ತುಮಕೂರು: ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜು 2020-21 ನೇಸಾಲಿನ ದ್ವಿತೀಯ ಪಿಯುಸಿ ಯ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯ ಎಸ್.ಜಿ. ಗೌರವ್ ಪಿ ಸಾಂಗ್ವಿ, ಲಾವಣ್ಯ ಎನ್, ದೀಪ್ತಿ ಆರ್ ರಾವ್, ಸಂದೀಪ್ ಉತ್ತರ್‌ಕರ್ ರವರುಗಳು 600 ಕ್ಕೆ 600 ಅಂಕಗಳನ್ನು ಪಡೆದು ಕಾಲೇಜಿಗೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕಾಲೇಜಿನ 240 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, 374 ಪ್ರಥಮ ಶ್ರೇಣಿ, 32 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಲ್ಲದೆ ವಿಜ್ಞಾನ ವಿಭಾಗದ ಸಂಜಯ್ ಎಂ, ಶ್ರೀಲಕ್ಷ್ಮಿ ಎಸ್, ದಾರ್ಶಿಕ ಆರ್, ಸುಜಯ್ ಪಿ. ಶೇ.99 ಅಂಕಗಳನ್ನು ಪಡೆದಿದ್ದು ಹಾಗೂ 78 ವಿದ್ಯಾರ್ಥಿಗಳು ಶೇ.95 ಕ್ಕೂ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಗೌರವ್ ಪಿ ಸಾಂಗ್ವಿ, ವಾಣಿಜ್ಯ ವಿಭಾಗದ ಎಸ್‌ಇಬಿಎ ವಿದ್ಯಾರ್ಥಿಯಾಗಿದ್ದು 600 ಕ್ಕೆ 600 ಅಂಕಗಳನ್ನು ಗಳಿಸಿದ್ದು ಇವರು ಸಿಎ ಮಾಡುವಾಸೆ ಇಟ್ಟುಕೊಂಡಿದ್ದಾರೆ. ಪ್ರಥಮ ಪಿಯುಸಿಯಲ್ಲಿ ಕಾಲೇಜಿನಲ್ಲಿ ನಡೆದ ಅತ್ಯುತ್ತಮ ಪಾಠ, ಎಲ್‌ಬಿಟಿ ಕಿರು ಪರೀಕ್ಷೆ, ಅಭ್ಯಾಸ ಪತ್ರಿಕೆ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಿಷಯವಾರು ಉಪನ್ಯಾಸಕರು ತರಗತಿಯಲ್ಲಿ ಹೇಳಿಕೊಟ್ಟಿದ್ದರ ಸಲುವಾಗಿ 600 ಕ್ಕೆ 600 ಅಂಕ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.
ಸಂದೀಪ್ ಎನ್ ಉತ್ತರ್‌ಕರ್, ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ ವಿದ್ಯಾರ್ಥಿಯಾಗಿದ್ದು 600 ಕ್ಕೆ 600 ಅಂಕ ಪಡೆದಿದ್ದು,ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.99.36 ಹಾಗೂ ಪ್ರಥಮ ಪಿಯುಸಿಯಲ್ಲಿ ಶೇ.97.61 ಅಂಕ ಪಡೆದಿದ್ದು, ಐಐಟಿಯಲ್ಲಿ ಓದುವ ಆಸೆ ಹೊಂದಿದ್ದಾರೆ.
ಲಾವಣ್ಯ ಎನ್ ವಾಣಿಜ್ಯ ವಿಭಾಗದ ಎಸ್‌ಸಿಬಿಎ ವಿದ್ಯಾರ್ಥಿನಿಯಾಗಿದ್ದು, ಇವರು ಸಿಎ ಮಾಡುವ ಅಭಿಲಾಷೆ ಹೊಂದಿದ್ದಾರೆ. ಉಪನ್ಯಾಸಕರ ಮಾರ್ಗದರ್ಶನ ಮತ್ತು ಕಾಲೇಜಿನ ತರಗತಿ ಪಾಠಗಳನ್ನಷ್ಟೇ ಕೇಳಿ, ಯಾವುದೇ ಟ್ಯೂಷನ್ ಇಲ್ಲದೇ 600 ಕ್ಕೆ 600 ಅಂಕಗಳನ್ನು ಗಳಿಸಿರುವುದು ಖುಷಿ ತಂದಿದೆ ಎಂದು ಹೇಳಿದರು.
ಕೋವಿಡ್-19 ಸಾಂಕ್ರಮಿಕ ರೋಗದ ಸಂದಿಗ್ಧ ವಾತಾವರಣದಲ್ಲಿಯೂ ಸಹ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಡಿಜಿಟಲ್ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳ ಪರಿಪೂರ್ಣ ವ್ಯಾಸಂಗಕ್ಕಾಗಿ ಹಾಗೂ ಪೋಷಕರ ನಿರೀಕ್ಷೆಯಂತೆ ನಮ್ಮ ಸಂಸ್ಥೆ ಶ್ರಮಿಸುತ್ತಿರುವುದು ನನಗೆ ಸಂತಸ ತಂದಿದೆ
ಕೆ.ಬಿ ಜಯಣ್ಣ, ಸಂಸ್ಥಾಪಕರು ಹಾಗೂ ಅಧ್ಯಕ್ಷರು
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ
ಪ್ರತೀ ವರ್ಷದಂತೆ, ಈ ವರ್ಷವೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹಾಗೆಯೇ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಉತ್ತಮ ರ್ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿತರಲೆಂದು ಆಶಿಸುತ್ತೇನೆ.
ಎನ್.ಬಿ. ಪ್ರದೀಪ್ ಕುಮಾರ್, ಕಾರ್ಯದರ್ಶಿ
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ
Comments are closed.