ಜಿಲ್ಲೆ ಕ್ರೈಂ ಹೆಚ್ಚಳ!

ಪುಡಿ ರೌಡಿಗಳ ಅಟ್ಟಹಾಸ, ಚೈನ್‌ ಕಳ್ಳರ ಹಾವಳಿಗೆ ಕಡಿವಾಣ ಹಾಕ್ತಾರಾ ಎಸ್‌ಪಿ?

127

Get real time updates directly on you device, subscribe now.

ತುಮಕೂರು: ತುಮಕೂರು ನಗರ ವೇಗವಾಗಿ ಬೆಳೆಯುತ್ತಿದೆ, ಜೊತೆಗೆ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ಇಂಥ ನಗರದಲ್ಲಿ ವಾಸಿಸುತ್ತಿರುವ ಜನರ ನೆಮ್ಮದಿಗೆ ಭಂಗವಾಗುತ್ತಿವೆ ಕ್ರೈಂ ಪ್ರಕರಣಗಳು.
ಹೌದು, ತುಮಕೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚು ಬೆಳಕಿಗೆ ಬರುತ್ತಿವೆ, ಇದು ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ದಷ್ಕರ್ಮಿಗಳು ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಸರಕಳ್ಳತನ ಮಾಡುವ ಕೆಲಸ ಮಾಡುತ್ತಿದ್ದಾರೆ, ಈ ವಾರ ಒಂದರಲ್ಲೆ ನಗರದ ಸಿದ್ದರಾಮೇಶ್ವರ ಬಡಾವಣೆ, ಎಸ್‌.ಎಸ್‌.ಪುರಂ ಸೇರಿದಂತೆ ಹಲವೆಡೆ ಸರಗಳ್ಳತನ ಪ್ರಕರಣಗಳು ನಡೆದು ಮಹಿಳೆಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ, ಯಾವ ಸಮಯದಲ್ಲಿ ಹೇಗೆ ಹೊಂಚು ಹಾಕಿ ಕುಳಿತು ಮಹಿಳೆಯರ ಕೊರಳಿನಲ್ಲಿರುವ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದು, ಈ ಖದೀಮರನ್ನು ಬಂಧಿಸಿ ಎಡೆಮುರಿ ಕಟ್ಟುವುದು ಖಾಕಿಗಳಿಗೆ ದೊಡ್ಡ ಚಾಲೆಂಜ್‌ ಆಗಿದೆ.
ಇನ್ನು ಪುಡಿ ರೌಡಿಗಳ ಅಟ್ಟಹಾಸವೂ ನಗರದಲ್ಲಿ ಆಗಿದ್ದಾಗ್ಗೆ ಕಂಡು ಬರುತ್ತಿದೆ, ಬಾರ್‌ಗಳಲ್ಲಿ ಕುಡಿದು ಬಿಲ್‌ ಕೊಡದೆ ಬಾಟಲ್‌ ಒಡೆಯುವುದು, ಗ್ಲಾಸ್‌ಗಳನ್ನು ಪೀಸ್‌ ಪೀಸ್‌ ಮಾಡುವುದು ನಡೆದೇ ಇದೆ, ಇವರ ಕೃತ್ಯ ಪ್ರಶ್ನಿಸಿದರೆ ಚಾಕು ಚೂರಿ ತೋರಿಸಿ ನಾವು ಯಾರು ಗೊತ್ತಾ? ನಮ್ಮ ತಂಟೆಗೆ ಬಂದರೆ ಅಷ್ಟೇ ಎಂದು ಜೀವ ಬೆದರಿಕೆ ಹಾಕುತ್ತಿರುವ ಘಟನೆಗಳು ನಡೆಯುತ್ತಿದ್ದು, ಇಂಥ ಸೋ ಕಾಲ್ಡ್ ಪುಡಿ ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿ ಅವರ ಅಬ್ಬರಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ.
ಇದಷ್ಟೇ ಅಲ್ಲದೆ ಕಿಡ್ನಾಪ್‌ ಕೇಸ್‌ ಕೂಡ ವರದಿಯಾಗುತ್ತಿವೆ, ಕಿಡ್ನಾಪರ್‌ಗಳಿಗೂ ಪೊಲೀಸರು ತಕ್ಕ ಶಾಸ್ತಿ ಮಾಡಬೇಕಿದೆ, ಇನ್ನು ಪ್ರಮುಖವಾಗಿ ಪೊಲೀಸ್‌ ಇಲಾಖೆಗೆ ತಲೆ ನೋವಾಗಿ ಕಾಡುತ್ತಿರುವುದು ಜೂಜು ದಂಧೆ, ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇಸ್ಪೀಟ್‌ ಆಟ, ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಲೇ ಇದೆ, ಜೋಜುಕೋರರನ್ನು ಮಟ್ಟ ಹಾಕಿ ಈ ದಂಧೆಗೆ ಕಡಿವಾಣ ಹಾಕಬೇಕಿದೆ, ಆದರೆ ಜೂಜುಕೋರರಿಗೆ ಕೆಲ ಪೊಲೀಸರೆ ಶ್ರೀಕೃಷ್ಣನಂತೆ ರಕ್ಷಣೆಗೆ ನಿಂತು ರಕ್ಷಣೆಗೆ ಮುಂದಾಗಿರುವುದು ಮಾತ್ರ ವಿಪರ್ಯಾಸ.
ಇತ್ತೀಚೆಗಷ್ಟೇ ತುಮಕೂರಿಗೆ ಎಸ್‌ಪಿ ಆಗಿ ಬಂದಿರುವ ರಾಹುಲ್ ಕುಮಾರ್‌ ಶಹಪುರ್‌ ವಾಡ್‌ ಅವರು ದುಷ್ಕರ್ಮಿಗಳಿಗೆ ಬೆಂಬಲ ನೀಡುತ್ತಾ, ಅಕ್ರಮ ಚಟುವಟಿಕೆಗಳಿಗೆ ಸಹಕಾರ ಕೊಡುತ್ತಿದ್ದ, ತುಂಬಾ ವರ್ಷಗಳಿಂದ ಒಂದೇ ಜಾಗದಲ್ಲಿ ಠಿಕಾಣಿ ಹೂಡಿದ್ದ ಒಂದಷ್ಟು ಪೊಲೀಸರನ್ನು ಎತ್ತಂಗಡಿ ಮಾಡಿ ಇಲಾಖೆಯ ಮಾನ ಉಳಿಸುವ ಕಾರ್ಯ ಮಾಡಿದ್ದಾರೆ.
ಬಂದ ಆರಂಭದಲ್ಲೇ ಖಡಕ್‌ ಎಸ್‌ಪಿ ಎನಿಸಿಕೊಂಡಿರುವ ರಾಹುಲ್‌ ಕುಮಾರ್‌ ಅವರು ಚೈನ್‌ ಕಳ್ಳತನ ತಪ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸ್‌ ಬೀಟ್‌ ಹಾಕುವ ಅವಶ್ಯಕತೆ ಇದೆ, ಜೊತೆಗೆ ಚೈನ್‌ ಕಳ್ಳರನ್ನು ಅರೆಸ್ಟ್ ಮಾಡಿ ಮಹಿಳೆಯರು ನೆಮ್ಮದಿಯಾಗಿ ಬದುಕುವಂತೆ ಮಾಡಬೇಕಿದೆ, ಇನ್ನು ಜೂಜುಕೋರರನ್ನು ಬಂಧಿಸಿ ಈ ದಂಧೆಯನ್ನು ಬುಡ ಸಮೇತ ಕಿತ್ತೊಗೆಯುವ ಕೆಲಸ ಮಾಡಬೇಕಿದೆ, ಇನ್ನು ನಗರದಲ್ಲಿ ಮೆರೆದಾಡುತ್ತಿರುವ ಪುಡಿ ರೌಡಿಗಳ ಬಾಲ ಕಟ್‌ ಮಾಡಿ ಅವರ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.

Get real time updates directly on you device, subscribe now.

Comments are closed.

error: Content is protected !!