ನಗರಸಭೆ ಆಯುಕ್ತರ ಹರಕೆಯ ಫಲ- ಮಿನಿಸ್ಟರ್ ಆದ್ರು ಬಿ.ಸಿ.ನಾಗೇಶ್!

ಉರುಳು ಸೇವೆಗೆ ಒಲಿಯಿತೇ ಸಚಿವ ಸ್ಥಾನ !?

333

Get real time updates directly on you device, subscribe now.

ತಿಪಟೂರು: ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ನಿರ್ಗಮನದಿಂದ ದೆಹಲಿ ನಾಯಕರ ಜೊತೆ ಸಂಪರ್ಕ ಹೊಂದಿರುವ ಹಲವು ಬಿಜೆಪಿ ಶಾಸಕರು ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಸಾಕಷ್ಟು ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ಪಟ್ಟ ಸಿಕ್ಕಿದೆ.
ಜೆ.ಸಿ.ಮಾಧುಸ್ವಾಮಿ ಅವರಿಗೆ ಎರಡನೆ ಬಾರಿ ಸಚಿವರಾಗುವ ಅವಕಾಶ ದೊರೆಯಿತು, ಇನ್ನೂ ಶಾಸಕ ಬಿ.ಸಿ.ನಾಗೇಶ್ ಪಕ್ಷ ನಿಷ್ಠರಾಗಿ ದುಡಿದಿದ್ದರು, ಶಿಸ್ತಿನ ಸಿಪಾಯಿಗೆ ಅದೃಷ್ಟ ಒಲಿದು ಬಂತೋ? ಹೈಕಮಾಂಡ್ ಕೃಪಾಶೀರ್ವಾದವೋ ಗೊತ್ತಿಲ್ಲ ಅಂತು ಸಚಿವ ಸ್ಥಾನ ಸಿಕ್ಕಿಬಿಟ್ಟಿತು.
ಆದರೆ ಇವರ ಸಚಿವ ಸ್ಥಾನದ ಹಿಂದೆ ದೇವಿ ಕೃಪೆಯೂ ಅಡಗಿದೆ ಎಂಬ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ಬಿ.ಸಿ.ನಾಗೇಶ್ ಸಚಿವರಾದರೆ ಆಯುಕ್ತರಿಗೆ ಏನು ಲಾಭ ಎಂಬುದು ಮಾತ್ರ ಗೊತ್ತಿಲ್ಲ.
ಬಿ.ಸಿ.ನಾಗೇಶ್ ಸಚಿವರಾಗಲೇಬೇಕು ಎಂದು ಆಯುಕ್ತ ಉಮಾಕಾಂತ್ ದೇವಿಯ ಮೊರೆ ಹೋಗಿದ್ದರು, ಈಗ ಸಚಿವರಾಗುತ್ತಿದ್ದಂತೆ ಇಲ್ಲಿನ ಕೆಂಪಮ್ಮ ದೇವಾಲಯ ಪ್ರಾಕಾರಕ್ಕೆ ಉರುಳು ಸೇವೆ ಮಾಡಿ ಹರಕೆ ತೀರಿಸಿದ್ದಾರೆ. ಅವರ ವಿನಮ್ರತೆ, ಭಕ್ತಿಗೆ ದೇವಿ ಒಲಿದು ಕೃಪೆ ತೋರಿದ್ದಾಳೆ, ನಾಗೇಶ್ ಮಂತ್ರಿಯಾಗಿದ್ದಾರೆ, ಬಹುಶಃ ನಗರಸಭೆ ಆಯುಕ್ತ ಉಮಾಕಾಂತ್ ಗೆ ಆಗಿರುವ ಸಂತೋಷ ಜಗತ್ತಿನಲ್ಲಿ ಯಾರಿಗೂ ಆಗಿಲ್ಲ ಅನ್ನಿಸುತ್ತೆ!
ಈ ವಿಚಾರಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಅವರ ಉರುಳು ಸೇವೆ, ಹರಕೆ ಸಾಕಷ್ಟು ವೈರಲ್ ಆಗಿದೆ, ತಿಪಟೂರಿನ ಬಿಜೆಪಿ ಕಾರ್ಯಕರ್ತರು ಅಧಿಕಾರಿಯ ಭಕ್ತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಏನಿದು ಉಮಾಕಾಂತ್ ಮಹಿಮೆ ಎಂಬ ಗೊಂದಲಕ್ಕೂ ಬಿದ್ದಿದ್ದಾರೆ, ಅಧಿಕಾರಿಯೊಬ್ಬ ಉರುಳು ಸೇವೆ ಮಾಡಿ ಸಚಿವ ಸ್ಥಾನ ಕೊಡಿಸಿದ್ದಾರೆ, ಇನ್ನು ಮುಂದೆ ಯಾವುದೇ ಸ್ಥಾನ, ಹುದ್ದೆ ದೊರೆಯಬೇಕೆಂದರೆ ನಗರಸಭೆ ಆಯುಕ್ತ ಉಮಾಕಾಂತ್ ಉರುಳು ಸೇವೆ ಮಾಡಿಸೋಣ ಎಂದು ಬಿಜೆಪಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!