ವಿದ್ಯಾವಾಹಿನಿ ವಿದ್ಯಾರ್ಥಿಗಳಿಂದ ಅದ್ವಿತೀಯ ಸಾಧನೆ

1,984

Get real time updates directly on you device, subscribe now.

ತುಮಕೂರು: 2021ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ತುಮಕೂರಿನ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಿಂದ ಇಬ್ಬರು ಹಾಗೂ ವಿಜ್ಞಾನ ವಿಭಾಗದಿಂದ ಒಬ್ಬ ವಿದ್ಯಾರ್ಥಿ 600 ಕ್ಕೆ 600 ಅಂಕಗಳನ್ನು ಗಳಿಸಿ ಕಾಲೇಜಿಗೆ, ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕೃತಿಕಾ ಎಚ್.ಕೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಎಸ್ಇಬಿಎ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿದ್ದಾರೆ. ಇವರಿಗೆ ಸಿಎ ಮಾಡುವಾಸೆ ಇಟ್ಟುಕೊಂಡಿದ್ದಾರೆ. ಕಾಲೇಜಿನಲ್ಲಿ ನಡೆದ ಉತ್ತಮ ಪಾಠಗಳು ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಇದು ದ್ವಿತೀಯ ಪಿಯುಸಿ ಸಾಧನೆಗೆ ಪೂರಕವಾಯಿತು ಎಂದು ತಿಳಿಸಿದರು. ಇವರು ಸಹ ಎಲ್ಲಿಯೂ ಟ್ಯೂಷನ್ಗೆ ಹೋಗದೆ ಈ ಸಾಧನೆ ಮಾಡಿದ್ದಾರೆ.
ತರುಣ್ .ಎಸ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಎಸ್ಎಂಬಿಎ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿದ್ದಾರೆ. ಇವರು ಮುಂದೆ ಸಿಎ ಮಾಡುವಾಸೆ ಇಟ್ಟುಕೊಂಡಿದ್ದಾರೆ. ಪಿಯುಸಿಯಲ್ಲಿ ಸಂಸ್ಥೆ ಅಧ್ಯಕ್ಷ ಕೆ.ಬಿ.ಜಯಣ್ಣ, ಕಾರ್ಯದರ್ಶಿ ಎನ್.ಬಿ.ಪ್ರದೀಪ್ಕುಮಾರ್, ಪ್ರಾಚಾರ್ಯ, ಉಪನ್ಯಾಸಕ ವೃಂದದವರು ನೀಡಿದ ಸಹಕಾರ, ಇಲ್ಲಿನ ಉತ್ತಮ ಬೋಧನೆಯನ್ನು ಸ್ಮರಿಸುತ್ತಾ ಎಲ್ಲಿಯೂ ಟ್ಯೂಷನ್ಗೆ ಹೋಗದೆ ಕಾಲೇಜಿನಲ್ಲಿ ಮಾಡಿದ ಪಾಠ-ಪ್ರವಚನಗಳೇ ನನ್ನ ಇಂದಿನ ಸಾಧನೆಗೆ ಕಾರಣ ಎಂದು ತರುಣ್ ಹೇಳಿದರು.
ವಿಕಾಸ್ ಟಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದು ಪಿಸಿಎಂಬಿ ವಿಭಾಗದಲ್ಲಿ 600 ಕ್ಕೆ 600 ಅಂಕಗಳನ್ನು ಗಳಿಸಿದ್ದಾರೆ. ಮುಂದೆ ಎಂಜಿನಿಯರ್ ಆಗುವ ಆಸೆ ಇಟ್ಟುಕೊಂಡಿದ್ದಾರೆ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದವರಿಗೆ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಜಯಣ್ಣ, ಕಾರ್ಯದರ್ಶಿ ಎನ್.ಬಿ.ಪ್ರದೀಪ್ಕುಮಾರ್ ಒದಗಿಸಿರುವ ಉತ್ತಮ ಸೌಲಭ್ಯ, ಅತ್ಯುತ್ತಮ ಉಪನ್ಯಾಸಕ ವೃಂದ, ಇಲ್ಲಿನ ಪಾಠ-ಪ್ರವಚನ ನನ್ನ ಸಾಧನೆಗೆ ಕಾರಣವಾಗಿದೆ ಎಂದು ತಿಳಿಸುತ್ತಾ, ಇನ್ನು ಮುಂದೆಯೂ ಸಹ ಇದೇ ರೀತಿ ಸಾಧನೆ ಮಾಡುವುದಾಗಿ ಹೇಳುತ್ತಾ ಸಂಸ್ಥೆಯ ಸಹಕಾರ ಸ್ಮರಿಸಿದರು.
ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಿಂದ ಒಟ್ಟು 639 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಅದರಲ್ಲಿ 182 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದು, 421 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 36 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಮೂಲಕ ಕಾಲೇಜಿಗೆ ಕೀರ್ತಿ ತಂದು ಒಟ್ಟಾರೆ ಶೇ.100 ಫಲಿತಾಂಶ ಬರಲು ಕಾರಣರಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಕೆ.ಬಿ.ಜಯಣ್ಣ, ಕಾರ್ಯದರ್ಶಿಎನ್.ಬಿ.ಪ್ರದೀಪ್ಕುಮಾರ್, ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!