ಡೀಸೆಲ್ ಕದಿಯಲು ಟ್ಯಾಂಕರ್ ನಲ್ಲಿ ಮಿನಿ ಟ್ಯಾಂಕ್ ನಿರ್ಮಾಣ

ಮೋಸದ ಜಾಲ ಪತ್ತೆ ಹಚ್ಚಿದ ತಿಪಟೂರು ಪೊಲೀಸರು

689

Get real time updates directly on you device, subscribe now.

ತಿಪಟೂರು: ಪೆಟೋಲ್ ಸರಬರಾಜು ಟ್ಯಾಂಕರ್ ಒಳಗೆ ಬೇಬಿ ಟ್ಯಾಂಕ್ ಅಳವಡಿಸಿ ಬಂಕ್ ಮಾಲೀಕರಿಗೆ ಮೋಸ ಮಾಡುತ್ತಿದ್ದ ಜಾಲವನ್ನು ಡಿವೈಎಸ್ಪಿ ಚಂದನ್ಕುಮಾರ್ ನೇತೃತ್ವದಲ್ಲಿ ಪತ್ತೆ ಹಚ್ಚಿದ್ದು, ಈ ಕಾರ್ಯಕ್ಕೆ ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶ್ಲಾಘಿಸಿದ್ದಾರೆ.
ನಗರದ ಉಪಅಧಿಕ್ಷಕರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೇಸಿಗೆ ಕಾಲದಲ್ಲಿ ಪೆಟೋಲಿಯಂ ಉತ್ಪನ್ನ ಆವಿಯಾಗುತ್ತೆ ಎಂಬ ದೃಷ್ಟಿಯಿಂದ ನಿಗದಿಗಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಬಂಕ್ ಮಾಲೀಕರು ತುಂಬಿಸುತ್ತಿದ್ದಾರೆ, ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಟ್ಯಾಂಕರ್ ಮಾಲೀಕರು ಬೇಬಿ ಟ್ಯಾಂಕರ್ ಅಳವಡಿಸಿ, ಬಂಕ್ ಮಾಲೀಕರಿಗೆ ಮೋಸ ಮಾಡುತ್ತಿದ್ದರು, ಇದೀಗ ಈ ಜಾಲವನ್ನು ತಿಪಟೂರು ಪೊಲೀಸರು ಬೇಧಿಸಿದ್ದಾರೆ.
ಹಾಸನ ಮೂಲದ ಧನಲಕ್ಷ್ಮೀ ಟ್ರಾನ್ಸ್ಪೋರ್ಟ್ಗೆ ಸೇರಿದ ಕೆಎ41-ಬಿ.4325 ನಂಬರ್ನ ಲಾರಿಯಿಂದ ನಗರದ ಆದಿತ್ಯ ಎಂಟರ್ಪ್ರೈಸಸ್ ಪೆಟೋಲ್ ಬಂಕ್ನವರು ತೈಲ ತರಿಸುತ್ತಿದ್ದರು. ಈ ಲಾರಿಯ ಟ್ಯಾಂಕರ್ನಲ್ಲಿ ಬಂದ ಡೀಸೆಲ್ನ ಪ್ರಮಾಣ ಕಡಿಮೆ ಬಂದಿರುತ್ತದೆ ಎಂದು ಅನುಮಾನ ಬಂದು ಟ್ಯಾಂಕರ್ ನಿಲ್ಲಿಸಿ ಪರಿಶೀಲನೆ ಮಾಡಿದಾಗ ಟ್ಯಾಂಕರ್ನಲ್ಲಿ ಪ್ರತ್ಯೇಕ ಮಿನಿ ಟ್ಯಾಂಕರ್ ನಿರ್ಮಾಣ ಮಾಡಿಕೊಂಡಿರುವುದು ಪತ್ತೆಯಾಗಿದೆ, ಈ ಲಾರಿಯನ್ನು ಅಳತೆ ಮತ್ತು ಮಾಪನ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದಾಗ ಮೋಸ ಮಾಡುವ ಉದ್ದೇಶ ಬೆಳಕಿಗೆ ಬಂದಿದೆ, ಈ ಸಂಬಂಧ ಲಾರಿ ಮಾಲೀಕರಾದ ಸುಂದರಮ್ಮ ಹಾಗೂ ಗುತ್ತಿಗೆದಾರ ಭಾಸ್ಕರ್ ತಲೆಮೆರೆಸಿಕೊಂಡಿದ್ದಾರೆ, ಇವರಿಗೆ ಸೇರಿದ ಎಲ್ಲಾ ಟ್ಯಾಂಕರ್ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಸಿಪಿಐ ಶ್ರೀಶೈಲಮೂರ್ತಿ, ಚಿಕ್ಕನಾಯಕನಹಳ್ಳಿ ಸಿಪಿಐ ನಿರ್ಮಲ, ಪಿಎಸ್ಐ ಹರೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!