ನಿಯಮ ಬಾಹಿರ ಬಿಲ್ ಪಾವತಿಗೆ ಕಡಿವಾಣ ಹಾಕಿ

374

Get real time updates directly on you device, subscribe now.

ಕುಣಿಗಲ್: ನಿಯಮ ಬಾಹಿರ ಬಿಲ್ ಪಾವತಿಗೆ ಕಡಿವಾಣ ಹಾಕಬೇಕೆಂದು ಸ್ಥಾಯಿಸಮಿತಿ ಸದಸ್ಯರು ಒತ್ತಾಯಿಸಿದ ಘಟನೆ ಸೋಮವಾರ ನಡೆದ ಪುರಸಭೆ ಸ್ಥಾಯಿ ಸಮಿತಿ ಸಭೆಯಲ್ಲಿ ನಡೆಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ ಅಧ್ಯಕ್ಷೆತೆಯಲ್ಲಿ ಕಳೆದ ಐದು ತಿಂಗಳ ಜಮಾ ಖರ್ಚಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಲೆಕ್ಕಪತ್ರ ಮಂಡನೆಯಾಯಿತು. ಪುರಸಭೆಯಲ್ಲಿ ಕಂಪ್ಯೂಟರ್ ಆಪರೇಟರ್ ನೇಮಕಾತಿ ಅವರ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಸದಸ್ಯರಾದ ನಾಗಣ್ಣ ಆಕ್ಷೇಪಿಸಿ, ಸದರಿ ಹೊರಗುತ್ತಿಗೆ ನೌಕರರ ನೇಮಕಕ್ಕೆ ಆದೇಶ ನೀಡಿದ್ದು ಯಾರು, ಇವರಿಗೆ ಯಾವ ಅನುದಾನದಡಿ ವೇತನ ನೀಡಲಾಗುತ್ತಿದೆ. ಇವರ ವಿದ್ಯಾರ್ಹತೆ ಏನು ಎಂದು ಪ್ರಶ್ನಿಸಿ ದಾಖಲಾತಿ ಮಂಡನೆಗೆ ಆಗ್ರಹಿಸಿ, ನಿಯಮಬಾಹಿರ ವೇತನ ಪಾವತಿ ಮಾಡುವುದಕ್ಕೆ ಕಡಿವಾಣ ಹಾಕಲು ಆಗ್ರಹಿಸಿದ್ದರು. ಮುಖ್ಯಾಧಿಕಾರಿ ರವಿಕುಮಾರ್ ಮಾತನಾಡಿ, ಪುರಸಭೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿಲ್ಲ, ನಿಯಮ ಪಾಲಿಸಿ ಬಿಲ್ ಪಾವತಿ ಮಾಡಲಾಗುತ್ತಿದೆ ಎಂದರು.
ಸದಸ್ಯ ಶ್ರೀನಿವಾಸ್ ಮಾತನಾಡಿ, ಲೀಕೇಜ್ ವಿಭಾಗದಲ್ಲಿ ಎಷ್ಟು ಮಂದಿ ಕಾರ್ಮಿಕರು ಇದ್ದಾರೆ. ಇವರಲ್ಲಿ ಬಹಳಷ್ಟು ಮಂದಿ ಕೆಲಸಕ್ಕೆ ಬರೊಲ್ಲ, ಆದರೂ ಅವರ ಹೆಸರಲ್ಲಿ ವೇತನ ಮಾಡಲಾಗುತ್ತಿದೆ, ಎಲ್ಲರನ್ನು ಕರೆಸಿ ವಾಸ್ತವಾಂಶ ಪರಿಶೀಲನೆ ಮಾಡೋಣ ಎಂದರು.
ಇಂಜಿನೀಯರ್ ಸುಮಾ ಮಾತನಾಡಿ ಲೀಕೇಜ್, ನಿರ್ವಹಣೆ ಸೇರಿದಂತೆ 20 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಗೈರಾಗಿಲ್ಲ ಎಂದರು. ಪಂಪು ಮೋಟಾರ್ ದುರಸ್ತಿ ನೆಪದಲ್ಲಿ, ಹೊಸ ಮೋಟಾರು ಖರೀದಿ ವಿಷಯದಲ್ಲಿ ಅನಗತ್ಯ ಬಿಲ್ ನೀಡಲಾಗಿದೆ ಎಂದು ಆರೋಪಿಸಿದರು. ವಿವಿಧ ವೆಚ್ಚ ಪಾವತಿಗಳಿಗೆ ಸದಸ್ಯರು ಆಕ್ಷೇಪಿಸಿ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಸೂಚಿಸಿದರು. ಪುರಸಭಾಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ ಸೇರಿದಂತೆ ಸ್ಥಾಯಿಸಮಿತಿ ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!