ಪರಿಸರ ಉಳಿದರೆ ಮಾತ್ರ ಮನುಷ್ಯನ ಉಳಿವು: ಸ್ವಾಮೀಜಿ

284

Get real time updates directly on you device, subscribe now.

ತುಮಕೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತುಮಕೂರು ಹಾಗೂ ಸಿದ್ದಗಂಗಾ ಪದವಿ ಕಾಲೇಜು, ಶೇಷಾದ್ರಿಪುರಂ ಕಾಲೇಜು, ವಿದ್ಯೋದಯ ಕಾನೂನು ಕಾಲೇಜು ಸಹಯೋಗದಲ್ಲಿ ಪರಿಸರ ದಿನದ ಅಂಗವಾಗಿ ರಾಜ್ಯಾದ್ಯಂತ 10 ಲಕ್ಷ ಸಸಿ ನೆಡುವ ಸೀಡ್‌ ಬಾಲ್‌ ಹಾಕುವ ಅಭಿಯಾನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಸಿದ್ದಗಂಗಾ ಮಠ ಹತ್ತಿರ ಇರುವ ರಾಮದೇವರ ಬೆಟ್ಟದಲ್ಲಿ 15000 ಸೀಡ್ ಬಾಲ್‌ ಹಾಕುವ ಮೂಲಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರಸ್ತುತ ಓದಿದ ವಿದ್ಯಾವಂತರೇ ಪರಿಸರಕ್ಕೆ ಕೊಡುಗೆ ನೀಡುತ್ತಿಲ್ಲ, ನಾವು ಶಿಕ್ಷಣವನ್ನು ಉದ್ಯೋಗಕ್ಕಾಗಿ ಎಂದು ಭಾವಿಸಿದ್ದೇವೆ, ಬದುಕನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ಮರೆಯುತ್ತಿದ್ದೇವೆ. ನಮ್ಮ ಬದುಕಿಗೆ ಪೂರಕವಾಗುವಂತಹ ಶಿಕ್ಷಣ ಅಗತ್ಯವಾಗಿದೆ, ಪರಿಸರ ಉಳಿದರೆ ನಾವು ಉಳಿಯುತ್ತವೆ, ಏನೇ ಸಂಪತ್ತು ಇದ್ದರೂ ನಾವು ಬದುಕುವುದಕ್ಕೆ ಆಗುವುದಿಲ್ಲ, ಉತ್ತಮ ಪರಿಸರವಿದ್ದರೆ ಮಾತ್ರ ಉತ್ತಮ ಜೀವನ ಸಾಗಿಸಲು ಸಾಧ್ಯ, ಪರಿಸರ ದಿನದ ಅಂಗವಾಗಿ ಒಂದು ತಿಂಗಳ ಕಾಲ ಆಯೋಜಿಸಿರುವ ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಎಬಿವಿಪಿ ಸಂಘಟನೆಯು 10 ಲಕ್ಷದಷ್ಟು ಸಸಿ ಮತ್ತು ಸೀಡ್‌ ಬಾಲ್‌ ಹಾಕಿರುವುದು ಉತ್ತಮ ಕೆಲಸ, ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಸಿನೆಟ್ಟು ಪೋಷಣೆ ಮಾಡಬೇಕು, ಎಬಿವಿಪಿ ಸಂಘಟನೆ ಇಂತಹ ಕೆಲಸ ಮಾಡುವುತ್ತಿರುವುದು ಸಂತೋಷದಾಯಕವಾಗಿದೆ ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪರಿಸರ ಸಂರಕ್ಷಣೆಗಾಗಿ ಕಳೆದ ಹಲವು ವರ್ಷಗಳಿಂದ ವಿನೂತನ ಅಭಿಯಾನ, ಯೋಜನೆ ಹಾಗೂ ಕಾರ್ಯಕ್ರಮಗಳಿಂದ ಪರಿಸರ ಜಾಗೃತಿ ಹಾಗೂ ಸಸಿಗಳನ್ನ ನೆಡುವುದು ಅಷ್ಟೆ ಅಲ್ಲದೆ ಅವುಗಳನ್ನ ಪಾಲನೆ ಪೋಷಣೆ ಮಾಡುವಂತಹ ಮಹತ್ತರ ಕೆಲಸ ಮಾಡುತ್ತಾ ನಾಡನ್ನ ಹಚ್ಚ ಹಸಿರಾಗಿಸುವ ಸಂಕಲ್ಪದೊಂದಿದೆ ಪ್ರತಿಕ್ಷಣವೂ ಪ್ರಕೃತಿ ಮಾತೆಯ ಸೇವೆಗಾಗಿ ತೊಡಗಿಸಿಕೊಂಡಿದೆ ಎಂದರು.
ಎಬಿವಿಪಿಯ ವಿಭಾಗ ಪ್ರಮುಖ್‌ ಅಜಯ್‌ ಕುಮಾರ್‌ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಬರಿದಾದ ಪ್ರಕೃತಿ ಮಾತೆಯ ಒಡಲನ್ನ ಮತ್ತೆ ಹಸಿರಾಗಿಸಲೂ ನವನವೀನವಾಗಿ ಕಂಗೊಳಿಸುವಂತೆ ಮಾಡಲು ತಾಯಿ ಭಾರತ ಮಾತೆಯ ಕೊರಳು ಹಸಿರಿನಿಂದಲೇ ಶೃಂಗರಿಸಬೇಕೆಂಬ ಮಹತ್ವಾಕಾಂಕ್ಷೆಯನ್ನ ಹೊಂದಿ ಪರಿಸರ ದಿನದ ಈ ಶುಭ ಸಂದರ್ಭದಲ್ಲಿ ಮತ್ತೆ ಸಸಿಗಳನ್ನ ನೆಟ್ಟು ಪರಿಸರದ ರಕ್ಷಣೆಗೆ ಸಜ್ಜಾಗಿದೆ ಎಂದರು.
ಸಿದ್ದಗಂಗಾ ಪದವಿ ಕಾಲೇಜಿನ ಉಪನ್ಯಾಸಕ ಡಾ.ರಾಮಲಿಂಗರೆಡ್ಡಿ ಮಾತನಾಡಿ, ಕೊರೊನಾ ಮಹಾಮಾರಿಯ ಈ ವಿಷಮ ಪರಿಸ್ಥಿತಿಯಲ್ಲಿ ಎಲ್ಲರೂ ನಿಮ್ಮ ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನ ನೆಟ್ಟು ಪಾಲನೆ, ಪೋಷಣೆ ಮಾಡಿ ಇಂದಿನ ಸಮಾಜಕ್ಕೂ ಹಾಗೂ ಮುಂದಿನ ಪಿಳಿಗೆಗೂ ಅನುಕೂಲವಾಗುವ ಹಾಗೆ ಸುಂದರ ಪರಿಸರ ನಿರ್ಮಾಣ ಮಾಡೋಣ, ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ, ನಾಡನ್ನ ಹಸಿರಾಗಿಸುವ ಸಂಕಲ್ಪತೊಟ್ಟು ಸಸಿಗಳನ್ನ ನೆಡೋಣ ಎಂದರು.
ಈ ಸಂದರ್ಭದಲ್ಲಿ ಸಿದ್ದಗಂಗಾ ಆಸ್ಪತ್ರೆ ಮುಖ್ಯ ವ್ಯವಸ್ಥಾಪಕ ಡಾ.ಪರಮೇಶ, ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ಅಧ್ಯಾಪಕರಾದ ಪ್ರದೀಪ್‌, ಕಿಶೋರ, ಮನೋಹರ, ಜಯಪ್ರಕಾಶ್‌, ಮಧ್ವರಾಜ್‌, ಕಾರ್ಯಕರ್ತರಾದ ರಾಧಾಕೃಷ್ಣ, ಚೈತ್ರಾ, ಸುಷ್ಮಾ, ರಘು, ಕಾರ್ತಿಕ, ಶ್ರೇಯಾ, ಸೌಂದರ್ಯ, ಹೇಮಂತ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!