ತುಮಕೂರು: ಜೆ.ಸಿ.ಮಾಧುಸ್ವಾಮಿ… ಮುತ್ಸದ್ಧಿ ನಾಯಕ, ಅಪಾರ ಜ್ಞಾನ ಹೊಂದಿರುವ ವಿಚಾರವಾದಿ, ಯಾವುದೇ ವಿಚಾರವಿರಲಿ ಸಮರ್ಥವಾಗಿ ಮಾತನಾಡುವ ಎದೆಗಾರಿಕೆ, ಯಾವುದನ್ನೇ ಆಗಲಿ ನೇರವಾಗಿ ಹೇಳುವ, ನೇರವಾಗಿ ಖಂಡಿಸುವ, ನೇರವಾಗಿ ಪ್ರಶ್ನಿಸುವ ನಿಷ್ಠೂರ ಗುಣ, ಇಂಥ ಮಾಧುಸ್ವಾಮಿ ಅವರಿಗೆ ಇದೀಗ 2ನೇ ಬಾರಿ ಸಚಿವರಾಗುವ ಸೌಭಾಗ್ಯ ಸಿಕ್ಕಿದೆ.
ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಭಾವಿ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಗೆ ಸಿದ್ಧರಿಲ್ಲದಂತೆ ಕೆಲಸ ಮಾಡಿದ್ದರು, ತಪ್ಪು ಮಾಡುವ ಅಧಿಕಾರಿಗಳನ್ನು ಮುಲಾಜಿಲ್ಲದೆ ತರಾಟೆ ತೆಗೆದುಕೊಂಡು ಜನರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ದಕ್ಷತೆ ತೋರಿದ್ದರು. ಇಂಥ ನಾಯಕನಿಗೆ ಇದೀಗ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ ಸಿಕ್ಕಿದೆ, ಇದು ತುಮಕೂರು ಜಿಲ್ಲೆ ಜನರು ಖುಷಿ ಪಡುವ ವಿವಾರವೂ ಹೌದು.
ಅಧಿಕಾರ ಮುಖ್ಯವಲ್ಲ, ಆದರೆ ಸಿಕ್ಕಿರುವ ಅಧಿಕಾರಕ್ಕೆ ನ್ಯಾಯ ಸಲ್ಲಿಸಬೇಕು, ಖುರ್ಚಿ ಆಸೆಗೆ ಬಿದ್ದು ಮಾಡಬೇಕಾದ ಕೆಲಸ ಮರೆತರೆ ಪಡೆದ ಅಧಿಕಾರ ವ್ಯರ್ಥ ಎಂಬ ಚಿಂತನೆ ಹೊಂದಿರುವ ಮಾಧುಸ್ವಾಮಿ ಅವರು ಯಾರ ಮರ್ಜಿಗೂ ಒಳಗಾಗಿ ಕೆಲಸ ಮಾಡುವವರಲ್ಲ, ಇವರ ನೇರ ನುಡಿ, ನೇರ ನಡೆ, ವಾಕ್ ಚಾತುರ್ಯ, ಸರ್ಕಾರವನ್ನು ಸಮರ್ಥಿಸಿಕೊಳ್ಳುವ ರೀತಿಗೆ ವಿರೋಧ ಪಕ್ಷದವರೇ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಅಧಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುವ ಮಾಧುಸ್ವಾಮಿ ಮತ್ತೆ ಮಂತ್ರಿಯಾಗಿದ್ದಾರೆ, ಇವರ ಆಡಳಿತದಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತವೆ ಎಂಬ ನಿರೀಕ್ಷೆ ಜನರಿದ್ದಾರೆ, ಜನರ ನಿರೀಕ್ಷೆಯಂತೆ ಮಾಧುಸ್ವಾಮಿ ಅಭಿವೃದ್ಧಿ ಹಾದಿಯಲ್ಲಿ ಸಾಗಲಿ ಎಂಬುದು ಎಲ್ಲರ ಆಶಯ.
Get real time updates directly on you device, subscribe now.
Next Post
Comments are closed.