ತಾಯಿಯ ಎದೆ ಹಾಲು ಮಗುವಿಗೆ ಅಮೃತಕ್ಕೆ ಸಮಾನ

361

Get real time updates directly on you device, subscribe now.

ಕೊರಟಗೆರೆ: ತಾಯಿಯ ಎದೆ ಹಾಲು ಅಮೃತವಿದ್ದಂತೆ, ಮಗು ಜನಿಸಿದ ಗಂಟೆಯೊಳಗೆ ಎದೆ ಹಾಲನ್ನುಉಣಿಸಬೇಕು, ಮಗುವಿನ ಆರೋಗ್ಯಕ್ಕೆ ಎದೆ ಹಾಲು ರಕ್ಷಾ ಕವಚ, ಕೃತಕವಾಗಿ ತಾಯಿಯ ಎದೆ ಹಾಲನ್ನು ಸೃಷ್ಟಿಸಲು ಸಾಧ್ಯವಿಲ್ಲ, ತಾಯಿಯ ಎದೆ ಹಾಲಿನಿಂದ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ತುಮಕೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಹೊನ್ನೇಶಪ್ಪ ತಿಳಿಸಿದರು.
ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಸರಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಿಂದ ಏರ್ಪಡಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ತಾಯಿಯ ಎದೆ ಹಾಲಿನಲ್ಲಿ ಕೊಲೆಸ್ಟ್ರಮ್‌ ಮತ್ತು ಪ್ರೋಟೀನ್‌ ಅಂಶ ಇರಲಿದೆ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಕಾರ್ಯ ಪ್ರವೃತ್ತರಾದಾಗ ಮಾತ್ರ ಕಾರ್ಯಕ್ರಮ ಯಶಸ್ವಿ ಕಾಣಲಿದೆ. ಗ್ರಾಮೀಣ ಪ್ರದೇಶದಲ್ಲಿ ಇಲಾಖೆಯ ಅಧಿಕಾರಿ ವರ್ಗ ಪ್ರಚಾರ ಪಡಿಸಿ ಪೋಷಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ, ಮಗುವಿನ ಆರೋಗ್ಯ ರಕ್ಷಣೆಗೆ ಅಧಿಕಾರಿ ವರ್ಗ ಮತ್ತು ಪೋಷಕರು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಸೂಚನೆ ನೀಡಿದರು.
ಕೊರಟಗೆರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಓ ಅಂಬಿಕಾ ಮಾತನಾಡಿ ಮಗುವಿಗೆ ಕಡ್ಡಾಯವಾಗಿ 6 ತಿಂಗಳ ವರೆಗೆ ತಾಯಿಯ ಹಾಲನ್ನೇ ನೀಡಬೇಕಿದೆ. ಎರಡು ವರ್ಷದ ತನಕ ತಾಯಿಯ ಎದೆ ಹಾಲನ್ನು ಮುಂದುವರೆಸಿದರೆ ಮಗುವಿನ ಸರ್ವತೋಮುಖ ಅಭಿವೃದ್ಧಿ ಆಗಲಿದೆ. ಹಾಲಿನ ಜೊತೆಯಲ್ಲಿ ಮಗುವಿಗೆ ಅವಶ್ಯಕತೆ ಇರುವ ಪೂರಕ ಆಹಾರ ನೀಡಬೇಕಿದೆ. ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ ಎಂದು ತಿಳಿಸಿದರು.
ಕೊರಟಗೆರೆ ಸಿಡಿಪಿಓ ಇಲಾಖೆಯ ಹಿರಿಯ ಮೇಲ್ವಿಚಾರಕಿ ನಾಗರತ್ನಮ್ಮ, ಕೋಳಾಲ ವೃತ್ತದ ಮೇಲ್ವಿಚಾರಕಿ ಅನಿತಾಲಕ್ಷ್ಮೀ, ಕೋಳಾಲ ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿ ಅಂಬಿಕಾ, ಪೋಷಣಾ ಅಭಿಯಾನ ಯೋಜನೆಯ ಸಂಯೋಜಕ ಮೋಹನಕುಮಾರ್‌, ಕೋಳಾಲ ವೃತ್ತ ಮೇಲ್ವಿಚಾರಕಿ ಅನಿತಾಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಇದ್ದರು.

Get real time updates directly on you device, subscribe now.

Comments are closed.

error: Content is protected !!