ವಿಜೃಂಭಣೆಯಿಂದ ನಡೆಯಿತು ಚಾಮುಂಡೇಶ್ವರಿ ಆರಾಧನೆ

217

Get real time updates directly on you device, subscribe now.

ತುಮಕೂರು: ತಾಯಿ ಚಾಮುಂಡೇಶ್ವರಿ ಜನ್ಮದಿನಾಚರಣೆ ಅಂಗವಾಗಿ ತುಮಕೂರಿನ ಕ್ಯಾತ್ಸಂದ್ರದ ಸಿದ್ದಗಂಗಾ ಮಠದ ರಸ್ತೆಯಲ್ಲಿರುವ ಶ್ರೀಆದಿಶಕ್ತಿ ದೊಡ್ಡಮ್ಮ ದೇವಸ್ಥಾನದ ವತಿಯಿಂದ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ, ಮಹಾ ಮಂಗಳಾರತಿ ಹಾಗೂ ಅಭಿಷೇಕ ಮಾಡುವ ಮೂಲಕ ಭಕ್ತಾದಿಗಳು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.
ದೇವಸ್ಥಾನದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ವಿಶೇಷ ಅಲಂಕಾರ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಬೆಳಗಿನಿಂದಲೇ ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸಿ ಚಾಮುಂಡೇಶ್ವರಿ ತಾಯಿಗೆ ಪೂಜೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಟೇಲ್‌ ಅರುಣ್‌ ಮಾತನಾಡಿ ವಿಶ್ವದಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ಸಾರ್ವಜನಿಕರನ್ನು ತೀವ್ರ ಸಂಕಷ್ಟಕ್ಕೆ ಮಾಡಿಕೊಟ್ಟಿದ್ದು ಶೀಘ್ರ ದೇಶ ಹಾಗೂ ರಾಜ್ಯ ಕೊರೊನಾ ಮುಕ್ತ ಆಗಬೇಕೆಂದು ದೇವರಲ್ಲಿ ಪ್ರಾರ್ಥಿಸುವ ಮೂಲಕ ಕೊರೊನ ನಿಯಮಗಳನ್ನು ಅನುಸರಿಸಿ ದೇವಿಯ ಆರಾಧನೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಯಜಮಾನ ಗಂಗಹನುಮಯ್ಯ, ಯಜಮಾನ ಚಿಕ್ಕರಂಗಯ್ಯ, ಅನಂತ್‌, ಜಯರಾಮ್‌, ಬಡ್ಡಿಹಳ್ಳಿ ರಾಜಣ್ಣ, ಮೋಹನ್‌ ಕುಮಾರ್‌ ಪಟೇಲ್‌, ಗಂಗಾಧರ್‌ ಸೇರಿದಂತೆ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

Get real time updates directly on you device, subscribe now.

Comments are closed.

error: Content is protected !!