ಪರೀಕ್ಷೆ ಬರೆಸುವುದಾಗಿ ಹಣ ಪಡೆದ ಶಿಕ್ಷಕ- ಕ್ರಮಕ್ಕೆ ಆಗ್ರಹ

199

Get real time updates directly on you device, subscribe now.

ಕುಣಿಗಲ್‌: ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯನ್ನು ಖಾಸಗಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೂರಿಸುತ್ತೇನೆಂದು ಹೇಳಿ ಸಾವಿರಾರು ರೂ. ಹಣ ಪಡೆದು ವಂಚಿಸಿದ್ದಾರೆಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪಟ್ಟಣದ ವಾಸಿ ರವಿಗೌಡ ಎಂಬಾತ ತಮ್ಮ ಮಗಳನ್ನು ಖಾಸಗಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಟ್ಟಿಸಲು ಮಹಾತ್ಮ ಗಾಂಧಿ ಶಾಲೆಗೆ ಹೋದಾಗ ಅಲ್ಲಿದ್ದ ಶಿಕ್ಷಕ ಅಜೀಜ್‌ ಉಲ್ಲಾಖಾನ್‌ ಇವರು ನಾನೇ ಖಾಸಗಿಯಾಗಿ ಕಟ್ಟಿಸುವ ಅಧಿಕಾರಿ ಎಂದು ಹೇಳಿ 1,700 ರೂ. ನಗದು ಪಡೆದು, ನಿಮ್ಮ ಮೊಬೈಲ್ ಗೆ ಮೆಸೇಜ್‌ ಬರುತ್ತದೆ ಎಂದು ಹೇಳಿ ಕಳಿಸಿದ್ದರು. ಆದರೆ ಯಾವುದೇ ಮೆಸೇಜ್‌ ಬಾರದ ಬಗ್ಗೆ ಕೇಳಿದಾಗ ಏನೋ ತಪ್ಪಾಗಿ ಕ್ಯಾನ್ಸಲ್‌ ಆಗಿದೆ, 9,000 ರೂ. ಕೊಡಿ, ಬೋರ್ಡಿಗೆ ಹೋಗಿ ನಿಮ್ಮ ಮಗಳು ಪರೀಕ್ಷೆ ಬರೆಯುವಂತೆ ಮಾಡುತ್ತೇನೆ ಎಂದು ಹೇಳಿ ಒಂಭತ್ತು ಸಾವಿರ ಪಡೆದರು. ಪರೀಕ್ಷಾ ದಿನ ಹತ್ತಿರ ಬಂದರೂ ಪ್ರವೇಶ ಪತ್ರ ಕೊಡಿಸಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ನಮಗೆ ಬೆದರಿಕೆ ಹಾಕಿದ್ದಾರೆ. ದಯಮಾಡಿ ನಮಗೆ ಆಗಿರುವ ಅನ್ಯಾಯ ಸರಿಪಡಿಸಿ ನನ್ನ ಮಗಳಿಗೆ ನ್ಯಾಯ ಕೊಡಿಸಬೇಕೆಂದು ಹಾಗೂ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!