ಬಿಎಸ್‌ವೈರನ್ನು ಮುಂದುವರೆಸಬೇಕಿತ್ತು: ಶ್ರೀನಿವಾಸ್

493

Get real time updates directly on you device, subscribe now.

ಗುಬ್ಬಿ: ಹೋರಾಟದ ಆದಿಯಿಂದ ಬಂದಿದ್ದ ಯಡಿಯೂರಪ್ಪ ಅವರನ್ನು ಇನ್ನೂ ಮುಂದುವರಿಸಬೇಕಿತ್ತು, ಏಕಾಏಕಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.
ತಾಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಹಾಗೂ ಬೊಮ್ಮರಸನಹಳ್ಳಿ ಗ್ರಾಮದಲ್ಲಿ ಜಲ ಜೀವನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಕ್ಷವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯಡಿಯೂರಪ್ಪ ಅವರು ಸಾಕಷ್ಟು ಹೋರಾಟದ ಹಾದಿಯಲ್ಲಿ ಬಂದಿದ್ದವರು, ಈ ವಯಸ್ಸಿನಲ್ಲೂ ಹುಡುಗರನ್ನು ನಾಚಿಕೆ ಪಡಿಸುವಂತೆ ಅಧಿಕಾರ ಮಾಡುತ್ತಿದ್ದ ಯಡಿಯೂರಪ್ಪ ಅವರಿಗೆ ಇನ್ನೂ 20 ತಿಂಗಳ ಅವಕಾಶವಿತ್ತು, ಅಧಿಕಾರ ಕೊಡುವಾಗ ಬಾರದ ಇಳಿ ವಯಸ್ಸು ಈಗ ಬಂದು ಬಿಡ್ತಾ, ಅವಧಿ ಮುಗಿಯುವವರೆಗೂ ಅಧಿಕಾರ ನೀಡಬೇಕಿತ್ತು, ಅವರ ಹೈ ಕಮಾಂಡ್‌ ಯಾವ ಮಾನದಂಡ ಅನುಸರಿಸಿದೆಯೋ ಗೊತ್ತಿಲ್ಲ, ಸೂಕ್ತ ವ್ಯಕ್ತಿ ಆಯ್ಕೆ ಮಾಡಬಹುದು ಎಂದರು.
ಮುಖ್ಯಮಂತ್ರಿ ನಂಬಿ ಬಂದಿದ್ದ 17 ಶಾಸಕರ ಪಾತ್ರ ಸರಿಯಾಗಿ ತಿಳಿದಿಲ್ಲ, ಅವರನ್ನು ಪಕ್ಷವನ್ನು ನಂಬಿ ಬಂದವರಿಗೆ ಮುಂದಿನ ದಿನದಲ್ಲೂ ಅವಕಾಶ ಸಿಗಬಹುದು, ಅದು ಅವರ ಆಂತರಿಕಾ ವಿಚಾರಕ್ಕೆ ಬಿಟ್ಟಿದ್ದು, ಇನ್ನೂ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಅವರು ಸಣ್ಣ ನೀರಾವರಿ ಯೋಜನೆಯ ವಿಚಾರದಲ್ಲಿ ಸಾಕಷ್ಟು ಕೆಲಸವನ್ನು ಜಿಲ್ಲೆಗೆ ಮಾಡುತ್ತಿದ್ದು, ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಯೋಜನೆ ಮಾಡುತ್ತಿದ್ದಾರೆ. ಹಾಗಾಗಿ ಅವರೆ ಅಭಿವೃದ್ಧಿ ದೃಷ್ಟಿಯಿಂದ ಅವರೆ ಮುಂದುವರಿಯಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಬೇರೆಯವರು ಬಂದಲ್ಲಿ ಈ ಯೋಜನೆ ಎತ್ತ ಸಾಗುತ್ತದೆ ನೋಡಬೇಕು ಎಂದರು.
ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಚುನಾವಣೆ ಸದ್ಯಕ್ಕೆ ಮಾಡದಿದ್ದರೆ ಒಳಿತು, ಮತ್ತೆ ಕೊರೊನಾ ಪಾಸಿಟಿವಿಟಿ ರೇಟ್‌ ಜಾಸ್ತಿಯಾಗುತ್ತಿದ್ದು ಬೆಂಗಳೂರು, ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಕೇಸ್‌ ಆರಂಭವಾಗಿದೆ, ಕಳೆದ ಬಾರಿ ಚುನಾವಣೆ ಮಾಡಿದಾಗಲೇ ಸುಪ್ರೀಂಕೋರ್ಟ್‌ ಚುನಾವಣೆ ಮಾಡಬಾರದು ಎನ್ನುವ ಮಾಹಿತಿ ತಿಳಿಸಿತ್ತು, ಹಾಗಾಗಿ ಸರಕಾರದ ನಿರ್ದೇಶನ ಮತ್ತು ಸ್ಥಿತಿಗತಿ ನೋಡಿಕೊಂಡೆ ಚುನಾವಣೆ ಮಾಡಲು ಅವಕಾಶ ನೀಡಬಹುದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷ ವಿದ್ಯಾಧರ್‌, ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್‌, ಮುಖಂಡರಾದ ಪರಮೇಶ್‌, ಯತೀಶ್‌, ರಂಗಸ್ವಾಮಿ, ಜಗದೀಶ್‌, ಶೆಟ್ಟಲ್ಲಪ್ಪ, ಮಹಾದೇವಯ್ಯ, ಸತೀಶ್‌ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!