ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಅಗತ್ಯ: ರಂಗನಾಥ್

302

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಯುವ ಜನತೆಗೆ ಉದ್ಯೋಗ ಕಲ್ಪಿಸಲು ಪೂರಕವಾದ ತಾಂತ್ರಿಕ ಶಿಕ್ಷಣದ ಹೊಸ ಕೋರ್ಸ್‌ಗಳ ಪ್ರಾರಂಭಕ್ಕೆ ಹೆಚ್ಚು ಒತ್ತು ನೀಡಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಮಂಗಳವಾರ ಪಟ್ಟಣದ 2ನೇ ವಾರ್ಡ್‌ನಲ್ಲಿ ಸರ್ಕಾರಿ ಐಟಿಐ ಕಾಲೇಜಿನ ಸಮೀಪ ರಾಜ್ಯಸರ್ಕಾರ, ತಾಂತ್ರಿಕ ಶಿಕ್ಷಣ ಇಲಾಖೆ, ಟಾಟಾ ಕಂಪನಿಯ ಸಹಯೋಗದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ, ಸುಸಜ್ಜಿತ, ತಾಂತ್ರಿಕ ಕಾರ್ಯಾಗಾರ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಹಾಲಿ ಕಾಲೇಜಿನಲ್ಲಿ 9 ವಿಷಯಗಳಿಗೆ ಬೋಧನೆ ಮಾಡಲಾಗುತ್ತಿದೆ. ಎಲ್ಲಾ ವಿಷಯಗಳಿಗೂ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ತಾಂತ್ರಿಕ ಶಿಕ್ಷಣ ಪಡೆದ ನಂತರ ಉದ್ಯೋಗವಕಾಶ ಹೆಚ್ಚಿರುವುದರಿಂದ ಗ್ರಾಮಾಂತರ ಪ್ರದೇಶದ ಯುವಕರಿಗೆ ಅನುಕೂಲವಾಗಲಿದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೊಸಹೊಸ ವಿಷಯಗಳ ಕೋರ್ಸ್‌ ಸ್ಥಾಪನೆ ನಿಟ್ಟಿನಲ್ಲಿ ಇಲಾಖೆ ನಿರ್ದೇಶಕರೊಂದಿಗೆ ಚರ್ಚೆ ನಡೆಸಲಾಗಿದೆ. ಟಾಟಾ ಕಂಪನಿಯವರು ಸಹ ಹೊಸ ಹೊಸ ಕೋರ್ಸ್‌ಗಳ ಪ್ರಾರಂಭಿಸಿ ಯುವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಸಮರ್ಪಕ ಮಾಹಿತಿ ನೀಡದ ಕಾಲೇಜಿನ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕಾಮಗಾರಿ ಗುತ್ತಿಗೆ ಪಡೆದವರು ಕಳಪೆ ಕಾಮಗಾರಿ ಮಾಡಿದರೆ ಹೊಣೆ ಯಾರು, ಕಾಮಗಾರಿಯ ಮಾಹಿತಿ ಇಲ್ಲದೆ ನಿಮ್ಮ ಜಾಗದಲ್ಲಿ ಕೆಲಸ ಮಾಡಲು ಹೇಗೆ ಬಿಟ್ಟಿದ್ದೀರಾ, ಇದು ನಿಮ್ಮ ಕಾರ್ಯವೈಖರಿಯೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಕಾಮಗಾರಿ ನಿರ್ವಹಣೆ ಮಾಡುವ ಇಲಾಖೆಯವರು ಕಳಪೆ ಕಾಮಗಾರಿ ಮಾಡಿರುವ ಅನುಮಾನ ಇದ್ದು ಮೂರನೆ ಪಾರ್ಟಿ ತಪಸಾಣೆಗೊಳಪಡಿಸಿ ತಪ್ಪು ಕಂಡು ಬಂದಲ್ಲಿ ಮುಲಾಜಿಲ್ಲದೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.
ಪ್ರಾಚಾರ್ಯ ಕೆಂಪಯ್ಯ, ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ, ಸದಸ್ಯರಾದ ಉದಯ, ಪುರಸಭೆ ಮಾಜಿಸದಸ್ಯ ರಂಗಸ್ವಾಮಿ, ಸತೀಶ್‌, ಪ್ರಮುಖರಾದ ಅಜಂಪಾಶ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!