ತುಮಕೂರು: ಇದೇ ತಿಂಗಳ 26ರಿಂದ ಕಾಲೇಜುಗಳನ್ನು ಆರಂಭಿಸಿ ತರಗತಿಗಳನ್ನು ಮಾಡಲು ಸರ್ಕಾರ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಕ್ಯಾಂಪಸ್ ನಲ್ಲಿ ವ್ಯಾಕ್ಸಿನೇಷನ್ ಮತ್ತು ಕೋವಿಡ್ ತಪಾಸಣೆಯಲ್ಲಿ ಶೇ.100 ರಷ್ಟುಗುರಿ ಸಾಧಿಸಲಾಗಿದೆ ಎಂದು ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ನಗರದ ಶ್ರೀಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಇಲಾಖೆಯಿಂದ ಕ್ಯಾಂಪಸ್ ನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಮ್ಮಿಕೊಳ್ಳಲಾಗಿದ್ದ ಕೋವಿಶೀಲ್ಡ್ ಲಸಿಕೆ ಎರಡನೇ ಡೋಸ್ ನೀಡಿಕೆಗೆ ಚಾಲನೆ ನೀಡಿ ಮಾತನಾಡಿ, ಸಿದ್ಧಾರ್ಥ ಸಂಸ್ಥೆಯಲ್ಲಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಹಮ್ಮಿಕೊಳ್ಳುತ್ತಿರುವ ವ್ಯಾಕ್ಸಿನೇಷನ್ ಆಂದೋಲನ ಶೈಕ್ಷಣಿಕ ಚಟುವಟಿಕೆಗಳ ಚುರುಕಿಗೆ ಸಹಾಯವಾಗುತ್ತಿದ್ದು, ನೂರರಷ್ಟು ಯಶಸ್ವಿಯಾಗಿದೆ. ಲಸಿಕೆ ತೆಗೆದುಕೊಳ್ಳುವ ಮೂಲಕ ಕೊರೊನಾ ವ್ಯಾಪಿಸುವುದನ್ನು ನಿಯಂತ್ರಿಸುವಲ್ಲಿ ಸರ್ಕಾರದೊಂದಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ತಿಳಿಸಿದರು.
ಲಸಿಕಾ ಆಂದೋಲನ ಆರೋಗ್ಯವಂತ ಜೀವನಕ್ಕೆ ಬಹು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ 10 ಹಂತಗಳಲ್ಲಿ ಮೊದಲ ಡೋಸ್ ನೀಡಿದ್ದರೆ, ಇದೀಗ 2 ನೇ ಹಂತದ ಲಸಿಕೆ ಆಂದೋಲನದಲ್ಲಿ 100 ಮಂದಿ ಪ್ರಾಧ್ಯಾಪಕರಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಗಿದೆ. ಈ ಮೂಲಕ ದೇಶದಾದ್ಯಂತ ಹರಡಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ವ್ಯಾಕ್ಸಿನ್ ಅಗತ್ಯ ಮತ್ತು ಅನಿವಾರ್ಯ ಎಂದರು.
ಈಗಾಗಲೇ ಕಾಲೇಜಿನ ಎಲ್ಲಾ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದ್ದು, ಮುಂದೆಯೂ ಕ್ಯಾಂಪಸ್ ನಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಲಸಿಕೆ ನೀಡುವ ಮೂಲಕ ಕೊರೊನಾ ತಡೆಗಟ್ಟುವಲ್ಲಿ ಸಂಸ್ಥೆ ಕಾರ್ಯೋನ್ಮುಖವಾಗಲಿದೆ ಎಂದು ರವಿಪ್ರಕಾಶ್ ತಿಳಿಸಿದರು.
ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ.ಜಯಪ್ರಕಾಶ್, ಎನ್ಎಸ್ಎಸ್ ಅಧಿಕಾರಿಗಳಾದ ರವಿಕಿರಣ್, ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ತುಮಕೂರು ತಾಲ್ಲೂಕು ಆರೋಗ್ಯಾಧಿಕಾರಿ ಮಾರುತಿ ನೇತೃತ್ವದ ತಂಡದ ಸದಸ್ಯರು ಇದ್ದರು.
ಕೊರೊನಾ ಲಸಿಕೆ 2ನೇ ಡೋಸ್ ನೀಡಿಕೆಗೆ ಚಾಲನೆ
Get real time updates directly on you device, subscribe now.
Next Post
Comments are closed.