ರೋಗಿಗಳಿಗೆ ಆಸ್ಪತ್ರೆ ಇಲ್ಲ, ಮಕ್ಕಳಿಗೆ ಸ್ಕೂಲ್‌ ಇಲ್ಲ!

ರಸ್ತೆ ಅಗಲೀಕರಣದಿಂದ ಸರ್ಕಾರಿ ಶಾಲೆ, ಆಸ್ಪತ್ರೆಗೆ ಎದುರಾಯ್ತು ಆಪತ್ತು

287

Get real time updates directly on you device, subscribe now.

ಗುಬ್ಬಿ: ಎಪ್ಪತ್ತು ವರ್ಷದ ಹಿಂದೆ ಆರಂಭವಾಗಿದ್ದ ಸರಕಾರಿ ಶಾಲೆ, ಎರಡು ದಶಕಗಳ ಹಿಂದೆ ನಿರ್ಮಾಣವಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಎನ್‌.ಎಚ್‌.206 ರಸ್ತೆ ಅಗಲೀಕರಣದಿಂದ ಸಂಪೂರ್ಣ ಧ್ವಂಸವಾಗಿದೆ. ಇದರಿಂದ ಸಾಕಷ್ಟು ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ನಾವು ಓದಿದ ಶಾಲೆಯನ್ನು ಕಣ್ಣ ಮುಂದೆಯೇ ಕೆಡವುತ್ತಿರುವುದು ನೋಡಿ ಶಾಲೆ ಹೋಯಿತಲ್ಲ ಎಂಬ ಕೊರಗು ಒಂದು ಕಡೆಯಾದರೆ, ಇತ್ತ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸರ್ಕಾರಿ ಆಸ್ಪತ್ರೆಯು ರಸ್ತೆ ಆಗಲೀಕರಣಕ್ಕೆ ಕೆಡವಲಾಗಿದೆ, ಈಗ ಇರುವ ಚಿಕ್ಕ ಕೊಠಡಿಯಲ್ಲೇ ಚಿಕಿತ್ಸೆ ನೀಡುವಂತಾಗಿದೆ.
ಇಲ್ಲಿ ಕೇವಲ ಮೂರು ಜನರಿಗೆ ಚಿಕಿತ್ಸೆ ನೀಡಲು ಆಗಲ್ಲ, ನಿಲ್ಲುವುದಕ್ಕೂ ಕೂರುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಯಿದ್ದು, ಶೀಘ್ರ ನೂತನ ಆಸ್ಪತ್ರೆ ನಿರ್ಮಾಣವಾದರೆ ಈ ಭಾಗದ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಎನ್‌.ಎಚ್‌.206 ರಸ್ತೆಯ ದಂಡೆಯಲ್ಲೇ ಇದ್ದ ದೊಡ್ಡಗುಣಿ ಗ್ರಾಮದ ಆಸ್ಪತ್ರೆ ಪ್ರತಿನಿತ್ಯ ನೂರಾರು ಜನರಿಗೆ ಚಿಕಿತ್ಸೆ ನೀಡುತ್ತಿತ್ತು, ಆದರೆ ಆಸ್ಪತ್ರೆಯ ಕಟ್ಟಡ ಕೆಡವಿರುವುದರಿಂದ ಅವ್ಯವಸ್ಥೆಯ ಗೂಡಾಗಿದೆ, ಎನ್‌.ಎಚ್‌.206 ರಸ್ತೆ ಅಗಲೀಕರಣಕ್ಕೆ ನೂರಾರು ಮರ ಬಲಿಯಾದವು, ಇನ್ನೂ ಸಾಕಷ್ಟು ವಾಸವಿದ್ದಂತಹ ಮನೆಗಳು ಕೂಡ ಧರೆಗುರುಳಿವೆ, ಇದರ ಮಧ್ಯೆ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ಸರ್ಕಾರಿ ಆಸ್ಪತ್ರೆಯ ಈ ಭಾಗದ ಹತ್ತಾರು ಹಳ್ಳಿಯ ಜನರಿಗೆ ಸಾಕಷ್ಟು ಅನಾನುಕೂಲವಾಗಿದೆ.
ಬಹುತೇಕ ಅಪಘಾತ ವಲಯವಾಗಿರುವ ದೊಡ್ಡಗುಣಿ ಭಾಗದಲ್ಲಿ ಈ ಆಸ್ಪತ್ರೆ ಸಾಕಷ್ಟು ಅನುಕೂಲಕರವಾಗಿತ್ತು, ಜನರ ಜೀವ ಉಳಿಸುವ ಕೆಲಸ ದಿನನಿತ್ಯ ಆಗುತ್ತಿತ್ತು, ಈ ಆಸ್ಪತ್ರೆಗೆ ಕೊಂಡ್ಲಿ ಕ್ರಾಸ್‌, ಕೊಂಡ್ಲಿ, ದೊಡ್ಡಗುಣಿ, ನೇರಲೆಕೆರೆ, ಸೀಗೆಹಳ್ಳಿ, ತಗ್ಗಿಹಳ್ಳಿ, ದಿಂಡದಹಳ್ಳಿ, ಬಾಡೇನಹಳ್ಳಿ ಸೇರಿದಂತೆ ಹಲವು ಕಡೆಯಿಂದ ಸಾಕಷ್ಟು ಜನರು ಈ ಆಸ್ಪತ್ರೆಗೆ ಪ್ರತಿನಿತ್ಯ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದರು.
ಆಸ್ಪತ್ರೆ ನಿರ್ಮಾಣಕ್ಕೆ ಸರಿಯಾದ ಜಾಗವು ಇಲ್ಲಿ ಇಲ್ಲ, ಇರುವಂತಹ ಸ್ವಲ್ಪ ಜಾಗದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದಾಗ ಮೂಲಭೂತ ಸೌಲಭ್ಯ ಒದಗಿಸಿ ಆಸ್ಪತ್ರೆ ನಿರ್ಮಾಣ ಮಾಡಬಹುದಾಗಿದೆ, ಸರಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಇತ್ತ ಕಡೆ ಹೆಚ್ಚಿನ ಗಮನ ಹರಿಸಿ ಆಸ್ಪತ್ರೆ ನಿರ್ಮಾಣ ಮಾಡಬೇಕಾಗಿ ಸಾರ್ವಜನಿಕರ ಒತ್ತಡವೂ ಇದೆ.

Get real time updates directly on you device, subscribe now.

Comments are closed.

error: Content is protected !!