ಚರಂಡಿ ಒತ್ತುವರಿಯಿಂದ ರಸ್ತೆಗೆ ಹರಿಯುತ್ತೆ ಕೊಳಚೆ ನೀರು

ಕೆಸರುಮಯವಾದ ರೋಡ್‌- ನಾಗರಿಕರ ಆಕ್ರೋಶ

154

Get real time updates directly on you device, subscribe now.

ಕುಣಿಗಲ್‌: ಪಟ್ಟಣದ ಮೂರನೇ ವಾರ್ಡ್‌ ಪ್ರದೇಶಕ್ಕೆ ಸೇರಿರುವ ದೊಡ್ಡಪೇಟೆ ಮುಖ್ಯರಸ್ತೆಯಲ್ಲಿ ಪ್ರಭಾವಿಗಳಿಂದ ಚರಂಡಿ ಒತ್ತುವರಿಯಾದ ಹಿನ್ನೆಲೆಯಲ್ಲಿ ಮಳೆನೀರು ಸೇರಿದಂತೆ ಕೊಳಚೆ ನೀರು ಮುಖ್ಯರಸ್ತೆಯಲ್ಲಿ ನಿಂತು ನಾಗರಿಕರು ಪರದಾಡುವಂತಾಗಿದ್ದು ಪುರಸಭೆ ಆಡಳಿತದ ದಿವ್ಯ ನಿರ್ಲಕ್ಷ್ಯದ ವಿರುದ್ಧ ನಾಗರಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮೂರನೆ ವಾರ್ಡ್‌ ಪ್ರದೇಶಕ್ಕೆ ಸೇರುವ ದೊಡ್ಡಪೇಟೆ ಮುಖ್ಯರಸ್ತೆಯು ಪ್ರಮುಖ ವಾಣಿಜ್ಯ ವಹಿವಾಟು ನಡೆಸುವ ತಾಣವಾಗಿದೆ. ಈ ರಸ್ತೆಯ ಒಂದು ಬದಿಯಲ್ಲಿ ಮುಖ್ಯಚರಂಡಿ ಇದ್ದು, ಕಾಲ ಕ್ರಮೇಣ ಚರಂಡಿಗೆ ಹೊಂದಿಕೊಂಡಿರುವ ಮಳಿಗೆ ಮಾಲೀಕರು ಚರಂಡಿ ಮುಚ್ಚಿ ಒತ್ತುವರಿ ಮಾಡಿಕೊಂಡು ಮಳಿಗೆ ಮೆಟ್ಟಿಲು ನಿರ್ಮಿಸಿರು ಕಾರಣ ಮಳೆ ನೀರು ಸೇರಿದಂತೆ ಕೊಳಚೆ ನೀರು ಹರಿಯಲು ಜಾಗ ಇಲ್ಲದೆ ನೇರವಾಗಿ ರಸ್ತೆಯಲ್ಲಿ ನಿಲ್ಲುವ ಕಾರಣ, ಪುರಸಭೆ ಹಲವಾರು ಬಾರಿ ಕೋಟ್ಯಂತರ ರೂ. ವ್ಯಯಿಸಿ ರಸ್ತೆ ನಿರ್ಮಿಸಿದರೂ ರಸ್ತೆಯಲ್ಲಿ ಗುಂಡಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಈ ಮುಖ್ಯರಸ್ತೆಯು ಪಟ್ಟಣದ 7 ವಾರ್ಡ್ ಗಳನ್ನು ಸಂಪರ್ಕಿಸುವ ಮುಖ್ಯರಸ್ತೆಯಾಗಿರುವ ಕಾರಣ ಜನನಿಬಿಡ ರಸ್ತೆಯಾಗಿದೆ. ಪುರಸಭೆ ಚರಂಡಿ ಒತ್ತುವರಿಯಾಗಿದ್ದರೂ ಪುರಸಭೆ ಜನಪ್ರತಿನಿಧಿಗಳಾಗಲಿ, ಪುರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ದಿನಾಲೂ ನಾಗರಿಕರು ಪರದಾಡುವ ಸ್ಥಿತಿ ಉಂಟಾಗಿದೆ. ಮಳೆ ಬಂದರಂತೂ ಹಲವಾರು ಬೈಕ್‌ ಸವಾರರು ಬಿದ್ದು ಗಾಯಗೊಳ್ಳುವಂತಾಗಿದೆ. ಇನ್ನಾದರೂ ನಿದ್ದೆಯಲ್ಲಿರುವ ಪುರಸಭೆ ಆಡಳಿತ ಎಚ್ಚೆತ್ತು ಒತ್ತುವರಿಗೆ ಒಳಗಾಗಿರುವ ಪುರಸಭೆ ಚರಂಡಿ ತೆರವುಗೊಳಿಸಿ, ಏಳು ವಾರ್ಡ್‌ ಪ್ರದೇಶದ ಜನತೆಯ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರಾದ ಮಾರುತಿ, ಹರೀಶ್‌, ರಾಜು ಇತರರು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!