ಉದ್ಯೋಗ ವಂಚನೆ- ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

170

Get real time updates directly on you device, subscribe now.

ಮಧುಗಿರಿ: ತಾಲೂಕಿನ ರಂಟವಳಲು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನವನ್ನು ಸರಿಯಾಗಿ ಬಳಸದೆ ಹಾಗೂ ನರೇಗಾ ಕಾಮಗಾರಿಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಕಾಮಗಾರಿ ಮಾಡುವ ಮೂಲಕ ಜನರಿಗೆ ಉದ್ಯೋಗ ವಂಚನೆ ಮಾಡಿದ್ದು ರಂಟವಳಲು ಪಿಡಿಒ ವಿರುದ್ಧ ಕ್ರಮಕೈಗೊಳ್ಳುವಂತೆ ಕರುನಾಡ ಬೆಳಕು ಫೌಂಡೇಶನ್‌ ವತಿಯಿಂದ ಪು.ನಾ.ಭರತ್‌ ತಗ್ಗಿನಮನೆ ಮನವಿ ಮಾಡಿದ್ದಾರೆ.
ತಾಲೂಕಿನ ರಂಟವಳಲು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸ್ವಚ್ಛ ಭಾರತ ಅಭಿಯಾನ, ಶೌಚಾಲಯ, ಕೃಷಿ ಹೊಂಡ ಅಭಿಯಾನ, ಹೊಲ ಬದು ನಿರ್ಮಾಣ, ಕೊಟ್ಟಿಗೆ ಮನೆ ನಿರ್ಮಾಣ ಇನ್ನು ಹಲವಾರು ಜಾಬ್‌ ಕಾರ್ಡ್‌ಗಳನ್ನು ಬಳಸಿ ಉದ್ಯೋಗ ವಂಚನೆ ಮಾಡಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿರುತ್ತಾರೆ. ನರೇಗಾ ಯೋಜನೆಯಡಿಯಲ್ಲಿನ ಕಾಮಗಾರಿಗಳ ಅವ್ಯವಹಾರದಲ್ಲಿ ಶಾಮೀಲಾಗಿರುವ ರಂಟವಳಲು ಗ್ರಾಮ ಪಂಚಾಯತ್‌ ಪಿಡಿಒ ಅವರನ್ನು ಸೇವೆಯಿಂದ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಜಿಪಂ ಸಿಇಒ ಅವರಿಗೂ ಮನವಿ ನೀಡಿ ಪಿಡಿಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!