ಲಾಬಿಗೆ ಬಿಜೆಪಿ ಪಕ್ಷದಲ್ಲಿ ಅವಕಾಶವಿಲ್ಲ: ಮಸಾಲೆ ಜಯರಾಂ

272

Get real time updates directly on you device, subscribe now.

ಗುಬ್ಬಿ: ಹೈ ಕಮಾಂಡ್‌ ನಿರ್ಧಾರದಂತೆ ಸಚಿವ ಸ್ಥಾನ ಹಂಚಿಕೆಯಾಗುತ್ತೆ ಹೊರತು ಯಾವುದೇ ಲಾಬಿಗೆ ಬಿಜೆಪಿ ಪಕ್ಷದಲ್ಲಿ ಅವಕಾಶವಿಲ್ಲ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲೆ ಜಯರಾಂ ತಿಳಿಸಿದರು.
ತಾಲೂಕಿನ ಸಿ.ಎಸ್‌.ಪುರ ಹಾಗೂ ಎಡವನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸಂದರ್ಭದಲ್ಲಿ ಹಾಗೂ ನೀರು ಬಿಡಿಸುವ ವಿಚಾರದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯಬೇಕು, ಅವರೆ ಮುಂದುವರೆದರೆ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ಇದುವರೆಗೂ ನಮಗೆ ಬರಗಾಲ ಎನ್ನುವುದೇ ಬಂದಿಲ್ಲ, ನಮ್ಮ ಸರ್ಕಾರ ಬಂದ ದಿನದಿಂದಲೂ ಹೇಮಾವತಿ ನೀರು ನಾಲೆಯಲ್ಲಿ ಹರಿಯುತ್ತಿರುವ ಕಾರಣ ಇಡೀ ಜಿಲ್ಲೆಯಲ್ಲಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ, ಈ ಬಾರಿಯೂ ತಿಂಗಳು ಮುಂಚೆಯೇ ನೀರು ಹರಿಯುತ್ತಿದೆ, ಹಾಗಾಗಿ ಎಲ್ಲಾ ಕೆರೆಗಳು ತುಂಬುತ್ತವೆ ಎಂದರು,
ಯಡಿಯೂರಪ್ಪ ಅವರು ಮುಕ್ತವಾಗಿ ಅನುದಾನ ನೀಡಿದ್ದರು, ನೂತನ ಮುಖ್ಯಮಂತ್ರಿಗಳು ಸಹ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ, ಹಾಗಾಗಿ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಬದ್ಧವಾಗಿದ್ದೇನೆ ಮತ್ತು ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸಾಕಷ್ಟು ಕಾಮಗಾರಿ ನಡೆದಿದೆ, ಇನ್ನೂ ಸಾವಿರಾರು ಕೋಟಿ ಹಣ ತಂದು ಇಲ್ಲಿ ಕೆಲಸ ಮಾಡಲು ಬದ್ಧನಾಗಿದ್ದೇನೆ, ಕೆರೆಗಳು ತುಂಬುತ್ತಿರುವುದರಿಂದ ಅಂತರ್ಜಲ ಹೆಚ್ಚಿದ್ದು ಕೊಳವೆ ಬಾವಿ ಕೊರೆಸುವ ಕೆಲಸಕ್ಕೆ ರೈತರು ಮುಂದಾಗಿಲ್ಲ, ಇದರಿಂದ ಲಕ್ಷಾಂತರ ಹಣ ರೈತರಿಗೆ ಉಳಿದಿದೆ ಎಂದ ಅವರು ನಾನು ಸಚಿವನಾಗುವುದಕ್ಕೆ ಯಾವುದೇ ಲಾಬಿ ಮಾಡಿಲ್ಲ, ಮಾಡುವುದು ಇಲ್ಲ, ನಾನು ನಿಷ್ಠಾವಂತ ಕಾರ್ಯಕರ್ತ ಅಷ್ಟೇ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್‌ ಸದಸ್ಯಭಾನು ಪ್ರಕಾಶ್‌, ವಿಎಸ್‌ಎಸ್‌ಎನ್‌ ಅಧ್ಯಕ್ಷ ಬಿ.ಎಸ್‌.ನಾಗರಾಜು, ಸಿ.ಎಸ್.ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು, ಮುಖಂಡರಾದ ಪಾಪು, ಮದುವೆ ಕುಮಾರ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!