ಬಾಬೂಜಿ ಆದರ್ಶ ಪಾಲನೆಗೆ ಕರೆ

133

Get real time updates directly on you device, subscribe now.

ತುಮಕೂರು: ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವನದುದ್ದಕ್ಕೂ ಹೋರಾಡಿದ ಬಾಬು ಜಗಜೀವನ್ರಾಂ ಅವರ ಆದರ್ಶ ಗುಣಗಳು ಇಂದಿನ ನಾಯಕರಿಗೆ ಅವಶ್ಯಕ ಎಂದು ನಗರ ಶಾಸಕ ಜ್ಯೋತಿಗಣೇಶ್ ತಿಳಿಸಿದರು.
ನಗರದಲ್ಲಿ ಶಾಸಕರ ಕಚೇರಿಯಲ್ಲಿ ನಡೆದ ಬಾಬು ಜಗಜೀವನ್ರಾಂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರಾಗಿದ್ದಾಗ ಸ್ವಾತಂತ್ರ್ಯಕ್ಕಾಗಿ, ಸ್ವಾತಂತ್ರ್ಯ ಪೂರ್ವದಲ್ಲಿಯೂ ಪಾರ್ಲಿಮೆಂಟ್ ಸದಸ್ಯರು, ಸ್ವಾತಂತ್ರ್ಯ ಬಂದ ನಂತರ ಸಂಸದರಾಗಿ, ಸಚಿವರಾಗಿ ಸಂವಿಧಾನವನ್ನು ಅಚ್ಚುಕಟ್ಟಾಗಿ ಜಾರಿಗೊಳಿಸುವಲ್ಲಿ ಬಾಬು ಜಗಜೀವನ್ರಾಂ ಅವರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಭಾರತ ಸ್ವಾತಂತ್ರ್ಯದ ಮೊದಲ ಸಚಿವ ಸಂಪುಟದ ಸದಸ್ಯರಾಗಿದ್ದು, 1986 ರ ಜುಲೈ 6 ರ ಅವರು ದೈವಾಧಿನರಾಗುವವರೆಗೂ ಒಂದಲ್ಲ ಒಂದು ರೀತಿ ಸಂಸತ್ತಿನಲ್ಲಿ ಕಾರ್ಯ ನಿರ್ವಹಿಸಿ ಭಾರತದ ಸಂಸತ್ ಗೆ ತನ್ನದೆ ಆದ ಹೆಗ್ಗಳಿಕೆ ನೀಡಿದವರು ಬಾಬು ಜಗಜೀವನ್ರಾಂ, ಬಾಬು ಜೀ ಎಂದೇ ಖ್ಯಾತರಾಗಿದ್ದ ಅವರು ಹಸಿರು ಕ್ರಾಂತಿ ಮಾಡುವ ಮೂಲಕ ಆಹಾರದಲ್ಲಿ ದೇಶ ಸ್ವಾಯತ್ತೆ ಸಾಧಿಸಲು ಅವರ ಮುಂದಾಲೋಚನೆಯೇ ಕಾರಣ, ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಅವರ ಜೀವನ ಇಂದಿನ ನಾಯಕರಿಗೆ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ವರದಯ್ಯ, ಹನುಮಂತರಾಜು, ಆಶ್ರಯ ಕಮಿಟಿ ಸದಸ್ಯ ಸಿದ್ದಗಂಗಯ್ಯ, ಬಿಜೆಪಿ ನಗರಾಧ್ಯಕ್ಷ ಟಿ.ಹೆಚ್.ಹನುಮಂತರಾಜು, ಪಾಲಿಕೆ ಮಾಜಿ ಉಪಮೇಯರ್ ಹನುಮಂತರಾಯಪ್ಪ, ಕಿರಣ್ಕುಮಾರ್, ಎನ್.ರಾಜಣ್ಣ, ಮುಖಂಡರಾದ ಮನೋಹರ್ಗೌಡ, ಇಂದ್ರಕುಮಾರ್, ಮಹೇಶ್ಬಾಬು, ಅಣೆತೋಟ ಶ್ರೀನಿವಾಸ್ ಇದ್ದರು.

Get real time updates directly on you device, subscribe now.

Comments are closed.

error: Content is protected !!