ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲಾ ಕಳಪೆ: ಡಾ.ರಫಿಕ್‌ ಅಹಮದ್

502

Get real time updates directly on you device, subscribe now.

ತುಮಕೂರು: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ 591 ಕೋಟಿ ಕೇಂದ್ರ, ರಾಜ್ಯ ಸರ್ಕಾರದಿಂದ ಅನುದಾನ ಬಂದಿದೆ, ಆದರೆ ಕಾಮಗಾರಿಗೆ ದುಂದು ವೆಚ್ಚ ಆಗ್ತಿದೆ, ಎಬಿಡಿ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ, ಬೇರೆ ಏರಿಯಾದಲ್ಲಿ ಕೆಲಸಗಳು ನಡೆಯುತ್ತಿವೆ, ಎಲ್ಲಾ ಕಡೆ ಕಳಪೆ ಕಾಮಗಾರಿ ನಡೆಯುತ್ತಿದೆ, ಕಾಮಗಾರಿ ಜನರಿಗೆ ನಿರಾಸೆ ಮೂಡಿಸುತ್ತಿದೆ ಎಂದು ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರೀ ಪಾರ್ಕ್‌ ಅಭಿವೃದ್ಧಿಗೆ ಹಣ ಖರ್ಚು ಮಾಡಲಾಗುತ್ತಿದೆ, ಪಾರ್ಕ್‌ ಅಭಿವೃದ್ಧಿ ಮಾಡಲಿ ಆದರೆ ಅದಕ್ಕು ಮೊದಲು ರಸ್ತೆ, ಚರಂಡಿ ಅಭಿವೃದ್ಧಿ ಆಗಬೇಕು, ಅಮಾನಿಕೆರೆಗೆ ನೀರು ಹರಿಸಲು ಎಂಬತ್ತು ಕೋಟಿ ಖರ್ಚು ಮಾಡಲಾಗ್ತಿದೆ, ಅದು ಯಾಕೆ ಎಂಬುದೇ ಅರ್ಥ ಆಗುತ್ತಿಲ್ಲ ಇನ್ನು ರಿಂಗ್‌ ರೋಡ್ ಅಭಿವೃದ್ಧಿಗೆ ನಾನು ಆದ್ಯತೆ ನೀಡ್ದೆ, ಆದರೆ ಈಗ ನೂರು ಕೋಟಿ ಅನುದಾನ ರಸ್ತೆಗೆ ಬಳಸಲಾಗಿದೆ, ಅಷ್ಟು ಹಣ ಖರ್ಚು ಆಗಿದೆಯಾ ಗೊತ್ತಿಲ್ಲ, ಇನ್ನು ಸ್ಟೇಡಿಯಂಗೆ ಅಂತಾರಾಷ್ಟ್ರಿಯ ಮಟ್ಟದ ಟಚ್‌ ನೀಡಬಹುದಿತ್ತು, ಆದರೆ ಅಲ್ಲಿ ಏನು ಕಾಮಗಾರಿ ನಡೆಯುತ್ತಿದೆ ಗೊತ್ತಾಗ್ತ ಇಲ್ಲ, ಬಸ್‌ ನಿಲ್ದಾಣ ಕಾಮಗಾರಿಯಲ್ಲೂ ಹಣ ದುಂದು ವೆಚ್ಚ ಮಾಡಲಾಗ್ತಿದೆ. ಇಲ್ಲಿನ ಕಳಪೆ ಕಾಮಗಾರಿ, ದುಂದು ವೆಚ್ಚದ ಬಗ್ಗೆ ಸ್ಮಾರ್ಟ್ ಸಿಟಿಗೆ ಸಂಬಂಧಪಟ್ಟ ಕಚೇರಿಗೆ ಪತ್ರ ಬರೆಯುತ್ತೇನೆ ಎಂದರು.
ಸಿಎಂ ಅನುದಾನ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ, ಸಿಎಂ ವಿಶೇಷ ಅನುದಾನ ತಂದಿದ್ದಷ್ಟೆ ಶಾಸಕರ ಸಾಧನೆ, ಆದರೆ ಇಲ್ಲೂ ಹದಿನೇಳು ಕೋಟಿ ಹಣ ಸಮಾಂತರವಾಗಿ ಹಂಚಿಕೆ ಆಗಿಲ್ಲ, ಅಲ್ಪ ಸಂಖ್ಯಾತರು ಪ್ರತಿನಿಧಿಸಿರುವ ವಾರ್ಡ್‌ ಗಳಿಗೆ ಅನ್ಯಾಯ ಮಾಡಲಾಗಿದೆ, ಕಾಂಗ್ರೆಸ್‌ ಸದಸ್ಯರ ವಾರ್ಡ್ ಗಳ ಕಡೆಗಣನೆ ಮಾಡಲಾಗಿದೆ, ಹಿಂದುಳಿದ ವಾರ್ಡ್ ಗಳಿಗೆ ಹೆಚ್ಚು ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಒಂದೂವರೆ ವರ್ಷದಲ್ಲಿ ಕೊರೊನಾ ಜನರನ್ನು ಕಾಡಿತು, ಜನತೆ ಸಾಕಷ್ಟು ತೊಂದರೆ ಅನುಭವಿಸಿದರು, ಬಡವರ ಬದುಕು ಮೂರಾಬಟ್ಟೆಯಾಯ್ತು, ಕಾಂಗ್ರೆಸ್‌ ಪಕ್ಷ ಬಡವರ ನೆರವಿಗೆ ನಿಂತಿತು, ಆದರೆ ಸರ್ಕಾರ ಘೋಷಿಸಿರುವ ಪರಿಹಾರ ಇನ್ನು ಜನರ ಕೈ ಸೇರಿಲ್ಲ, ಎರಡನೇ ಅಲೆಗೆ ಸರ್ಕಾರ ಸಿದ್ಧತೆ ಇಲ್ಲದೆ ಸಾವು ನೋವು ಹೆಚ್ಚಾಯ್ತು, ಇದು ಸರ್ಕಾರದ ವೈಫಲ್ಯ,
ಮೂರನೇ ಅಲೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದರು.
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಕೃಷ್ಣ, ಪಾಲಿಕೆ ಮಾಜಿ ಮೇಯರ್‌ ಫರೀದಾ ಬೇಗಂ, ಸದಸ್ಯರಾದ ಕುಮಾರ್‌, ನಯಾಜ್‌ ಅಹಮದ್‌, ಮಹೇಶ್‌, ಮುಖಂಡರಾದ ಆಟೋರಾಜು, ಸುಜಾತ, ಪುಟ್ಟರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!