ರಾಜೇಶ್ ಗೌಡರಿಗೆ ಮಂತ್ರಿ ಸ್ಥಾನ ನೀಡಲು ಒತ್ತಾಯ

461

Get real time updates directly on you device, subscribe now.

ಶಿರಾ: ರಾಜ್ಯದಲ್ಲಿ 30 ಲಕ್ಷದಷ್ಟು ಕುಂಚಿಟಿಗ ಸಮುದಾಯದ ಜನ ಇದ್ದಾರೆ, 18 ರಿಂದ 20 ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿಗೆ ನಿರ್ಣಾಯಕ ಮತದಾರರಾಗಿದ್ದಾರೆ. ಪ್ರಸಕ್ತ ಸ್ಥಿತಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಂಪುಟ ಪುನರ್‌ ರಚನೆಯಾಗುತ್ತಿದ್ದು, ಕುಂಚಿಟಿಗ ಸಮುದಾಯ ಪ್ರತಿನಿಧಿಸುವ ಏಕೈಕ ಬಿಜೆಪಿ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡುವಂತೆ ಬಿಜೆಪಿ ಮುಖಂಡ ತಾವರೆಕೆರೆ ದೇವರಾಜು ಒತ್ತಾಯ ಪಡಿಸಿದ್ದಾರೆ.
ಶಿರಾ ತಾಲೂಕಿನ ತಾವರೆಕೆರೆ ಗ್ರಾಮದ ಶ್ರೀಬಲಮುರಿ ವಿನಾಯಕ ದೇವಸ್ಥಾನದಲ್ಲಿ ಶಿರಾ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ರಾರಾಜಿಸುವಂತೆ ಮಾಡಿದ ರಾಜೇಶ್‌ ಗೌಡ, ಗೆದ್ದ 8 ತಿಂಗಳಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಜಿಲ್ಲೆಯಲ್ಲಿ ಉತ್ತಮ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಇಂತಹ ಯುವಕರಿಗೆ ಬಿಜೆಪಿ ಆದ್ಯತೆ ನೀಡಿದರೆ ದಕ್ಷತೆಯ ಮೌಲ್ಯ ಹೆಚ್ಚಾಗಲಿದೆ ಎಂದರು.
ಬಿಜೆಪಿ ಯುವ ಮುಖಂಡ ಶಿವು ಸ್ನೇಹಪ್ರಿಯ ಮಾತನಾಡಿ, ಕೋವಿಡ್‌ ಸಂಕಷ್ಟದಲ್ಲಿ ಶಾಸಕರು ಮಾಡಿದ ಸೇವೆ ಜನಮಾನಸದಲ್ಲಿ ಅಚ್ಚಳಿದೆ ಉಳಿದಿದೆ. ಅಲ್ಪಾವಧಿಯಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ ಕೀರ್ತಿ ಶಾಸಕ ರಾಜೇಶ್‌ಗೌಡ ಅವರಿಗೆ ದಕ್ಕುತ್ತದೆ. ಸಾಮಾನ್ಯ ಪ್ರಜೆಯ ರೀತಿ ತಾರತಮ್ಯ ಮಾಡದೆ ಜನಪರ ಸೇವೆ ಮಾಡುವ ಇಂತಹ ಶಾಸಕರಿಗೆ ಬಿಜೆಪಿ ಕೇಂದ್ರ ಮತ್ತು ರಾಜ್ಯ ನಾಯಕರು ಮನ್ನಣೆ ನೀಡಿ ಸಚಿವ ಸ್ಥಾನ ನೀಡಿದರೆ ಯಶಸ್ವಿಯಾಗಿ ನಿಭಾಯಿಸುವಂತಹ ಸಾರ್ಮಥ್ಯ ಕೌಶಲ್ಯ ಹೊಂದಿರುವ ಕಾರಣ ಕುಂಚಿಟಿಗ ಸಮುದಾಯದ ಕೋಟ ಮಾನದಂಡದಡಿ ಶಾಸಕ ರಾಜೇಶ್‌ ಗೌಡರಿಗೆ ಸ್ಥಾನಮಾನ ನೀಡುವಂತೆ ಒತ್ತಾಯ ಪಡಿಸಿದ್ದಾರೆ.
ತಾವರೆಕೆರೆ ಗ್ರಾಪಂ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷ ನಿತ್ಯಾನಂದ, ಸದಸ್ಯರಾದ ರಮೇಶ್‌, ರಾಜು, ಸತ್ಯಭಾಮ, ನಾಗರತ್ನಮ್ಮ, ಮುಖಂಡರಾದ ಶ್ರೀನಿವಾಸ್‌, ಉಮೇಶ್‌, ಕೆ.ಟಿ.ಕೃಷ್ಣಯ್ಯ, ಎನ್‌.ರಮೇಶ್‌ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!