ಗುಬ್ಬಿ: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದ ಕೂಡಲೆ ತಪ್ಪು ತಿಳಿಯುವ ಅವಶ್ಯಕತೆ ಇಲ್ಲ, ಅವರ ತಾಲೂಕಿನ ಸಮಸ್ಯೆ ಹಾಗೂ ಅಭಿವೃದ್ಧಿ ವಿಚಾರದ ಬಗ್ಗೆ ಮಾತುಕತೆ ಮಾಡಿದ್ದಾರೆ ಅಷ್ಟೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸ್ಪಷ್ಟ ಪಡಿಸಿದರು.
ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಬೆಲವತ್ತ ಗ್ರಾಮದಲ್ಲಿ ಮಂಗಳವಾರ 22 ಲಕ್ಷ ವೆಚ್ಚದ ಸರಕಾರಿ ಶಾಲಾ ಕಟ್ಟಡ ಕಾಮಾಗಾರಿಯ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಕುಮಾರಸ್ವಾಮಿಯವರು ಸಹ ಶಾಸಕರು ಅವರ ಕ್ಷೇತ್ರಕ್ಕೆ ಬೇಕಾದ ಸೌಲಭ್ಯಗಳ ಬಗ್ಗೆ ಮಾತನಾಡಿದ್ದಾರೆ, ಅದರಲ್ಲಿ ಬೇರೆ ಯಾವುದೇ ವಿಚಾರವಿಲ್ಲ, ನಮ್ಮ ಕ್ಷೇತ್ರಕ್ಕೆ ಬೇಕಾಗಿರುವ ವಿಚಾರದ ಬಗ್ಗೆ ನಾವು ಸಹ ರಾಜ್ಯದ ಮುಖ್ಯಮಂತ್ರಿಯವರ ಜೊತೆ ಮಾತನಾಡುವುದು ಸಾಮಾನ್ಯ, ಹಾಗಾಗಿ ಇದಕ್ಕೆ ಬೇರೆ ರೀತಿಯ ಕಲ್ಪನೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ನಾನು ಸಚಿವನಾಗಿದ್ದ ಕಾಲದಲ್ಲಿ ಸಾಕಷ್ಟು ಅನುದಾನವನ್ನು ನಮ್ಮ ತಾಲೂಕಿಗೆ ತರಲಾಗಿತ್ತು, ಕೋವಿಡ್ ಹಿನ್ನಲೆಯಲ್ಲಿ ಅನುದಾನ ಬಿಡುಗಡೆ ಮಾಡಿರಲಿಲ್ಲ, ಈಗ ಬಿಡುಗಡೆ ಮಾಡಲಾಗುತ್ತಿದ್ದು, ರಸ್ತೆ ಕಾಮಾಗಾರಿ ಹಾಗೂ ಶಾಲಾ ಕಟ್ಟಡ ನವೀಕರಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಇನ್ನೂ ಜಿಲ್ಲಾ ಪಂಚಾಯತಿ ಚುನಾವಣೆಯ ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಆಕಾಂಕ್ಷಿಗಳು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ, ಆದರೂ ಬಿಜೆಪಿ ಸರಕಾರ ಅವರಿಗೆ ಬೇಕಾದ ರೀತಿಯಲ್ಲಿ ಮೀಸಲಾತಿ ಮಾಡಿರುವುದನ್ನು ಖಂಡಿಸುತ್ತೇನೆ, ಈಗಾಗಲೇ ಬಂದಿರುವ ಮೀಸಲಾತಿಯನ್ನೆ ಮತ್ತೆ ಹಲವು ಭಾಗದಲ್ಲಿ ನೀಡಲಾಗಿದೆ, ಆಡಳಿತ ಸರಕಾರ ಅವರಿಗೆ ಹೇಗೆ ಬೇಕೋ ಹಾಗೆ ಮಾಡಿಕೊಂಡಿದ್ದಾರೆ, ನಾವು ಕಾನೂನು ಹೋರಾಟ ಮಾಡಲು ಸಿದ್ಧವಿಲ್ಲ, ಮಾಡಿದರೆ ಚುನಾವಣೆ ನಿಲ್ಲುತ್ತದೆ, ಇದರಿಂದ ಮತ್ತೆ ಸಮಸ್ಯೆ ಆಗುತ್ತದೆ, ಆದರೆ ಜನರ ಆಶೀರ್ವಾದದಿಂದ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ, ಇನ್ನೂ ಲಸಿಕೆ ವಿಚಾರದಲ್ಲಿ ಸಾಕಷ್ಟು ಸುಳ್ಳುಗಳನ್ನು ಸರಕಾರ ತಿಳಿಸುತ್ತಿದೆ, ಲಸಿಕೆ ಇಲ್ಲದೆ ಪ್ರತಿದಿನ ಸಾಲಿನಲ್ಲಿ ನಿಂತು ಸಾರ್ವಜನಿಕರು ಹೋಗುತ್ತಿರುವುದು ಗಮನಕ್ಕೆ ಬಂದಿದ್ದು ಸರಕಾರ ಪ್ರತಿಯೊಬ್ಬರಿಗೂ ಸಹ ಲಸಿಕೆ ಸೀಗುವಂತೆ ಮಾಡಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಕಲಾ, ಉಪಾಧ್ಯಕ್ಷ ಜಯಮ್ಮ ಚನ್ನಿಗರಾಮಯ್ಯ, ಸದಸ್ಯರಾದ ವೆಂಕಟೇಶ್, ಲತಾ ದಯಾನಂದ್, ಆನಂದ್, ಪ್ರದೀಪ್ ಕುಮಾರ್, ವಿಷಕಂಠಯ್ಯ, ಮುಖಂಡರಾದ ಲಕ್ಕೆ ಗೌಡ, ವಿ.ಟಿ.ಶಿವಕುಮಾರ್, ಸುರೇಶ್, ಕೊಪ್ಪ ದೇವರಾಜು, ಅಭಿವೃದ್ಧಿ ಅಧಿಕಾರಿ ದೇವಿಕಾ ಇನ್ನಿತರರು ಹಾಜರಿದ್ದರು.
ಸಿಎಂ- ಹೆಚ್‌ಡಿಕೆ ಭೇಟಿಗೆ ಬೇರೆ ಅರ್ಥ ಬೇಡ: ಶ್ರೀನಿವಾಸ್
Get real time updates directly on you device, subscribe now.
Next Post
Comments are closed.