ಅಪ್ರಾಪ್ತೆ ಮೇಲೆ ಅತ್ಯಾಚಾರ- ಪ್ರಕರಣ ದಾಖಲು

265

Get real time updates directly on you device, subscribe now.

ಕುಣಿಗಲ್‌: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಅದನ್ನು ಚಿತ್ರೀಕರಿಸಿಕೊಂಡು ಬೆದರಿಕೆ ಹಾಕುತ್ತಿದ್ದ ಯುವಕನ ಮೇಲೆ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿರುವ ಘಟನೆ ಕುಣಿಗಲ್‌ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಈಶ್ವರ (ಹೆಸರು ಬದಲಾಯಿಸಿದೆ) ಎಂಬಾತ ತನ್ನ ಸಂಬಂಧಿಕರ ಮನೆಗೆ ಹೋಗಿ ಬಂದು ಮಾಡುತ್ತಿದ್ದ, ಅವರ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಮನೆಯಲ್ಲಿ ಯಾರು ಇಲ್ಲದ ವೇಳೆ ಅತ್ಯಾಚಾರ ಎಸಗಿ ಆ ಕೃತ್ಯವನ್ನು ವೀಡಿಯೋ ಮಾಡಿಕೊಂಡು ಅಪ್ರಾಪ್ತೆಯನ್ನು ಹೆದರಿಸುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಅಪ್ರಾಪ್ತೆಯನ್ನು ಮದುವೆಯಾಗಲು ಬೇರೆ ಸಂಬಂಧಿಕರ ಮನೆಗೆ ಬಂದಾಗ ಪೋಷಕರು ಬಾಲಕಿ ಇನ್ನೂ ಅಪ್ರಾಪ್ತೆಯಾಗಿರುವ ಕಾರಣ 5 ವರ್ಷದ ನಂತರ ಮದುವೆ ಮಾಡುವುದಾಗಿ ತಿಳಿಸಿದರು. ಆದರೆ ಮದುವೆಯಾಗಲು ಬಂದಿದ್ದ ಗಂಡಿಗೆ ವೀಡಿಯೋವನ್ನು ಅತ್ಯಾಚಾರ ಎಸಗಿದ ವ್ಯಕ್ತಿ ಕಳಿಸಿ ನಾನು ಆಕೆಯನ್ನು ಮದುವೆಯಾಗುವುದು, ತಂಟೆಗೆ ಬರಬೇಡಿ ಎಂದು ಎಚ್ಚರಿಸಿದನೆಂದು ಹೇಳಲಾಗಿದೆ. ಅದರಿಂದ ಗಲಿಬಿಲಿಗೊಂಡ ಸಂಬಂಧಿಕರು ಕೂಡಲೇ ವಿಷಯವನ್ನು ಅಪ್ರಾಪ್ತ ಬಾಲಕಿ ಪೋಷಕರ ಗಮನಕ್ಕೆ ತಂದಿದ್ದು, ಪೋಷಕರು ಆತಂಕಗೊಂಡು ಅತ್ಯಾಚಾರ ಎಸಗಿದ್ದಲ್ಲದೆ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪೋಸ್ಕೊ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!