ತುಮಕೂರು: ಪ್ರಾಚೀನ ಭಾರತದಲ್ಲಿ ರಾಜನನ್ನುದೇವರ ಪ್ರತಿನಿಧಿಯೆಂದೇ ಗೌರವಿಸಲಾಗುತ್ತಿತ್ತು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವನು ರಾಷ್ಟ್ರಭಕ್ತಿ, ಸಂಸ್ಕೃತಿ ಮತ್ತು ಮಹಾನ್ ಪರಂಪರೆಯ ಮುಂದುವರೆದ ಪ್ರತಿನಿಧಿಯೆಂದೇ ತಿಳಿಯಬೇಕಿದೆ, ಅವನು ಚುಕ್ಕಾಣಿಗನಾಗಿ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತಿ ಅಭಿಪ್ರಾಯ ಪಟ್ಟರು.
ಕರ್ನಾಟಕದ ರಾಜ್ಯ ಸರ್ಕಾರದಲ್ಲಿ ನೂತನ ಶಿಕ್ಷಣ ಸಚಿವರಾಗಿ ನಿಯೋಜನೆಗೊಂಡ ಬಿ.ಸಿ.ನಾಗೇಶ್ ಅವರು ಆಶ್ರಮಕ್ಕೆ ಭೇಟಿ ಇತ್ತು ಆಶೀರ್ವಾದ ಪಡೆದಾಗ ಸ್ವಾಮೀಜಿ ಮಾತನಾಡಿ, ನಾವು ಸಾಗುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿನ್ನೂ ಜನಸಂಖ್ಯೆಗಷ್ಟೇ ಸೀಮಿತವಾಗಿದ್ದೇವೆ, ಜನರು ನಿಜಾರ್ಥದಲ್ಲಿ ಪ್ರಜೆಗಳಾಗಿ ರೂಪುಗೊಳ್ಳಬೇಕಿದೆ, ಉತ್ತಮ ಶಿಕ್ಷಣದಿಂದಷ್ಟೇ ನಾವು ಸಮರ್ಥ ವ್ಯಕ್ತಿಗಳನ್ನು ಹಾಗೂ ಸಶಕ್ತ ರಾಷ್ಟ್ರ ನಿರ್ಮಿಸಬಹುದು, ವ್ಯವಸ್ಥೆಯು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವುದು ಎಷ್ಟು ಮುಖ್ಯವೋ ಬುದ್ಧಿವಂತರು ಹಾಗೂ ಪ್ರತಿಭಾ ಸಂಪನ್ನರು ಭ್ರಮನಿರಸನಗೊಳ್ಳದಂತೆ ಕಾಪಾಡಬೇಕು. ದೇಶಕ್ಕೆ ಅನಕ್ಷರಸ್ಥರು ಆಘಾತಕಾರಿ ಎಂದರೆ ದೇಶದ ಸಂಸ್ಕೃತಿ, ಮೌಲ್ಯಗಳ ಬಗ್ಗೆ ಮೌಢ್ಯಪ್ರದರ್ಶಿಸುವವರು ಅನಕ್ಷರಸ್ಥರಿಗಿಂತ ಹೆಚ್ಚು ಆಘಾತಕಾರಿ, ಇಂದು ದೇಶದಲ್ಲಿ ಖ್ಯಾತ ಕವಿ ಎ.ಇ.ಹಾಸ್ಮನ್ ಹೇಳುವಂತೆ ಕೋಳಿಗಳ ನಾಡಿನಲ್ಲಿ ನವಿಲುಗಳು ಅವಮಾನಿಸಲ್ಪಡುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದ ಮತ್ತು ರಾಷ್ಟ್ರದ ರಾಜಕಾರಣಕ್ಕೆ ತುಮಕೂರು ಜಿಲ್ಲೆಯಿತ್ತ ಅತ್ಯಮೂಲ್ಯಕೊಡುಗೆಯನ್ನು ಸ್ವಾಮೀಜಿ ಮೆಲುಕು ಹಾಕಿದರು.
ನೂತನ ಸಚಿವ ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ವಿಧಾನಪರಿಷತ್ ಶಾಸಕ ಚಿದಾನಂದಗೌಡ, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ತುಮಕೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಅವರನ್ನುಆಶ್ರಮದ ವತಿಯಿಂದ ಸ್ವಾಮಿ ಪರಮಾನಂದಜೀ ಗೌರವಿಸಿದರು.
ಉತ್ತಮ ಶಿಕ್ಷಣದಿಂದ ಸಮರ್ಥ ವ್ಯಕ್ತಿಗಳಾಗಲು ಸಾಧ್ಯ
Get real time updates directly on you device, subscribe now.
Prev Post
Next Post
Comments are closed.