ಜಿಂಕೆ ಅಡ್ಡ ಬಂದು ವಾಹನ ಸವಾರ ಸಾವು

297

Get real time updates directly on you device, subscribe now.

ಕೊಡಿಗೇನಹಳ್ಳಿ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಜಿಂಕೆಯೊಂದು ಅಡ್ಡ ಬಂದ ಪರಿಣಾಮ ದ್ವಿಚಕ್ರ ವಾಹನ ಸವಾರ ಬಿದ್ದು ತಲೆಗೆ ಗಂಭೀರ ಪೆಟ್ಟಾದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ.
ತಾಲ್ಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಕೊಡಾಗದಾಲ ರಸ್ತೆಯಲ್ಲಿನ ಸಿಂಗರಗೊಂಡನಹಳ್ಳಿ ಗ್ರಾಮದ ಸಮೀಪದಲ್ಲಿ ಸ್ವಗ್ರಾಮಕ್ಕೆ ತೆರಳುತಿದ್ದ ದ್ವಿಚಕ್ರ ವಾಹನ ಸವಾರ ಗಿರಿಯಪ್ಪ (52)ನ ದ್ವಿಚಕ್ರ ವಾಹನಕ್ಕೆ ಜಿಂಕೆಯೊಂದು ಅಡ್ಡ ಬಂದ ಪರಿಣಾಮ ವಾಹನ ನಿಯಂತ್ರಿಸಲಾಗದೆ ಆಯ ತಪ್ಪಿ ರಸ್ತೆಗೆ ಬಿದ್ದು ಮೃಪಟ್ಟಿದ್ದಾನೆ.
ಜಿಂಕೆ ಪ್ರಾಣಾಪಯದಿಂದ ಪಾರಾಗಿದ್ದು, ಕೊಡಿಗೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Get real time updates directly on you device, subscribe now.

Comments are closed.

error: Content is protected !!