ಕಳಪೆ ಪಂಪ್‌ ಮೋಟರ್‌ ಹಂಚಿಕೆಗೆ ಶಾಸಕರ ಕಿಡಿ

198

Get real time updates directly on you device, subscribe now.

ಮಧುಗಿರಿ: ಹಿಂದುಳಿದ ವರ್ಗದ ರೈತರಿಗೆ ವಿತರಿಸಲು ತಂದಿದ್ದ ಮೋಟಾರ್‌ ಪಂಪ್‌ಗಳು ಕಳಪೆ ಮಟ್ಟದ್ದಾಗಿದ್ದು ಇದನ್ನು ಕಂಡ ಮಧುಗಿರಿ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಕೆಂಡಾಮಂಡಲವಾಗಿ ಡಿ.ದೇವರಾಜ ಅರಸ್‌ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮುಂದೆ ರೈತರೊಂದಿಗೆ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದ ಘಟನೆ ಶನಿವಾರ ಪಟ್ಟಣದಲ್ಲಿ ನಡೆಯಿತು.
ಐತಿಹಾಸಿಕ ದಂಡಿನ ಮಾರಮ್ಮನ ದೇವಸ್ಥಾನದ ಪ್ರಾಂಗಣದಲ್ಲಿ ತಾಲ್ಲೂಕಿನ 2018-19 ನೇ ಸಾಲಿನ ಹನ್ನೆರಡು ಫಲಾನುಭವಿಗಳಿಗೆ ವಿತರಿಸಬೇಕು. ಈ ಮೋಟಾರ್‌ ಪಂಪ್‌ಗಳನ್ನು ವಿತರಿಸಲು ಸಿದ್ಧಪಡಿಸಿಕೊಂಡಿದ್ದಾ ಮೋಟಾರ್‌ ಪಂಪುಗಳು ಗುಣಮಟ್ಟ ಇಲ್ಲವೆಂದು ಮನದಟ್ಟು ಮಾಡಿಕೊಂಡ ಶಾಸಕರು ವೇದಿಕೆಯಲ್ಲಿ ಹಾಜರಿದ್ದ ಇಲಾಖೆ ಅಧಿಕಾರಿಗಳನ್ನು ರೈತರೆದುರೆ ತರಾಟೆಗೆ ತೆಗೆದುಕೊಂಡರು.
ಹಿಂದೆಲ್ಲ ಟೆಕ್ಸ್‌ ಮೋ ಕಂಪೆನಿಯ ಮೋಟಾರ್‌ಗಳನ್ನು ನೀಡಲಾಗುತ್ತಿತ್ತು, ಈಗ ಹೆಸರೇ ಗೊತ್ತಿಲ್ಲದ ಕಂಪೆನಿಯ ಮೋಟಾರ್ ವಿತರಿಸಿ ರೈತರಿಗೆ ವಂಚಿಸುತ್ತೀರಾ, ತಾಲ್ಲೂಕಿನಲ್ಲಿ 12 ಫಲಾನುಭವಿಗಳಿಗೆ ಮಂಜೂರಾತಿಯಾಗಿದ್ದು ಹತ್ತು ಫಲಾನುಭವಿಗಳಿಗೆ ಮಾತ್ರ ನೀಡುತ್ತಿದ್ದೀರಿ, ಇನ್ನಿಬ್ಬರು ಫಲಾನುಭವಿಗಳ ಪಾಡೇನು, ಬೋರ್‌ ವೆಲ್‌ ಕೊರೆದು 3 ವರ್ಷಗಳಾಗಿದ್ದರೂ ವಿದ್ಯುತ್‌ ಸಂಪರ್ಕ ಪಡೆದಿದ್ದರೂ ಕೂಡ ಮೋಟಾರ್‌ ಪಂಪುಗಳು ನೀಡಲು ವಿಳಂಬವಾಗಿರುವುದು ಯಾಕೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದಾಗ ಅಧಿಕಾರಿಗಳ ಉತ್ತರ ನೀಡುವಲ್ಲಿ ತಬ್ಬಿಬ್ಬಾದರು.
ಇಲಾಖೆ ನಿಯಮಾನುಸಾರ ರೈತರು ಕೊರೆದ ಬೋರ್‌ ವೆಲ್‌ಗೆ ಪಂಪ್‌ ಮೋಟಾರ್‌ ಜೊತೆಗೆ ಕೇಬಲ್‌ ಸಹ ನೀಡಬೇಕು. ಆದರೆ ಕೇಬಲ್‌ ಮಾತ್ರ ಇಲ್ಲಿ ಕಾಣುತ್ತಲೇ ಇಲ್ಲ, ಇಲಾಖೆಯವರು ಸಂಬಂಧಪಟ್ಟ ರೈತ ಕೊರೆಸಿದ ಬೋರ್‌ ವೆಲ್‌ಗೆ ಮೋಟರ್‌ ಪಂಪ್‌ ಅಳವಡಿಸಿ ನೀರು ಬರುವಂತೆ ಮಾಡುವುದು ನಿಯಮ, ಶಾಸಕರ ಮೂಲಕ ವಿತರಿಸಿ ರೈತ ಫಲಾನುಭವಿಗಳಿಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಸರಿಯಿಲ್ಲ ಎಂದೇಳಿ, ಗಂಗಾ ಕಲ್ಯಾಣ ಯೋಜನೆಯ ಮಹತ್ವವೇ ಗೊತ್ತಿಲ್ಲ, ನಾನೂ ಕೂಡ ರೈತ ನನ್ನ ಜಮೀನಿನಲ್ಲಿ ಟೆಕ್ಸ್‌ ಮೋ ಕಂಪನಿಯ ಬೋರ್‌ವೆಲ್‌ ಗಳನ್ನೇ ಬಿಟ್ಟಿದ್ದೇನೆ, ಪಂಪು ಮೋಟಾರ್‌ಗಳ ಪೈಕಿ ಒಂದು ಕೊಟ್ಟು ಮತ್ತೊಂದು ಕೊಡದೆ ನನಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.
ಈ ಸಂಬಂಧಪಟ್ಟ ಎಂಡಿ ಮತ್ತು ಸಚಿವರೊಂದಿಗೆ ಮಾತನಾಡುತ್ತೇನೆ, ರೈತರಿಗೆ ಧರ್ಮಕ್ಕೇನಾದರು ಕೊಡುತ್ತೀರಾ, ನಾನು ವಿತರಣೆ ಮಾಡುವುದಿಲ್ಲವೆಂದು ಅಲ್ಲಿಂದ ಹೊರಟರು.
ಪುರಸಭಾ ಸದಸ್ಯ ಎಂ.ಆರ್‌.ಜಗನ್ನಾಥ್‌, ಜೆಡಿಎಸ್‌ ಮುಖಂಡ ತುಂಗೋಟಿ ರಾಮಣ್ಣ ಹಾಗೂ ರೈತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!