ಗಾಯಾಳುಗಳಿಗೆ ನೆರವಾಗಿ ಮಾನವೀಯತೆ ಮೆರೆದ ಡಿಕೆಶಿ

132

Get real time updates directly on you device, subscribe now.

ಕುಣಿಗಲ್‌: ಬೈಕ್‌ ಅಪಘಾತದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಉಪಚರಿಸಿ ಅವರಿಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಧನಸಹಾಯ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಾಸಕ ಡಾ.ರಂಗನಾಥ್‌ ಮಾನವೀಯತೆ ಮರೆದಿದ್ದಾರೆ.
ಗುರುವಾರ ಪಟ್ಟಣದಲ್ಲಿ ಡಿಕೆಎಸ್‌ ಟ್ರಸ್ಟ್ ವತಿಯಿಂದ ಎರಡು ಸಾವಿರ ಲಸಿಕೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಕೆಪಿಸಿಸಿ ಅಧ್ಯಕ್ಷರು, ಶಾಸಕರು ತೆರಳಿದ್ದರು, ಈ ವೇಳೆ ಪಟ್ಟಣದ ಹೊರವಲಯದ ಮದ್ದೂರು ರಸ್ತೆಯ ರಾಜ್ಯಹೆದ್ದಾರಿ 33ರ ಚಿಕ್ಕಕೆರೆ ಏರಿಯ ಮೇಲೆ ರಸ್ತೆಯಲ್ಲಿ ಹುಡುಗನೊಬ್ಬ ಅಡ್ಡಬಂದ ಕಾರಣ ಆಯತಪ್ಪಿದ ಬೈಕ್‌ ಬಿದ್ದು ದಾಸನಪುರಕ್ಕೆ ತೆರಳುತ್ತಿದ್ದ ಅಮ್ಮ ರಂಗಮ್ಮ, ಮಗ ಶ್ರೀನಿವಾಸ್‌ ಗಾಯಗೊಂಡು ರಸ್ತೆಯಲ್ಲೆ ಬಿದ್ದಿದ್ದರು.
ಈ ಮಾರ್ಗವಾಗಿ ಆಗಮಿಸಿದ ಡಿ.ಕೆ.ಶಿವಕುಮಾರ್‌ ಹಾಗೂ ವೈದ್ಯರಾಗಿರುವ ಶಾಸಕ ಡಾ.ರಂಗನಾಥ್‌ ಕೂಡಲೆ ತಮ್ಮ ವಾಹನ ನಿಲ್ಲಿಸಿ ರಸ್ತೆಯಲ್ಲಿದ್ದ ಮಹಿಳೆಯ ಆರೋಗ್ಯ ವಿಚಾರಿಸಿ ಆಕೆಗೆ ತಮ್ಮ ವಾಹನದಲ್ಲಿದ್ದ ನೀರು ತರಿಸಿಕೊಟ್ಟು ಶಿವಕುಮಾರ್‌ ಉಪಚರಿಸಿದರೆ, ಬೈಕ್‌ ಸವಾರನ ತಲೆಗೆ ಗಾಯವಾಗಿ ರಕ್ತ ಹೊರಬಾರದಂತೆ ವೈದ್ಯಶಾಸಕ ಡಾ.ರಂಗನಾಥ್‌ ತಲೆ ಒತ್ತಿ ಹಿಡಿದು ರಕ್ತನಿಲ್ಲಿಸಲು ಶ್ರಮಿಸಿದರು. ಈ ವೇಳೆ ತುರ್ತು ಚಿಕಿತ್ಸೆಗೆ ಕ್ರಮಕೈಗೊಂಡು ಸ್ಥಳೀಯ ವಾಹನ ವ್ಯವಸ್ಥೆಗೊಳಿಸಿ ಗಾಯಾಳುಗಳಿಗೆ ಅಲ್ಪಮೊತ್ತದ ಧನಸಹಾಯ ಮಾಡಿ, ಚಿಕಿತ್ಸೆಗೆ ಕುಣಿಗಲ್‌ ಆಸ್ಪತ್ರೆಗೆ ಕಳಿಸುವ ಮೂಲಕ ಮಾನವೀಯತೆ ಮೆರೆದರು.

Get real time updates directly on you device, subscribe now.

Comments are closed.

error: Content is protected !!