ಶಿರಾ: ಖ್ಯಾತ ನಿಮಾರ್ಪಕ ರಾಕ್ ಲೈನ್ ವೆಂಕಟೇಶ್ ಅವರು ಅವಹೇಳನಕಾರಿ ಹೇಳಿಕೆ ನೀಡುವುದಲ್ಲದೆ ಕೋಮು ಗಲಭೆಗೆ ಪ್ರಚೋಧನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಮುಖಂಡ ಲಿಂಗದಹಳ್ಳಿ ಚೇತನ್ ಕುಮಾರ್ ಅವರು ಶಿರಾ ಉಪ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಖ್ಯಾತ ನಿಮಾರ್ಪಕ ರಾಕ್ ಲೈನ್ ವೆಂಕಟೇಶ್ ಅವರು ಅವಹೇಳನಕಾರಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, ಮಂಡ್ಯ ಜಿಲ್ಲೆ ಹಾಗೂ ರಾಜಕಾರಣಕ್ಕೆ ಸಂಬಂಧಿಸದ ವ್ಯಕ್ತಿಯಾಗಿದ್ದು ಪದೇ ಪದೆ ಎಚ್‌ಡಿಕೆ ವಿರುದ್ಧ ತೇಜೋವಧೆ ಮಾಡುವ ಮಾತನಾಡಿ ಮಾಧ್ಯಮದ ಮುಂದೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಹೇಳಿಕೆ ಎಚ್‌ಡಿಕೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಈ ಕೂಡಲೇ ಭೇಷರತ್ ಕ್ಷಮೆಯಾಚಿಸಬೇಕು, ಇಲ್ಲವಾದರೆ ಕಾನೂನು ಹೋರಾಟಕ್ಕೆ ಸದಾ ಸಿದ್ಧನಿರುತ್ತೇನೆ ಎಂದು ತಿಳಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಜನತೆಯ ಕಷ್ಟ ಅರಿತವರು. ಸಾಕಷ್ಟು ಅನುಭವ ಇರುವವರು, ನಿರ್ಮಾಪಕನ ಗತ್ತಿನಲ್ಲಿ ಓರ್ವ ಮಾಜಿ ಮುಖ್ಯಮಂತ್ರಿಯನ್ನು ಅಗೌರವ ತೋರುವ ರಾಕ್‌ಲೈನ್ ವೆಂಕಟೇಶ್ ಅನಗತ್ಯವಾಗಿ ಮೂಗು ತೂರಿಸುವುದನ್ನು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರಣ್ಣನ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಸಿಎಂ ಎನಿಸಿದ್ದಾರೆ, ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಮತ್ತು ಮಾಡಿದ ಅಭಿವೃದ್ಧಿ ಕಾರ್ಯಗಳೇ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದೆ, ಅತ್ಯುತ್ತಮ ಯೋಜನೆಗಳನ್ನು ರಾಜ್ಯದಲ್ಲಿ ಮೊದಲಿಗೆ ಜಾರಿಗೆ ತಂದವರು ಹೆಚ್‌ಡಿಕೆ, ಬಡವರು, ರೈತರು, ದೀನ ದಲಿತರ ಕಣ್ಣೀರೊರೆಸಿದ ಕುಮಾರಣ್ಣನ ಬಗ್ಗೆ ಮಾತನಾಡುವಾಗ ಎಚ್ಚರ ಇರಬೇಕು, ಇದು ರಾಕ್‌ಲೈನ್ ವೆಂಕಟೇಶ್ ಅರ್ಥ ಮಾಡಿಕೊಳ್ಳಬೇಕು.
-ಲಿಂಗದಹಳ್ಳಿ ಚೇತನ್‌ಕುಮಾರ್, ಜೆಡಿಎಸ್ ಮುಖಂಡ
Comments are closed.