ಕೆ.ಎಸ್‌.ಈಶ್ವರಪ್ಪ ಮನಬಂದಂತೆ ಮಾತನಾಡುವುದು ನಿಲ್ಲಿಸಲಿ: ಪರಂ

ಬೊಮ್ಮಾಯಿ ಹೆಚ್ ಡಿ ಡಿ ಮನೆಗೆ ಹೋಗಿದ್ರಲ್ಲಿ ತಪ್ಪಿಲ್ಲ

382

Get real time updates directly on you device, subscribe now.

ತುಮಕೂರು: ದೇಶದ ಅತ್ಯುನ್ನತ ಸ್ಥಾನ ಪಡೆದ ಹಾಗೂ ಹಿರಿಯ ಮುತ್ಸದ್ಧಿ ರಾಜಕಾರಣಿ ಎಂದೇ ಖ್ಯಾತಿ ಪಡೆದಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಅವರು ಭೇಟಿ ಮಾಡಿದರೆ ತಪ್ಪೇನು, ಇದು ಸಂಸ್ಕಾರ ಇರುವ ಯಾರೇ ಆಗಲಿ ಮಾಡುವ ಕೆಲಸ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ನಗರದ ಸಿದ್ದಾರ್ಥ ಮೆಡಿಕಲ್‌ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ ವಿಷಯ ಹೆಚ್ಚು ಚರ್ಚೆ ಆಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಮುಖ್ಯಮಂತ್ರಿಗಳಾಗಿದ್ದವರ ಮಗನಾಗಿ ಇರುವ ಬೊಮ್ಮಾಯಿ ಅವರು ಚಿಂತನೆ ಮಾಡಿ ದೇವೇಗೌಡರ ಮನೆಗೆ ಹೋಗಿದ್ದಾರೆ ಎಂದರು.
ಬೊಮ್ಮಾಯಿ ಅವರು ಅವಧಿ ಪೂರ್ಣಗೊಳಿಸುವ ವಿಶ್ವಾಸ ಇದೆ, ಆನಂದ ಸಿಂಗ್‌ ಖಾತೆ ಕ್ಯಾತೆಗೆ ಸಂಬಂಧಿಸಿದಂತೆ ನಮಗೇನು ಗೊತ್ತಿಲ್ಲ, ರಾಜಿನಾಮೆ ನೀಡುವುದು ಅವರಿಗೆ ಬಿಟ್ಟ ವಿಚಾರ, ಅವರು ಕಾಂಗ್ರೆಸ್‌ಗೆ ಬರುವುದಾದರೆ ಮುಂದೆ ನೋಡೋಣ ಎಂದರು.
ಬೊಮ್ಮಾಯಿ ಅವರು ನನಗೆ ಒಳ್ಳೆಯ ಸ್ನೇಹಿತರು, ಅವರಿಗೆ ಅನುಭವ ಇದೆ, ಎಲ್ಲವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕೆ.ಎಸ್‌.ಈಶ್ವರಪ್ಪ ಪದೇ ಪದೆ ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ, ಇದನ್ನ ಸಹಿಸಲು ಸಾಧ್ಯವಿಲ್ಲ, ಇದು ಮೊದಲೇನಲ್ಲ, ಹಲವು ಬಾರಿ ಈಶ್ವರಪ್ಪ ಬಾಯಿ ಹರಿ ಬಿಟ್ಟಿದ್ದಾರೆ, ತನ್ನ ಹಿರಿತನ ಹಾಗೂ ಉಪ ಮುಖ್ಯಮಂತ್ರಿ ಆದವರು, ಹಾಲಿ ಸಚಿವರಾಗಿದ್ದಾರೆ, ಹೇಗೆ ಮಾತನಾಡಬೇಕು ಎಂಬ ಅರಿವು ಇಲ್ಲದೆ ಇರುವುದು ದುರಾದೃಷ್ಟಕರ ಸಂಗತಿ, ಇನ್ನು ಮುಂದೆ ಅವರ ನಡೆಯನ್ನು ಸರಿಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಶಾಸಕ ಜಮೀರ್‌ ಅಹಮ್ಮದ್‌ ಅವರ ಮನೆಗೆ ಐಟಿ ರೈಡ್ ಗೆ ಸಂಬಂಧಿಸಿದಂತೆ ನಾವು ಈಗಾಗಲೇ ಹಲವು ಬಾರಿ ಹೇಳಿದ್ದೇವೆ, ಕೇಂದ್ರ ಸರ್ಕಾರ ಐಟಿ, ಸಿಬಿಐ, ಈಡಿ ಸೇರಿದಂತೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ಪದೇ ಪದೆ ಐಟಿಯವರು ಕಾಂಗ್ರೆಸ್‌ ಪಕ್ಷದವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಆಕೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಜಮೀರ್‌ ಅಹಮ್ಮದ್‌ ಮನೆಗೆ ಭೇಟಿ ನೀಡಿ ಸಮಧಾನ ಹೇಳಿದ್ದಾರೆ, ಅದು ಕಷ್ಟದಲ್ಲಿ ಇದ್ದಾಗ ಭೇಟಿ ಮಾಡೋದು ಸಹಜ, ಆದರೆ ಸಿದ್ದರಾಮಯ್ಯ ಅವರು ಹೋಗಿಲ್ಲ, ಅಂತರ ಕಾಪಾಡಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ, ಅವರು ಹೋಗ ಬಹುದು ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!