ಕೋಟೆ ಮಾರಮ್ಮನಿಗೆ ಆರತಿ ಮಹೋತ್ಸವ

506

Get real time updates directly on you device, subscribe now.


ಶಿರಾ: ಇಲ್ಲಿನ ಕೋಟೆ ಮಾರಮ್ಮ ದೇವರಿಗೆ ಆಷಾಢ ಮಾಸದ ಆರತಿ ಪೂಜೆ ಮಂಗಳವಾರ ನಡೆದಿದ್ದು, ನಗರದ್ದಷ್ಟೇ ಅಲ್ಲದೇ ಸುತ್ತಲಿನ ಹಲವು ಗ್ರಾಮಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ಪ್ರತಿ ವರ್ಷದಂತೆ ಪ್ರಸ್ತುತ ವರ್ಷವೂ ಇಲ್ಲಿನ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಕೋಟೆ ಮಾರಮ್ಮ ದೇವಿಗೆ ಆಷಾಢದ ವಿಶೇಷ ಪೂಜೆ ಮತ್ತು ಆರತಿ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು, ತಂಬಿಟ್ಟಿನ ಆರತಿಗೆ ಕಣಗಲೆ ಹೂ ಸಿಗಿಸಿಕೊಂಡ ಆರತಿ ಹಿಡಿದ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು, ಆರತಿ ಬೆಳಗಿ ಧನ್ಯತಾಭಾವ ವ್ಯಕ್ತಪಡಿಸಿದರು.
ಆರತಿ ಮಹೋತ್ಸವ ವಿಶೇಷ ಸಡಗರ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ನಗರದ ಅನೇಕ ಮನೆಗಳಲ್ಲಿ ತಮ್ಮ ನೆಂಟರನ್ನು ಕರೆದು, ಬಾಡೂಟ ಹಾಕಿ ಸಂಭ್ರಮಿಸಿದರು.

Get real time updates directly on you device, subscribe now.

Comments are closed.

error: Content is protected !!