ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಜನಪರ, ರೈತಪರ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವಲ್ಲಿ ಕಾರ್ಯೋನ್ಮುಖರಾಗುವ ಮೂಲಕ ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಬಿಜೆಪಿ ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಕರೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 2ನೇ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಶೇ.50 ರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಇನ್ನುಳಿದ ಶೇ.50 ರಷ್ಟು ಮಂದಿಯೂ ಕೃಷಿ ಅವಲಂಬಿಸಲೇಬೇಕು ಎಂದರು.
ಇಂದು ಶೇ.50 ರಷ್ಟಿರುವ ಕೃಷಿ ಒಟ್ಟಾರೆ ನಮ್ಮ ಜಿಡಿಪಿಯಲ್ಲಿ ಕೃಷಿಯ ಪಾಲು 2013-14 ರಲ್ಲಿ ಕೇವಲ ಶೇ.14 ರಷ್ಟಿತ್ತು, ಶೇ.50 ರಷ್ಟು ಕೃಷಿ ಆಧಾರಿತವಾಗಿರುವ ದೇಶದಲ್ಲಿ ಒಟ್ಟಾರೆ ಜಿಡಿಪಿಯ ಪಾಲು ಕೇವಲ 14 ರಷ್ಟಿತ್ತು. ಈಗ ಶೇ.20.20 ರಷ್ಟು ಆಗಿದ್ದು, 7 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಕೊಟ್ಟಂತಹ ಜನಪರ, ರೈತಪರ ಯೋಜನೆಗಳಿಂದ ಇಂದು ಶೇ.6 ರಷ್ಟು ಜಿಡಿಪಿ ಹೆಚ್ಚಳವಾಗಿದೆ ಎಂದು ಹೇಳಿದರು.
ಇಂದು ದೇಶದಲ್ಲಿ ಪಾರ್ಲಿಮೆಂಟ್ ಅಧಿವೇಶನ ನಡೆಯುತ್ತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಯಾವ ರೀತಿ ತಮ್ಮ ನಡವಳಿಕೆಗಳನ್ನು ಮಾಡುತ್ತಿದ್ದಾರೆ ಎಂಬುದು ಇಡೀ ದೇಶವೇ ನೋಡುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತಪರ ಕೃಷಿ ಮಸೂದೆಗಳಿಂದ ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಬಹುದು ಎಂಬ ಸ್ವಾತಂತ್ರ್ಯ ಕೊಟ್ಟಿರುವಂತಹ ಐತಿಹಾಸಿಕ ನಿರ್ಣಯದ ವಿರುದ್ಧ ಅನಾವಶ್ಯಕವಾಗಿ ರೈತರಲ್ಲಿ ಗೊಂದಲ ಮೂಡಿಸುತ್ತಾ, ಲೋಕಸಭೆ ನಡೆಯುವುದಕ್ಕೆ ಅಡಚಣೆ ಉಂಟು ಮಾಡುತ್ತಿರುವುದು ಖಂಡನೀಯ ಎಂದರು.
ಯಾವುದೇ ಸಮಸ್ಯೆ, ಹೊಸ ಹೊಸ ಮಸೂದೆ ಬಂದಾಗ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನೇಕ ಸಂದರ್ಭಗಳಲ್ಲಿ ಮಸೂದೆಗಳು ತಿದ್ದುಪಡಿಯಾಗಿವೆ. ತಿದ್ದುಪಡಿಯಾದಾಗ ದೇಶದ ಜನರಲ್ಲಿ ಚರ್ಚೆ ಆಗುತ್ತದೆ. ಇದಕ್ಕೆ ಪರ ವಿರೋಧ ಇದ್ದೇ ಇರುತ್ತದೆ. ಆದರೆ ಅಂತಿಮವಾಗಿ ಬಹುಮತದ ಆಧಾರದ ಮೇಲೆ ಜನರ ಹಿತವನ್ನು ಅರ್ಥಮಾಡಿಕೊಂಡು ಆಡಳಿತ ಮತ್ತು ಪ್ರತಿಪಕ್ಷಗಳ ಜೊತೆ ಸಮಾಲೋಚನೆ ನಡೆಸಿ ಕಾರ್ಯರೂಪಕ್ಕೆ ತಂದಂತಹ ಸಂದರ್ಭದಲ್ಲಿ ಅದನ್ನು ಕಾಂಗ್ರೆಸ್ ಪಕ್ಷ ಅರ್ಥೈಸಿಕೊಳ್ಳಲಾಗದೆ ಕೇವಲ ರಾಜಕೀಯದ ಹುನ್ನಾರ, ಷಡ್ಯಂತ್ರ ಮಾಡುತ್ತಾ ತಮ್ಮ ಪಕ್ಷದ ಅಸ್ಥಿತ್ವನ್ನು ಉಳಿಸುಕೊಳ್ಳುವುದಕ್ಕೋಸ್ಕರ ದೇಶದ ದಿಕ್ಕನ್ನೇ ಬದಲಾವಣೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಾವಣಗೆರೆ ವಿಭಾಗದ ಬಿಜೆಪಿ ಸಹ ಪ್ರಭಾರಿ ಲಕ್ಷ್ಮೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿಯ ಎಲ್ಲಾ ವಿಭಾಗಗಳಿಗಿಂತಗಲೂ ರೈತ ಮೋರ್ಚಾ ಹೆಚ್ಚು ಮಹತ್ವ ಪಡೆದುಕೊಂಡಿದೆ, ರೈತ ಮೋರ್ಚಾಕ್ಕೆ ಯಾವುದೇ ಜಾತಿ, ಲಿಂಗ ಬೇಧವಿಲ್ಲ ಎಂದರು.
ಉದ್ಯೋಗ ಹರಸಿ ನಗರಗಳಿಗೆ ತೆರಳಿದ್ದ ಯುವಕರು, ವಿದ್ಯಾವಂತರು ಕೊರೊನದಿಂದ ಹಳ್ಳಿಗಳತ್ತ ವಾಪಸ್ ತೆರಳಿರುವ ಶೇ.80 ರಷ್ಟು ಮಂದಿ ಹೈನುಗಾರಿಕೆ ಸೇರಿದಂತೆ ವಿವಿಧ ಸ್ಥರಗಳ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಯೋಜನೆ ಜಾರಿಗೆ ತಂದಿದ್ದು, ಬಿಜೆಪಿ ರೈತ ಮಂಡಲಗಳು ತಂಡ ಮಾಡಿಕೊಂಡು ಶಾಲೆಗಳಲ್ಲಿ ಮುಖ್ಯೋಪಾಧ್ಯಯರ ಜೊತೆ ಚರ್ಚೆ ನಡೆಸಿ ರೈತ ಮಕ್ಕಳಿಗೆ ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು, ಕೆಲ ರೈತರಿಗೆ ಜಂಟಿ ಖಾತೆಗಳಿರುತ್ತವೆ, ಅಂತಹ ಸಮಸ್ಯೆಗಳನ್ನು ಬಗೆ ಹರಿಸಿ ಅವರಿಗೂ ಸೌಲಭ್ಯ ಸಿಗುವಂತೆ ಮಾಡುವ ಮುಖೇನ ಅಭಿಯಾನದ ರೀತಿಯಲ್ಲಿ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ್, ಜಿಲ್ಲಾ ಉಪಾಧ್ಯಕ್ಷ ಕೆ.ಕೆ.ರಮೇಶ್, ತರಕಾರಿ ಮಹೇಶ್, ನಗರ ರೈತಮೋರ್ಚಾ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಭಾಗವಹಿಸಿದ್ದರು.
ಕೇಂದ್ರ, ರಾಜ್ಯಸರ್ಕಾರಗಳ ಯೋಜನೆಯನ್ನು ಜನರಿಗೆ ತಿಳಿಸಿ
Get real time updates directly on you device, subscribe now.
Next Post
Comments are closed.