ನೀರು ಹರಿಸಲು ಸಿಎಂ ಬಳಿ ನಿಯೋಗ ಹೋಗ್ತೇವೆ: ಡಾ.ರಾಜೇಶ್‌ ಗೌಡ

ಮದಲೂರು ಕೆರೆಗೆ ನೀರು ಹರಿಸುವುದೇ ನಮ್ಮ ಗುರಿ

177

Get real time updates directly on you device, subscribe now.

ಶಿರಾ: ಶಿರಾ ತಾಲ್ಲೂಕಿನ ಜನತೆಯ ಹಿತದೃಷ್ಟಿಯಿಂದ ಶಿರಾ ಭಾಗಕ್ಕೆ ಹೇಮಾವತಿ ಜಲಾಶಯದಿಂದ ನೀರು ಹರಿಸುವ ಕಾರ್ಯಕ್ಕೆ ಜುಲೈ ತಿಂಗಲ್ಲಿ ಚಾಲನೆ ನೀಡಲಾಗಿದೆ, ಮದಲೂರು ಕೆರೆಗೆ ನೀರು ಹರಿಸುವುದೇ ನಮ್ಮ ಗುರಿಯಾಗಿದ್ದು, ಅದಕ್ಕಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ನಿಯೋಗ ತೆರಳಿ ಮನವಿ ಮಾಡಲಾಗುವುದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಹೇಳಿದರು.
ಪಟ್ರಾವತನಹಳ್ಳಿ ಎಸ್ಕೇಪ್‌ ಗೇಟ್‌ ಕಾಲುವೆ ಮೂಲಕ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಶಿರಾ ಉಪ ಚುನಾವಣೆಯಲ್ಲಿ ತಾಲ್ಲೂಕಿನ ಜನತೆಗೆ ಮಾತು ಕೊಟ್ಟಂತೆ ಮದಲೂರು ಕೆರೆಗೆ ಈ ಬಾರಿಯೂ ನೀರು ಹರಿಸಲು ನೂತನ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರಲ್ಲಿ ಮನವಿ ಮಾಡಲಾಗುವುದು, ಕಳೆದ ಬಾರಿಯೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮದಲೂರು ಕೆರೆಗೆ ಹೆಚ್ಚುವರಿ 0.50 ಟಿಎಂಸಿ ನೀರು ಹರಿಸಲಾಗಿತ್ತು, ಸದ್ಯ ಹೇಮಾವತಿ ಜಲಾಶಯ ಭರ್ತಿಯಾಗಲು 2 ಅಡಿಯಷ್ಟೇ ಬಾಕಿ ಇದ್ದು, ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಶೀಘ್ರ ಜಲಾಶಯವೂ ತುಂಬಲಿದೆ. ಕಳ್ಳಂಬೆಳ್ಳ, ಶಿರಾ ಕೆರೆಗಳಿಗೆ ನೀರು ಹರಿಸಿ ನಂತರ ಮದಲೂರು ಕೆರೆಗೂ ನೀರು ಹರಿಸಲು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಜಿಲ್ಲಾಡಳಿತಕ್ಕೆ ಧನ್ಯವಾದ: ಶಿರಾ ಭಾಗಕ್ಕೆ ಜುಲೈ ಅಂತ್ಯದೊಳಗೆ ನೀರು ಹರಿಸಲು ಆದೇಶ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ನೀರು ಹಂಚಿಕೆಗೆ ಕ್ರಮ: ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗದ ಕಾರಣ ನೀರು ಬಿಡಲು ಸಾಧ್ಯವಾಗುತ್ತಿಲ್ಲ, ಹೆಚ್ಚುವರಿ ನೀರನ್ನು ಅಷ್ಟೆ ಬಿಡಲು ಅವಕಾಶ ಇದೆ, ಆದ್ದರಿಂದ ಶಾಶ್ವತವಾಗಿ ಮದಲೂರು ಕೆರೆಗೆ ಹೇಮಾವತಿ ನೀರು ನಿಗದಿ ಮಾಡಲು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗುವುದು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರೊಂದಿಗೆ ನಿಯೋಗ ತೆರಳಿ ಮದಲೂರು ಕೆರೆಗೆ ಪ್ರತ್ಯೇಕ ನೀರು ಹಂಚಿಕೆಗೆ ಮನವಿ ಮಾಡಲಾಗುವುದು. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2009 ವರ್ಷದಲ್ಲಿ ಕೇಂದ್ರದ ನಿಯೋಗದೊಂದಿಗೆ ಮದಲೂರು ಕೆರೆ ವೀಕ್ಷಣೆ ಮಾಡಿ ಪರಿಶೀಲನೆ ಮಾಡಿದ್ದರು. ಅಂದು ಮದಲೂರು ಕೆರೆಗೆ ನೀರು ಹರಿಸುವುದು ಉತ್ತಮ ಎಂದು ಅವರೇ ಹೇಳಿದ್ದರು. ಅವರು ನೀಡಿದ ವರದಿ ಆದರಿಸಿ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿತ್ತು, ಆದ್ದರಿಂದ ಮದಲೂರು ಕೆರೆಗೆ ನೀರು ಹಂಚಿಕೆ ಮಾಡುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ರಾಜ್ಯ ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಮಾತನಾಡಿ, ಈ ಹಿಂದೆ ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿಸಬೇಕೆಂದರೆ ಹೋರಾಟ ಮಾಡಬೇಕಿತ್ತು, ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಪ ಚುನಾವಣೆಯಲ್ಲಿ ವಾಗ್ದಾನ ಕೊಟ್ಟಂತೆ ನಡೆದುಕೊಂಡು ಮದಲೂರು ಕೆರೆಗೆ ನೀರು ಹರಿಸಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಮದಲೂರು ಕೆರೆಗೆ ನೀರು ಹರಿಸುವ ಆಶಾಭಾವನೆ ಇದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಮದಲೂರು ಮೂರ್ತಿ ಮಾಸ್ಟರ್‌, ಮಾಲಿ ಸಿಎಲ್‌ ಗೌಡ, ನಟರಾಜ್‌, ಸುಧಾಕರ ಗೌಡ, ಕೋಟೆ ರವಿ, ಕದಿರೆಹಳ್ಳಿ ಮೂರ್ತಿ, ಬಸವರಾಜು ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!