ಶಾರದ ಮಹಿಳಾ ಬ್ಯಾಂಕ್ ಗೆ ಎನ್‌.ಎಸ್‌.ಜಯಕುಮಾರ್‌ ಅಧ್ಯಕ್ಷ

441

Get real time updates directly on you device, subscribe now.

ತುಮಕೂರು: ತೀವ್ರ ಸಂಕಷ್ಟದಲ್ಲಿದ್ದ ನಗರದ ಜೆ.ಸಿ.ರಸ್ತೆಯಲ್ಲಿರುವ ಶಾರದ ಮಹಿಳಾ ಕೋ ಆಪರೇಟಿವ್‌ ಬ್ಯಾಂಕ್ ನ ಆಡಳಿತ ಮಂಡಳಿಯ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಾ.ಎನ್‌.ಎಸ್‌.ಜಯಕುಮಾರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣಾ ದಿನಾಂಕದಿಂದ ಉಳಿದ ಅವಧಿಯವರೆಗೆ ಅಧ್ಯಕ್ಷರಾಗಿ ಡಾ.ಎನ್‌.ಎಸ್‌.ಜಯಕುಮಾರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬ್ಯಾಂಕ್ ನ ರಿಟರ್ನಿಂಗ್‌ ಆಫೀಸರ್‌ ಜಿ.ಎಸ್‌.ಪಾರ್ಥ ಅವರು ಪ್ರಕಟಿಸಿದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಶಾರದಾ ಕೋ ಆಪರೇಟಿವ್‌ ಬ್ಯಾಂಕ್ ಬಹಳ ಹಳೆಯ ಸಂಸ್ಥೆ, ಸಹಕಾರಿ ಕ್ಷೇತ್ರವನ್ನು ಉತ್ತಮವಾಗಿ ಬೆಳೆಸಿಕೊಂಡು ಬಂದಂತಹ ಸಂಸ್ಥೆಯಾಗಿದ್ದು, ಕಾರಣಾಂತರದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ಇಂದು ನಾವೆಲ್ಲಾ ಸೇರಿ ಉಳಿಸಿಕೊಳ್ಳಬೇಕೆಂದು ನಿರ್ಧರಿಸಲಾಗಿದ್ದು, ಈ ಪ್ರಯೋಗ ಇಡೀ ದೇಶ ಮತ್ತು ಸಹಕಾರಿ ಕ್ಷೇತ್ರದಲ್ಲೇ ಮೊಟ್ಟ ಮೊದಲ ಪ್ರಯೋಗವಾಗಿದೆ, ಈ ರೀತಿಯ ಅವಕಾಶವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವಾಗಲಿ ಯಾರಿಗೂ ಕೊಟ್ಟಿರಲಿಲ್ಲ, ಈ ಅವಕಾಶ ನನಗೆ ದೊರೆತಿದ್ದು, ಇದು ಸವಾಲಿನ ಕೆಲಸವಾಗಿದೆ ಎಂದರು.
ನನಗೆ ಈ ಬ್ಯಾಂಕ್‌ ಮುನ್ನಡೆಸಲು ಅವಕಾಶ ನೀಡುವಲ್ಲಿ ಪ್ರಮುಖರಾಗಿರುವ ರಿಜಿಸ್ಟ್ರಾರ್‌ ಕಾಂತರಾಜು ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು, ಜಿಲ್ಲೆಯಲ್ಲಿ ಸಂಸ್ಥೆ ಕೆಡಬಾರದು, ಅಪವಾದ ಬರಬಾರದು ಎಂದು ಕಾಳಜಿ ವಹಿಸಿ ಸರ್ಕಾರದಿಂದ ಆದೇಶ ಕೊಡಿಸಲು ಇವರ ಪಾತ್ರವೂ ಬಹುಮುಖ್ಯವಾಗಿದೆ. ಬ್ಯಾಂಕ್ ನ ಎಲ್ಲರೂ ಕೈಜೋಡಿಸಿದರೆ ಉತ್ತಮವಾಗಿ ಬೆಳೆಸುವುದರಲ್ಲಿ ಅನುಮಾನವಿಲ್ಲ ಎಂದರು.
ನಾನು ಏಕಾಏಕಿ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಬಂದಿಲ್ಲ, ನಾನು ಅನುಭವ ಇರುವವರ ಬಳಿ ಅನುಭವ ಪಡೆದು ಬಂದಿದ್ದೇನೆ, ಮತ್ತೆ ನನಗೆ ಸಂಕಷ್ಟದಲ್ಲಿರುವ ಸಂಸ್ಥೆಯ ಅಧಿಕಾರ ಹಿಡಿಯಲು ದೇವರ ದಯೆಯಿಂದ ಅವಕಾಶ ದೊರೆತಿದೆ ಎಂದರು.
ದಿನೇ ದಿನೆ ಕಾನೂನು ತುಂಬಾ ಬದಲಾವಣೆಯಾಗುತ್ತಿದೆ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಸಹಕಾರ ಇಲಾಖೆಯ ಕಾನೂನಿಗೆ ಒಳಪಟ್ಟು ನಾವು ಕೆಲಸ ಮಾಡಬೇಕು. ಮನಬಂದಂತೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಿದರೆ ಬಹಳ ಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು.
ಶ್ರೀಶಾರದ ಮಹಿಳಾ ಕೋ ಆಪರೇಟಿವ್‌ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ.ಎನ್‌.ಎಸ್‌.ಜಯಕುಮಾರ್‌ ಅವರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಇದು ಒಂದು ಉತ್ತಮ ಬ್ಯಾಂಕ್‌ ಆಗಿ ಬೆಳೆದು ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಆಶಿಸಿದರು.
ಈ ಬ್ಯಾಂಕ್‌ ಸ್ವಲ್ಪ ತೊಂದರೆಗೆ ಸಿಲುಕಿ ಸಂಕಷ್ಟಕ್ಕೆ ಒಳಗಾಗಿತ್ತು, ಈ ಬ್ಯಾಂಕ್ ನ್ನು ಮತ್ತೆ ಪ್ರವರ್ಧಮಾನಕ್ಕೆ ತರಲು ಶ್ರಮಿಸುತ್ತೇನೆ, ನನಗೊಂದು ಅವಕಾಶ ನೀಡಿ ಎಂದು ಜಯಕುಮಾರ್‌ ಮನವಿ ಮಾಡಿದರು. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ, ಅವರಿಗೆ ಬ್ಯಾಂಕ್‌ ಮುನ್ನಡೆಸಲು ಅವಕಾಶ ಕೊಡಿಸಲಾಗಿದೆ. ಜಯಕುಮಾರ್‌ ನೇತೃತ್ವದಲ್ಲಿ ಬ್ಯಾಂಕ್‌ ಉತ್ತಮ ಪ್ರಗತಿ ಕಾಣಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾರದ ಮಹಿಳಾ ಬ್ಯಾಂಕ್ ನ ಉಪಾಧ್ಯಕ್ಷೆ ವಾರೀಜ ಹಾಗೂ ನಿರ್ದೇಶಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!