ಕೊರೊನಾ ವಾರಿಯರ್ಸ್‌ ಸೇವೆ ಅನನ್ಯ: ವೀರಭದ್ರಯ್ಯ

202

Get real time updates directly on you device, subscribe now.

ಮಧುಗಿರಿ: ದೇಶ ಕಾಯುವ ಸೈನಿಕರಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ದೇಶವನ್ನು ಕೊರೊನಾ ವೈರೆಸ್‌ನಿಂದ ಕಾಪಾಡುತ್ತಿದ್ದಾರೆಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಆಹಾರದ ಕಿಟ್‌ ವಿತರಿಸಿ ಮಾತನಾಡಿ, ಸೈನಿಕರು ಶತ್ರುಗಳ ಕಾಟದಿಂದ ದೇಶ ಕಾಯುತ್ತಿದ್ದಾರೆ, ಕೋವಿಡ್‌ ವಾರಿಯರ್ಸ್ ಗಳು ಜೀವದ ಹಂಗು ತೊರೆದು ಕೊರೊನಾ ಮಾರಿಯಿಂದ ಪ್ರಜೆಗಳನ್ನು ರಕ್ಷಿಸುತ್ತಿದ್ದು ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. 2ನೇ ಅಲೆಯು ಭಾರಿ ಅಪಾಯ ತಂದಿದ್ದು, 3ನೇ ಅಲೆಯ ಬಗ್ಗೆ ಅಗತ್ಯ ಆರೋಗ್ಯ ಸೇವೆಗಳನ್ನು ಮೇಲ್ದರ್ಜೆಗೆ ಏರಿಸಿಕೊಂಡು ಸನ್ನದ್ಧವಾಗಬೇಕಿದೆ. ನಮ್ಮ ವಾರಿಯರ್ಸ್ ಗಳ ಶ್ರದ್ಧೆ ಹಾಗೂ ಪ್ರಾಮಾಣಿಕತೆಯು ನಮಗೆ 3ನೇ ಅಲೆ ಎದುರಿಸಲು ಆತ್ಮಸ್ಥೈರ್ಯ ತಂದಿದ್ದು, ಕಡ್ಡಾಯವಾಗಿ ಲಸಿಕೆ ಪಡೆದು ಎಚ್ಚರಿಕೆಯಿಂದ ಜಾಗರೂಕರಾಗಿರಬೇಕು, ಅನ್ನಪೂರ್ಣ ಸ್ವರೂಪರಾದ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿದ್ದು, ವೇತನ ಹೆಚ್ಚಳ ಹಾಗೂ ಸರ್ಕಾರಿ ನೌಕರರೆಂದು ಪರಿಗಣಿಸುವ ನಿಮ್ಮ ಬೇಡಿಕೆಗೆ ಸದನದ ಹೊರಗೆ ಹಾಗೂ ಒಳಗೆ ಧ್ವನಿಯಾಗುತ್ತೇನೆ. ಇದಕ್ಕೆ ಕುಮಾರಸ್ವಾಮಿ ಕೂಡ ಜೊತೆಯಾಗಲಿದ್ದು, ಜೆಡಿಎಸ್‌ ಪಕ್ಷವೂ ಜೊತೆಗಿರಲಿದೆ, ಈ ಕಿಟ್‌ ಮಾನವೀಯತೆಯ ನೆಲೆ ಮೇಲೆ ನೀಡಿದ್ದು, ನಿಮ್ಮ ಸಹಕಾರ ಸದಾ ಇರಲಿ ಎಂದರು.
ಹೆಣ್ಣು ಮಕ್ಕಳ ಆಶೀರ್ವಾದದಿಂದ ಶಾಸಕನಾಗಿದ್ದು, ಅದನ್ನು ಮರೆಯಲಾರೆ, ಮುಂದೆಯೂ ಅವರಿಗೆ ಸಹೋದರನಾಗಿ ಸದಾ ಜೊತೆಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.
ತಹಶೀಲ್ದಾರ್‌ ವೈ.ರವಿ ಮಾತನಾಡಿ ಮೊದಲ ಹಾಗೂ 2ನೇ ಅಲೆಯಲ್ಲಿ ಶಾಸಕರು ಕೋವಿಡ್‌ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ಹಾಗೂ ಸ್ವಾತಂತ್ರ ನೀಡಿದ್ದು, ಗ್ರಾಪಂ ಮಟ್ಟದಲ್ಲಿ ಕೆಲಸ ಮಾಡುತ್ತಾ ನಮಗೆಲ್ಲ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ವಾರಿಯರ್ಸ್‌ಗಳು ಸಹ ತಾಲೂಕು ಆಡಳಿತಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದು, ನಿಮಗೆಲ್ಲ ಧನ್ಯವಾದಗಳು ಎಂದರು.
ಮಹಿಳಾ ಮುಖಂಡರಾದ ರಾಧಮ್ಮ ಮಾತನಾಡಿ ಮಹಿಳೆಯರ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವ ನಮ್ಮ ಶಾಸಕರು ನಮ್ಮ ಹೆಮ್ಮೆ, ಗ್ರಾಪಂ ಮಟ್ಟದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ವಸ್ತುಗಳನ್ನು ನೀಡಿದ್ದು ಮಹಿಳೆಯರಿಗೆ ಶಕ್ತಿಯಾಗಿದ್ದಾರೆ ಎಂದರು.
ಪುರಸಭಾ ಸದಸ್ಯ ಜಗಣ್ಣ ಮಾತನಾಡಿ ಕ್ಷೇತ್ರದ ಮಹಿಳೆಯರು ನೀಡಿದ ಮತಭಿಕ್ಷೆಯಿಂದ ವೀರಭದ್ರಯ್ಯನವರು ಶಾಸಕರಾಗಿದ್ದಾರೆ. ಬಡತನ ಅನುಭವಿಸಿ ಬದುಕು ಕಟ್ಟಿಕೊಂಡ ಹೃದಯವಂತ ನಮ್ಮ ಶಾಸಕರು, ಪ್ರಚಾರ ಪಡೆದು ಕೆಲಸ ಮಾಡದೆ ಈಗಾಗಲೆ ಸಾವಿರಾರು ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡಿರುವ ಇವರು ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಕೈಗಾರಿಕಾ ವಲಯ ತಂದಿದ್ದು, ಇದರಿಂದ ಉದ್ಯೋಗಾವಕಾಶ ಹೆಚ್ಚಾಗಲಿದೆ ಎಂದರು.
ಮುಖಂಡ ತುಂಗೋಟಿ ರಾಮಣ್ಣ ಮಾತನಾಡಿ ಕನಿಷ್ಟ ವೇತನ ಪಡೆದು ಸರ್ಕಾರಿ ನೌಕಕರೆಂದು ಪರಿಗಣಿಸುವಂತೆ ಒತ್ತಾಯಿಸಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಬೇಡಿಕೆ ನ್ಯಾಯಯುತವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೀಘ್ರವಾಗಿ ಬೇಡಿಕೆ ಈಡೇರಿಸಬೇಕು. ಅದಕ್ಕಾಗಿ ಜೆಡಿಎಸ್‌ ಪಕ್ಷ ನಿಮ್ಮ ಜೊತೆಗಿರಲಿದೆ ಎಂದರು.
ಸಿಡಿಪಿಓ ಅನಿತಾ ಮಾತನಾಡಿ ಕೊರೊನಾ ಸಂಕಷ್ಟದಲ್ಲಿ ಕ್ಷೇತ್ರದ 680 ಕಾರ್ಯಕರ್ತರಿಗೂ ದಿನಸಿ ಕಿಟ್‌ ನೀಡುತ್ತಿರುವುದು ಶ್ಲಾಘನೀಯ. ಶಾಸಕರ ಈ ಸೇವೆಗೆ ಇಲಾಖೆಯ ಪರವಾಗಿ ಧನ್ಯವಾದಗಳು ಎಂದರು.
ಇದೇ ಸಮಯದಲ್ಲಿ ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳಿಗೆ ಪೌಷ್ಟಿಕ ಚಿಕ್ಕಿ ಆಹಾರವನ್ನು ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ.ಎಲ್‌.ಗಂಗರಾಜು, ನಾರಾಯಣ್‌, ನರಸಿಂಹಮೂರ್ತಿ, ಟಿಹೆಚ್‌ಓ ಡಾ.ರಮೇಶ್‌ಬಾಬು, ಸಿಡಿಪಿಓ ಅನಿತಾ, ಸಿಪಿಐ ಸರ್ದಾರ್‌, ಜೆಡಿಎಸ್‌ ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಕಾರ್ಯಾಧ್ಯಕ್ಷ ನರಸಿಂಹಮೂರ್ತಿ, ಹೋಬಳಿ ಅಧ್ಯಕ್ಷ ರಾಮಚಂದ್ರಪ್ಪ, ಬಸವರಾಜು, ತಿಮ್ಮಣ್ಣ, ಮುಖಂಡರಾದ ಲಕ್ಷ್ಮಮ್ಮ, ಕೀರ್ತಿ, ಮಿಡಿಗೇಶಿ ಸುರೇಶ್‌, ಗೋವಿಂದರಾಜು, ಕಂಬತ್ತನಹಳ್ಳಿ ರಘು, ಜಡೇಗೊಂಡನಹಳ್ಳಿ ಸತೀಶ್‌, ಚಿತ್ತಯ್ಯ, ಕುಮಾರ್‌, ಹನುಮಂತರಾಯಪ್ಪ ಹಾಗೂ ಕೋವಿಡ್‌ ವಾರಿಯರ್ಸ್‌ಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!