ರೈತರಿಗೆ ಸಾಗುವಳಿ ಚೀಟಿ ನೀಡಲು ಒತ್ತಾಯ

202

Get real time updates directly on you device, subscribe now.

ತುಮಕೂರು: ಹತ್ತಾರು ವರ್ಷಗಳಿಂದ ಸರಕಾರಿ ಭೂಮಿಯನ್ನು ಬಗರ್‌ ಹುಕ್ಕುಂ ಸಾಗುವಳಿ ನಡೆಸುತ್ತಿರುವ ರೈತರಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕು ಹಾಗೂ ಅರಣ್ಯ ಇಲಾಖೆಯಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಒತ್ತಾಯಿಸಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಬಂಡೆ ಶಿವಕುಮಾರ್‌ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು, ಸುಮಾರು ಐವತ್ತು, ಅರವತ್ತು ವರ್ಷಗಳಿಂದ ಸರಕಾರಿ ಭೂಮಿ ಉಳುವೆ ಮಾಡುತ್ತಾ ಸರಕಾರಕ್ಕೆ ಫಾರಂ ನಂಬರ್ 53-57 ರಲ್ಲಿ ಅರ್ಜಿ ಹಾಕಿಕೊಂಡಿದ್ದರೂ ಮಂಜೂರಾತಿ ನೀಡುತ್ತಿಲ್ಲ, ಅಲ್ಲದೆ ಈಗಾಗಲೇ ಮಂಜೂರಾತಿ ದೊರೆತಿರುವ ಭೂಮಿಗಳಿಗೂ ಸಾಗುವಳಿ ಚೀಟಿ ನೀಡದೆ ಹತ್ತಾರು ವರ್ಷಗಳಿಂದ ರೈತರನ್ನು ಅಲೆಸುವ ಕೆಲಸ ನಡೆಯುತ್ತಿದೆ. ಬಹುತೇಕ ದಲಿತ ಸಮುದಾಯಕ್ಕೆ ಸೇರಿದ ರೈತರು ಇಂತಹ ಸ್ಥಿತಿ ಎದುರಿಸುತ್ತಿದ್ದಾರೆ. ಕೂಡಲೇ ಸರಕಾರ ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳು, ಕಂದಾಯಾಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರಿಗೆ ಸೂಕ್ತ ನಿರ್ದೇಶನ ನೀಡಿ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿದರು.
ತುಮಕೂರು ತಾಲೂಕು ಕಸಬಾ ಹೋಬಳಿ ತಿಪ್ಪನಹಳ್ಳಿ ಸರ್ವೆ ನಂ. 35ರಲ್ಲಿ ರಾಮಗೊಂಡನಹಳ್ಳಿಯ ಲಕ್ಷ್ಮಿದೇವಮ್ಮ ಮತ್ತು ಲಕ್ಷಯ್ಯ ಅವರಿಗೆ 3.20 ಎಕರೆ ಭೂಮಿ ಮಂಜೂರಾಗಿ ಹತ್ತಾರು ವರ್ಷಗಳಿಂದ ಮಾವಿನ ಗಿಡ ನೆಟ್ಟು ಮರವಾಗಿ ಫಸಲಿಗೆ ಬಂದಿವೆ. ಈಗ ಕಂದಾಯ ನಿರೀಕ್ಷಕರು ಇದು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ವರದಿ ನೀಡಿದ್ದು, ಅರಣ್ಯ ಇಲಾಖೆಯವರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ, ಕೂಡಲೇ ಜಿಲ್ಲಾಡಳಿತ ಈ ಕುಟುಂಬದ ನೆರವಿಗೆ ಬರಬೇಕು, ಲಕ್ಷ್ಮಿದೇವಮ್ಮ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಬಂಡೆ ಶಿವಕುಮಾರ್‌ ಒತ್ತಾಯಿಸಿದರು.
ಈ ವೇಳೆ ದಲಿತ ಮುಖಂಡರಾದ ಕೋರ ರಾಜಣ್ಣ, ಯೋಗೀಶ್‌.ಎಸ್‌., ವಾಲ್ಮೀಕಿ ಯುವ ಸೇನೆಯ ರಂಗನಾಥ್‌, ರಾಮಮೂರ್ತಿ, ಲಕ್ಷ್ಮಿದೇವಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!