ಶೀಘ್ರ ಮದಲೂರು ಕೆರೆ ಕಾಲುವೆಗೆ ನೀರು ಹರಿಯಲಿದೆ: ರಾಜೇಶ್ ಗೌಡ

ಹೇಮೆ ನೀರಿನ ಹೆಸರಲ್ಲಿ ರಾಜಕೀಯ ಮಾಡಲ್ಲ

320

Get real time updates directly on you device, subscribe now.

ಶಿರಾ: ತುಮಕೂರು ಭಾಗದಲ್ಲಿಯೇ ಶಿರಾ ತಾಲ್ಲೂಕಿಗೆ ಮೊದಲು ನೀರು ಹರಿಸುತ್ತಿದ್ದು, ಜಿಲ್ಲೆಯ ಶಾಸಕರೆಲ್ಲ ಚರ್ಚೆ ನಡೆಸಿ ಎಲ್ಲಾ ತಾಲ್ಲೂಕಿಗಳಿಗೂ ನೀರು ಹರಿಸುವ ಉದ್ದೇಶದಿಂದ ಪ್ರತಿ 20 ದಿನಗಳಗೊಮ್ಮೆ ನೀರು ಹರಿಸುವುದನ್ನು ಬದಲಾಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಹೇಮಾವತಿ ಇಂಜಿನಿಯರಿಂಗ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಚರ್ಚೆ ನಡೆಸಿದ್ದೇವೆ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಜನರ ಅನುಕೂಲಕ್ಕಾಗಿ ಈ ನಿರ್ಧಾರ ಮಾಡಲಾಗಿದೆ ಎಂದ ಅವರು ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ವಾಸ್ತವತೆಯ ಅರಿವು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನದಲ್ಲಿದೆ, ಹೇಮಾವತಿ ನೀರಿನ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ, ಶಿರಾ ಕ್ಷೇತ್ರದ ಜನರ ನಂಬಿಕೆ, ವಿಶ್ವಾಸಕ್ಕೆ ಕುಂದು ಬಾರದ ಹಾಗೆ ಕೊಟ್ಟ ಮಾತನ್ನು ಯಾವುದೇ ಕಾರಣಕ್ಕು ತಪ್ಪುವುದಿಲ್ಲ, ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡ ಕೆರೆ ಭರ್ತಿಯಾದ ತಕ್ಷಣ ಮದಲೂರು ಕೆರೆ ಕಾಲುವೆಗೆ ನೀರು ಹರಿಯಲಿದೆ. ಆದರೆ ಪ್ರತಿ 20 ದಿನಗಳಿಗೊಮ್ಮೆ ಹೇಮಾವತಿ ನೀರನ್ನು ಇತರೆ ತಾಲ್ಲೂಕಿಗೆ ಬಿಟ್ಟು ಮತ್ತೆ 20 ದಿನಗಳ ನಂತರ ಶಿರಾ ಭಾಗಕ್ಕೂ ಹರಿಸಲಾಗುವುದು, ಈ ಬಗ್ಗೆ ಜನತೆ ಗೊಂದಲಕ್ಕೀಡಾಗಬಾರದು ಎಂಬ ಉದ್ದೇಶದಿಂದ ಈ ವಿಷಯವನ್ನು ಜನತೆಗೆ ತಿಳಿಯಪಡಿಸಲಿಚ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಇದ್ದ ಸರಕಾರ ಜುಲೈ ತಿಂಗಳಲ್ಲಿ ಹೇಮಾವತಿ ನೀರನ್ನು ಶಿರಾ ಭಾಗಕ್ಕೆ ಹರಿಸಿರಲಿಲ್ಲ, ಜಿಲ್ಲೆಯ ಇತರೆ ಕೆರೆಗಳು ಭರ್ತಿಯಾದ ನಂತರ ನೀರು ಹರಿಸುತ್ತಿತ್ತು, ಕುಡಿಯುವ ನೀರಿನ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿದ ಪರಿಣಾಮ ಪಟ್ರಾವತನಹಳ್ಳಿ 106 ನೇ ಎಸ್ಕೇಪ್ ಗೇಟ್ನಿಂದ ನೀರು ಬಿಡಲಾಗುತ್ತಿದೆ. ಹೇಮಾವತಿ ನೀರಿನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಶಿರಾ ತಾಲೂಕಿನ ನಾಗರೀಕರ ದಾರಿ ತಪ್ಪಿಸುವುದು ನನಗೆ ಇಷ್ಟವಿಲ್ಲ, ಹಾಗಾಗಿ ಇರುವ ಸತ್ಯವನ್ನು ಈಗಲೇ ಹೇಳುತ್ತಿದ್ದೇನೆ ಎಂದರು.

Get real time updates directly on you device, subscribe now.

Comments are closed.

error: Content is protected !!