ಹುಳಿಯಾರು: ಒಂದು ಜತೆ ಓಲೆಗಾಗಿ ವೃದ್ಧೆಯನ್ನೇ ಕೊಲೆ ಮಾಡಿದ ಘಟನೆ ಹುಳಿಯಾರು ಹೋಬಳಿಯ ಯಳನಡು ಗ್ರಾಮದಲ್ಲಿ ಬೆಳಗಿನ ಜಾವ ನಡೆದಿದೆ.
ಯಳನಡು ಗ್ರಾಮದ ಲಲಿತಮ್ಮ (65) ಕೊಲೆಯಾದವರು. ತನ್ನ ಬುದ್ಧಿಮಾಂದ್ಯ 45 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದರು. ಮಗ ಮನೆಯಲ್ಲಿ ಇರುವಾಗಲೇ ಅಜ್ಜಿಯನ್ನು ಕೊಲೆ ಮಾಡಿ ಒಡವೆ ಕಿತ್ತು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಎಸ್‌ಪಿ ರಾಹುಲ್‌ಕುಮಾರ್ ಶಹಪುರವಾಡ್, ಎಎಸ್‌ಪಿ ಉದೇಶ್‌ಕುಮಾರ್, ಡಿವೈಎಸ್‌ಪಿ ಚಂದನ್‌ಕುಮಾರ್, ಸಿಪಿಐ ನಿರ್ಮಲಾ, ಪಿಎಸ್‌ಐ ಕೆ.ಟಿ.ರಮೇಶ್ ಭೇಟಿ ನೀಡಿದ್ದರು. ಶ್ವಾನದಳ ಹಾಗೂ ಬೆರಳು ಮುದ್ರೆ ಘಟಕ ದಳದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿವಿ ಓಲೆಗಾಗಿ ವೃದ್ಧೆ ಹತ್ಯೆ
Get real time updates directly on you device, subscribe now.
Next Post
Comments are closed.