ಉಸಿರು ನಿಂತವರ ಹೆಸರಲ್ಲಿ ಹಸಿರು ಬೆಳೆಸುವ ಕಾರ್ಯ

125

Get real time updates directly on you device, subscribe now.

ಮಧುಗಿರಿ: ತಾಲೂಕು ಕಾಂಗ್ರೆಸ್‌ ಸಮಿತಿಯಂದ ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್‌-19ಗೆ ತುತ್ತಾಗಿ ಮೃತಪಟ್ಟವರ ಸ್ಮರಣಾರ್ಥವಾಗಿ ಆ.14 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಕಸಬಾ ಜಡೇಗೊಂಡನಹಳ್ಳಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್ ಬಾಬು ತಿಳಿಸಿದರು.
ಮಂಗಳವಾರ ಪಟ್ಟಣದ ಕೆ.ಎನ್‌.ರಾಜಣ್ಣ ಅವರ ಸ್ವಗೃದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರ ಸೂಚನೆ ಮೇರೆಗೆ ಕ್ಷೇತ್ರದ 33 ಗ್ರಾಪಂಗಳ 248 ಬೂತ್‌ಗಳಲ್ಲಿ 5,500 ಸಾವಿರಕ್ಕೂ ಅಧಿಕ ಸಸಿ ನೆಡುವ ಮೂಲಕ ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ಗೆ ತುತ್ತಾಗಿ ಉಸಿರು ನಿಂತವರ ಹೆಸರಲ್ಲಿ ಹಸಿರು ಬೆಳೆಸುವ ನಿಟ್ಟಿನಲ್ಲಿ ಸದಾ ಅವರ ನೆನಪು ಹಸಿರಾಗಿಸುವ ಕಾರ್ಯಕ್ರಮ ಆಯೋಜಿಸಿದ್ದು ಗ್ರಾಪಂ ವ್ಯಾಪ್ತಿಯ ಉದ್ದಗಲಕ್ಕೂ ಜನಮನದಲ್ಲಿ ಹೊಸ ಚೈತನ್ಯ ತುಂಬುವ ಮೂಲಕ ಉತ್ಸುಕರಾಗಿರುವ ಜನರೊಟ್ಟಿಗೆ ಕೈ ಜೋಡಿಸಿ ಶಾಲಾ ಕಾಂಪೌಂಡ್‌, ರಸ್ತೆ ಬದಿ, ಗುಂಡುತೋಪು, ಸಾರ್ವಜನಿಕ ಸ್ಥಳ, ಬಸ್‌ ನಿಲ್ದಾಣ ಮತ್ತಿತರೆ ಕಡೆ ಬೇವು, ನೇರಳೆ, ಜಂಬು ನೇರಳೆ, ಮತ್ತಿ, ಹಲಸು, ನೇರಳೆ, ಕಾಡು ಬಾದಾಮಿ, ಬಿಲ್ವಪತ್ರೆ, ನೆಲ್ಲಿ, ಗೋಡಂಬಿ, ಹೀಗೆ ಹಲವು ಸಸಿ ನೆಡುವುದಾಗಿ ಬಿ.ನಾಗೇಶ್‌ ಬಾಬು ತಿಳಿಸಿದರು.
ಈ ಮರ ಗಿಡಗಳನ್ನು ಬೆಳಸುವುದರಿಂದ ಪ್ರಾಣಿ, ಪಕ್ಷಿಗಳಿಗೆ ಆಹಾರದ ಕೊರತೆ ನೀಗಿಸುವ ಜೊತೆಗೆ ಆಸರೆ, ಜನರಿಗೆ ನೆರಳು, ಬಿಸಿಲಿನ ತಾಪ ತಗ್ಗಿಸುವ ಮೂಲಕ ಸಾವಿರಾರು ಸಸಿಗಳು ಊರಿಗೆ ವನವಾಗಿ ಬೆಳೆಯುತ್ತವೆ ಎಂಬ ಭರವಸೆಯನ್ನು ಜನರಲ್ಲಿ ಮೂಡಿಸುವ ಸತ್ಕಾರ್ಯದಲ್ಲಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರು ತೊಡಗಿದ್ದಾರೆ. ಅಂದು 248 ಬೂತ್‌ಗಳಲ್ಲೂ ಏಕಕಾಲಕ್ಕೆ ಸಸಿ ನೆಡೆಲು ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಿದ್ದು, ಗುಂಡಿಗಳನ್ನು ತೆಗೆಯುವ ಮತ್ತು ಪೂರ್ವ ಸಿದ್ಧತೆ ನಡೆಸಿದ್ದು, ತಾಲ್ಲೂಕಿನ ಜನತೆ ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮುಖಂಡರು ಕೆ.ಎನ್‌.ರಾಜಣ್ಣ ಅವರು ಹಸಿರು ಕ್ರಾಂತಿಯ ಕಾರ್ಯಕ್ರಮಕ್ಕೆ ತುಂಬ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಸಿಗಳನ್ನು ಸಂರಕ್ಷಿಸಿ ಮರವಾಗಿ ಬೆಳೆಸಿ ಉಳಿಸುವ ಮಹತ್ತರ ಜವಾಬ್ದಾರಿ ಎಲ್ಲರದ್ದು ಎಂದರು.
ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕ್ರಿಬ್ಕೋ ರಾಷ್ಟ್ರೀಯ ನಿರ್ದೇಶಕ ಆರ್‌.ರಾಜೇಂದ್ರ, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಆರ್‌.ರಾಜ್ ಗೋಪಾಲ್‌, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ತಾಲ್ಲೂಕು ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್‌.ಡಿ.ಕೆ.ವೆಂಕಟೇಶ್‌, ಕಾಂಗ್ರೆಸ್‌ ಪಕ್ಷದ ಮಹಿಳಾ ಘಟಕ, ಯುವ ಕಾಂಗ್ರೆಸ್‌ ಘಟಕ ಅಲ್ಪಸಂಖ್ಯಾತರ ಘಟಕ, ಎಸ್ಸಿ, ಎಸ್ಟಿ ಹಾಗೂ ಕಾಂಗ್ರೆಸ್‌ ಪಕ್ಷದ ಎಲ್ಲಾ ಹಂತದ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಿಳಿಸಿದರು.
ಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಆರ್‌.ರಾಜ್‌ಗೋಪಾಲ್‌, ಯುವ ಅಧ್ಯಕ್ಷ ಎಸ್ಡಿಕೆ ವೆಂಕಟೇಶ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಸುವರ್ಣಮ್ಮ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ, ಮುಖಂಡರಾದ ರಂಗನಾಥ್‌, ವೆಂಕಟರಾಮಯ್ಯ, ಶಿವಣ್ಣ, ರಘು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!