ಸ್ವಾಮೀಜಿಗಳು ರಾಜಕೀಯ ಮಾಡಲು ಹೊರಟಿರುವುದು ದುರಂತ

ಮಧ್ಯಂತರ ಚುನಾವಣೆ ಬರಲ್ಲ: ಎಸ್.ಆರ್.ಶ್ರೀನಿವಾಸ್

478

Get real time updates directly on you device, subscribe now.

ಗುಬ್ಬಿ: ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ, ಇದಕ್ಕೆ ಯಾವ ಶಾಸಕರು ಒಪ್ಪುವುದು ಇಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣ ಮಾಡಲು ಗುದ್ದಲಿ ಪೂಜೆ ಮಾಡಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿರುವಂತೆ ಅವರ ಹೈಕಮಾಂಡ್ ಹೇಳಿಕೆಯಂತೆ ಮುಂದುವರಿಯುತ್ತಿದ್ದು, ಅವರಲ್ಲೇ ಒಬ್ಬರನ್ನು ಆಯ್ಕೆ ಮಾಡುತ್ತಾರೆ, ಹಾಗಾಗಿ ಸರ್ಕಾರ ಬೀಳುತ್ತದೆ, ಮಧ್ಯಂತರ ಚುನಾವಣೆ ನಡೆಯುತ್ತದೆ ಎಂಬುದು ಊಹಾಪೋಹದ ಮಾತುಗಳು ಅಷ್ಟೇ, ಬಹುಮತ ಮೂರು ಪಕ್ಷಕ್ಕೂ ಇರಲಿಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ಮಾಡುತ್ತಿತ್ತು, ಈ ಸಂದರ್ಭದಲ್ಲಿ 17 ಜನ ಶಾಸಕರನ್ನ ಕೊಂಡುಕೊಂಡಿದ್ದು ಬಿಜೆಪಿ ಸರ್ಕಾರ, ಹಾಗಾಗಿ ಯಾರಿಗೂ ಬಹುಮತ ಇರಲಿಲ್ಲ, ಆದರೂ ಸರ್ಕಾರ ಹೊಂದಾಣಿಕೆಯಲ್ಲಿ ನಡೆಯುತ್ತಿತ್ತು, ಈಗ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಇದೆ. ಆದರೂ ಯಡಿಯೂರಪ್ಪ ಇಲ್ಲ ಎಂದು ಯಾರು ಸಹ ರಾಜೀನಾಮೆ ಕೊಡುವ ಸ್ಥಿತಿಯಲಿಲ್ಲ, ಹೈ ಕಮಾಂಡ್ ಏನು ಹೇಳುತ್ತದೆ ಆ ರೀತಿ ನಡೆಯುತ್ತದೆ ಎಂದರು.
ಸ್ವಾಮೀಜಿಗಳು ಮಾರ್ಗದರ್ಶನ ಮಾಡಿಕೊಂಡು ಇರುವ ಬದಲಿಗೆ ರಾಜಕೀಯ ಮಾಡುವುದಕ್ಕೆ ಹೊರಟಿರುವುದು ದುರಂತವಾಗಿದೆ, ಹೀಗೆಲ್ಲ ಮಾಡುವ ಸ್ವಾಮೀಜಿಗಳು ಕಾವಿ ಬಿಚ್ಚಿ ಖಾದಿ ಹಾಕಿಕೊಂಡು ನಮ್ಮ ರೀತಿಯಲ್ಲೇ ರಾಜಕೀಯ ಮಾಡಲಿ, ಸಮಾಜ ತಿದ್ದಬೇಕಾದವರು ಯಾರ ಪರ ನಿಂತಿದ್ದೀರ ಎನ್ನುವ ಸಾಮಾನ್ಯ ಜ್ಞಾನ ಸಹ ನಿಮಗಿಲ್ಲ, ಸ್ವಾಮೀಜಿ ಅಂದರೆ ಗೌರವ ಬರಬೇಕಿತ್ತು, ಆದರೆ ನಿಮ್ಮನ್ನೆಲ್ಲ ನೋಡಿದರೆ ಏನು ಹೇಳಬೇಕೋ ಗೊತ್ತಿಲ್ಲ, ಕೇವಲ ಕವರ್ ಕೊಡುತ್ತಾರೆ ಎಂದರೆ ಓಡಿ ಹೋಗುತ್ತಾರೆ, ಎಲ್ಲಿದ್ರು ಇವ್ರೆಲ್ಲಾ ಎಂದು ಅಕ್ರೋಶ ವ್ಯಕ್ತ ಪಡಿಸಿದರು.
ಹೇಮಾವತಿ ನೀರು ನಾಲೆಯಲ್ಲಿ ಬರುತ್ತಿದ್ದು, ತಾಲೂಕಿನ ಎಲ್ಲಾ ಕೆರೆಗಳು ತುಂಬುತ್ತವೆ, ಇನ್ನೂ ಶಿರಾ ತಾಲೂಕಿನ ಮದಲೂರು ಕೆರೆ ವಿಚಾರದಲ್ಲಿ ಚುನಾವಣಾ ಸಮಯದಲ್ಲಿ ನೀರು ಬಿಡುತ್ತೇವೆ ಎಂದವರು ಈಗ ಜಿಲ್ಲಾ ಉಸ್ತುವಾರಿ ಸಚಿವರು ನೀರು ಬಿಡುವುದಿಲ್ಲ, ಬಿಟ್ಟರೆ ಅಧಿಕಾರಿಗಳನ್ನು ಜೈಲಿಗೆ ಹಾಕುತ್ತಾರೆ ಎಂದರೆ ಯಾರು ನೀರು ಬಿಡಲು ಮುಂದಾಗುತ್ತಾರೆ ಎನ್ನುವುದೇ ಅರ್ಥವಾಗುತ್ತಿಲ್ಲ, ಕಾನೂನು ಪ್ರಕಾರ ಅಲ್ಲಿಗೆ ನೀರು ಬಿಡಲು ಸಾಧ್ಯವಿಲ್ಲ, ಆದ್ರೂ ಆ ಸಮಯದಲ್ಲಿ ನೀರು ಬಿಡುವ ವಾಗ್ದಾನ ಮಾಡಲಾಗಿತ್ತು, ಕೇವಲ ಚುನಾವಣೆ ಗಿಮಿಕ್ ಮಾಡಿಕೊಂಡೆ ಗೆದ್ದು ಬಂದಿದ್ದಾರೆ ಬಿಜೆಪಿಯವರು ಎಂದು ತಿಳಿಸಿದರು.
ಇನ್ನೂ ನಿಗಮ ಮಂಡಳಿ ಮಾಡಿಕೊಂಡು ಬಂದ್ರೆ ಯಾವ ಪ್ರಯೋಜನ ಇದೆ ಹೇಳಿ, ಆದಕ್ಕೆ ಹಣ ಎಲ್ಲಿಂದ ಹಾಕುತ್ತಾರೆ, ಇರುವ ನಿಗಮ ಮಂಡಲಿಗಳೇ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇವೆಲ್ಲ ಯಾಕೆ ಮಾಡುತ್ತಾರೋ ತಿಳಿಯುತ್ತಿಲ್ಲ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮಿ ಹಾಗೂ ಎಲ್ಲಾ ಸದಸ್ಯರು ಮತ್ತು ಮುಖಂಡರಾದ ಲೋಕೇಶ್ ಬಾಬು, ಶಂಕರ್, ಕುಮಾರ್, ಪ್ರಿನ್ಸಿಪಾಲ್ ಮಂಜುನಾಥ್ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!