿದ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ಸರಕಾರ ತ್ವರಿತವಾಗಿ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.
ಸದರಿ ಯೋಜನೆ ಕೈಗೊಳ್ಳಲು ಇದುವರೆಗೂ 4500 ಕೋಟಿ ರೂ. ಗಳವರೆಗೆ ಹಣ ವ್ಯಯ ಮಾಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆದಿಲ್ಲ, ಈ ಹೀಗಿದ್ದರೂ ಸರಕಾರ ಪದೇ ಪದೆ ಟೆಂಡರ್‌ ಕರೆಯುವ ಮೂಲಕ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತಿದೆ ಎಂಬ ಅನುಮಾನ ಕಾಡತೊಡಗಿದೆ. ಸರಕಾರದ ಈ ನಡೆ ಗಮನಿಸಿದರೆ ಮಾಜಿ ಸಚಿವರಾದ ಹೆಚ್‌.ವಿಶ್ವನಾಥ್‌ ಅವರ ಹೇಳಿಕೆ ಸರಿ ಎನ್ನಿಸುತ್ತದೆ. ಕಮಿಷನ್‌ ಆಸೆಗೋಸ್ಕರ ಹಣ ಇಲ್ಲದಿದ್ದರೂ ಟೆಂಡರ್‌ ಕರೆದು ಗುತ್ತಿಗೆದಾರರಿಂದ ಕಿಕ್ ಬ್ಯಾಕ್‌ ಪಡೆಯಲಾಗುತ್ತಿದೆಯೇ ಎಂಬ ಗುಮಾನಿ ಜನರಲ್ಲಿ ಮೂಡಿದೆ ಎಂದು ಜಯಚಂದ್ರ ತಿಳಿಸಿದರು.
ತುಮಕೂರು ನಾಲೆಗೆ ಬೇಕಾದ 2950 ಎಕರೆ ಭೂಮಿಯಲ್ಲಿ ಇದುವರೆಗೂ 530 ಎಕರೆ ಭೂಮಿಗೆ ಮಾತ್ರ ಸರಕಾರ ಭೂ ಪರಿಹಾರ ನಿಗದಿಗೊಳಿಸಲಾಗಿದೆ. ಆದರೆ ಭೂಮಿಯ ಮಾಲೀಕರು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಭೂಮಿ ನೀಡುತ್ತಿಲ್ಲ, ಡಿಸಿ, ಎಸಿ ಕಚೇರಿಯಲ್ಲಿಯೇ ಕಡತಗಳು ಕೊಳೆಯುತ್ತಿವೆ, ಅಲ್ಲದೆ ತುಮಕೂರು ನಾಲೆಗೆ ನಿಗದಿಪಡಿಸಲಾಗಿದ್ದು 10 ಟಿಎಂಸಿಗೆ ಬದಲಾಗಿ 4 ಟಿಎಂಸಿ ನೀರು ಹರಿಸಲು ಮುಂದಾಗಿದ್ದು, ಇದರಿಂದ ಯಾವುದೇ ಪ್ರಯೋಜನವಾಗದು, ಸರಕಾರದ ಹಣವಷ್ಟೇ ಪೋಲಾಗಲಿದೆ, ಆದ್ದರಿಂದ ಸರಕಾರ ಇತ್ತ ಕಡೆ ಗಮನಹರಿಸಿ, ಮೂಲ ಯೋಜನೆಯಂತೆ 29.90 ಟಿಎಂಸಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮಧ್ಯ ಕರ್ನಾಟಕದ ಎಲ್ಲಾ ಜಿಲ್ಲೆಗಳ ಜನರೊಂದಿಗೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಟಿ.ಬಿ.ಜಯಚಂದ್ರ ಎಚ್ಚರಿಸಿದರು.
ಸದರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸುವಂತೆ 2015 ರಿಂದಲೂ ಕೇಂದ್ರ ಸರಕಾರದ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿ ದಾಖಲೆಗಳನ್ನು ಸಲ್ಲಿಸಲಾಗಿದೆ. ಅಲ್ಲದೆ ನಾಲೆಗೆ ಹೋಗುವ 77 ಎಕರೆ ಅರಣ್ಯ ಭೂಮಿಗೂ ಕ್ಲಿಯರೆನ್‌್ಸ ಪಡೆಯಲಾಗಿದೆ. ಆದರೆ ಕಾಮಗಾರಿ ಮಾತ್ರ ಆಮೆ ಗತಿಯಲ್ಲಿ ಸಾಗಿದೆ. ಅಡ್ವಾನ್‌್ಸ ಟೆಂಡರ್‌ ಹೆಸರಿನಲ್ಲಿ 953 ಕೋಟಿ ರೂ. ಗಳ ಟೆಂಡರ್‌ಗೆ 1053 ಕೋಟಿ ರೂ. ಗಳಿಗೆ ನಾಲೆಯ ಬದಲಿಗೆ ಪೈಪ್‌ಲೈನ್‌ ಮೂಲಕ ನೀರು ಹರಿಸಲು ಹೊರಟಿರುವುದು ಯಾರ ಉದ್ಧಾರಕ್ಕೆ ಎಂಬುದು ತಿಳಿಯುತ್ತಿಲ್ಲ, ಪೈಪ್‌ಲೈನ್‌ ಮೂಲಕ ನೀರು ತೆಗೆದುಕೊಂಡು ಹೋದರೆ, ಯೋಜನೆಯ ಮೂಲ ಉದ್ದೇಶದಂತೆ 367 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗದು, ಇದರಿಂದ ಯೋಜನೆಯ ಮೂಲ ಉದ್ದೇಶವೇ ಈಡೇರದು, ಹಾಗಾಗಿ ಸರಕಾರ ಮತ್ತು ಸಂಬಂಧಪಟ್ಟ ಮಂತ್ರಿಗಳು ಗಮನಹರಿಸಬೇಕೆಂದು ಟಿ.ಬಿ.ಜಯಚಂದ್ರ ಆಗ್ರಹಿಸಿದರು.

Get real time updates directly on you device, subscribe now.

Comments are closed.

error: Content is protected !!