ಕುಣಿಗಲ್: ತಾಲೂಕಿನಲ್ಲಿರುವ ಕಾಂಗ್ರೆಸ್ ಶಾಸಕರು ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುತ್ತಾರೆಂದು ಧೈರ್ಯವಾಗಿ ಹೇಳಲಿ ನೋಡೊಣ, ಇನ್ನು ಜೆಡಿಎಸ್‌ನವರಾಗಿ ನಾವು ಹೇಳುತ್ತೇವೆ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಎಂದು ಯುವಜೆಡಿಎಸ್ ರಾಜ್ಯಕಾರ್ಯದರ್ಶಿ ಜಗದೀಶ್ ತಿಳಿಸಿದರು.
ಬುಧವಾರ ಕೊತ್ತಗೆರೆ ಹೋಬಳಿ ಸಿಂಗೋನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದ ವಿವಿಧ ಕಾರ್ಯಕರ್ತರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿಕೊಂಡು ಒಡಾಡಿದ್ದೇ ಕ್ಷೇತ್ರದ ಶಾಸಕರ ಸಾಧನೆ. ಈಗ ತಮ್ಮ ಶಡ್ಡಕ ಮುಖ್ಯಮಂತ್ರಿಯಾಗುತ್ತಾರೆ ನಾನು ಮಂತ್ರಿಯಾಗುತ್ತೇನೆಂದು ಹೇಳಿಕೊಂಡು ಕ್ಷೇತ್ರದ ತುಂಬ ಸಂಚಾರ ಮಾಡುತ್ತಿದ್ದಾರೆ. ಬಹಿರಂಗವಾಗಿ ಎಲ್ಲೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆಂದು ಹೇಳುವ ಶಕ್ತಿ ತೋರುತ್ತಿಲ್ಲ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದರು. ಪೂರ್ಣ ಅಧಿಕಾರ ಇದ್ದಲ್ಲಿ 53 ಸಾವಿರ ಕೋಟಿ ರೂ. ರೈತರ ಸಾಲ ಮನ್ನಮಾಡಿ ತೋರಿಸುತ್ತಿದ್ದರು. ಸದಾ ರೈತಪರವಾಗಿ ಚಿಂತಿಸುವ ಕುಮಾರಸ್ವಾಮಿ ಅವರನ್ನು 2023ಕ್ಕೆ ಮುಖ್ಯಮಂತ್ರಿಯನ್ನಾಗಿಸಲು ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸೋಣ. ಇದೀಗ ಪಕ್ಷ ತೊರೆದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕರಿಂದ ಯಾವುದೇ ಬೆದರಿಕೆ ಬಂದರೂ ಜಗ್ಗಬೇಡಿ ನಿಮ್ಮ ಜೊತೆ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ನಾವು ಇದ್ದೇವೆ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಸಂಘಟಿಸಿ ಪಕ್ಷ ಎಲ್ಲಾ ಚುನಾವಣೆಗಳಲ್ಲೂ ಅಧಿಕಾರ ಹಿಡಿಯುವತ್ತ ಶ್ರಮಿಸಬೇಕೆಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ತಾಪಂ ಮಾಜಿ ಅದ್ಯಕ್ಷ ಕೆ.ಎಲ್.ರಾಮಣ್ಣ, ಮತ್ತಿತರರು ಉಪಸ್ಥಿತರಿದ್ದು
ಕಾಂಗ್ರೆಸ್, ಬಿಜೆಪಿ ತೊರೆದು ಕಾರ್ಯಕರ್ತರಾದ ಕೆಂಪೇಗೌಡ, ಜಯರಾಮ, ಜೆಸಿಬಿಗಿರೀಶ್, ಹನುಮಂತ, ಕರಿಯಣ್ಣ ಇತರರು ಜೆಡಿಎಸ್ ಸೇರ್ಪಡೆಗೊಂಡರು.
Get real time updates directly on you device, subscribe now.
Next Post
Comments are closed.