ಜನಾಶೀರ್ವಾದ ಯಾತ್ರೆಗೆ ಜನಸಾಗರ- ಪಟಾಕಿ ಸಿಡಿಸಿ ಕಾರ್ಯಕರ್ತರ ಸಂಭ್ರಮ

294

Get real time updates directly on you device, subscribe now.

ತುಮಕೂರು: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿಯವರ ಜನಾಶೀರ್ವಾದ ಯಾತ್ರೆಗೆ ನಗರದ ಜಾಸ್ ಟೋಲ್ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು.
ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿ ಸಚಿವ ಎ.ನಾರಾಯಣಸ್ವಾಮಿಯನ್ನು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಹಾರ ತುರಾಯಿಗಳೊಂದಿಗೆ ಸ್ವಾಗತಿಸಿದರು. ಸೋಮನ ಕುಣಿತ, ಕಹಳೆ, ಜನಪದ ತಂಡಗಳ ಸದ್ದು ಸಚಿವರ ಸ್ವಾಗತಕ್ಕೆ ಮೆರಗು ಹೆಚ್ಚಿಸಿತ್ತು. ಸಮುದಾಯದ ಮುಖಂಡರು ಹಾರ ತುರಾಯಿ ಹಾಕಿ ಸಂಭ್ರಮಿಸಿ ಘೋಷಣೆ ಮೊಳಗಿಸಿದರು.
ನಂತರ ಸಚಿವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ.ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದರು, ನಂತರ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ನೀಡಿರುವ ಜವಾಬ್ದಾರಿ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುವೆ, ಶಾಸಕ, ಸಂಸದನಾದಗಲೂ ಹೋರಾಟ ಮಾಡುತ್ತಲೇ ಇದ್ದೇನೆ, ಮುಂದೆಯೂ ಮಾಡುತ್ತೇನೆ, ಪ್ರಾಮಾಣಿಕವಾಗಿ ಸೇವೆ ಮಾಡೋದು ನನ್ನ ಜವಾಬ್ದಾರಿಯಾಗಿದೆ ಎಂದರು.
ಕೇಂದ್ರ ಸರ್ಕಾರ ದೇಶದ ಜನತೆಗಾಗಿ ಈವರೆಗೂ ಯಾವ್ಯಾವ ಯೋಜನೆ ಜಾರಿಗೊಳಿಸಿದೆ ಎಂಬುದನ್ನು ಜನತೆಗೆ ತಿಳಿಸಬೇಕಿದೆ, ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಏನೆಲ್ಲಾ ಮಾಡಬಹುದೋ ಅದನ್ನ ಆಯೋಗದ ಜೊತೆ ಚರ್ಚೆ ಮಾಡಿ ಸಚಿವ ಸ್ಥಾನಕ್ಕೆ ಗೌರವ ಒದಗಿಸುತ್ತೇನೆ ಎಂದರು.
ಪ್ರಧಾನಿ ಮಂತ್ರಿ ನರೇಂದ್ರಮೋದಿ ಅವರು ದೇಶದ ಶೋಷಿತರ ಅಭಿವೃದ್ಧಿ ಪರವಾಗಿದ್ದಾರೆ, ದೇಶದಲ್ಲಿ 2ನೇ ಬಾರಿ ಸಂಪುಟ ವಿಸ್ತರಣೆಯಾಗಿದ್ದು, 12 ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ನೀಡುವುದರೊಂದಿಗೆ ದಲಿತರು, ಹಿಂದುಳಿದ ಹಾಗೂ ಮಹಿಳೆಯರಿಗೆ ಸಂಸತ್ತಿನಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಇದು ದೇಶದ ಜನರಿಗೆ ಸಂತಸ ತಂದಿದೆ ಎಂದರು.
ನಮ್ಮ ದೇಶದ ಸಂವಿಧಾನದ 127ನೇ ವಿಧಿಯನ್ನು ತಿದ್ದುಪಡಿ ಮಾಡುವುದರೊಂದಿಗೆ ಹಿಂದುಳಿದ ಜಾತಿಯನ್ನು ಒಬಿಸಿ ಪಟ್ಟಿಯಿಂದ ತೆಗೆಯುವ ಹಾಗೂ ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೂ ನೀಡಲಾಗಿದೆ ಎಂದು ಹೇಳಿದರು.
ಕೇಂದ್ರದಲ್ಲಿ ನೂತನ ಸಚಿವನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಾಶಿರ್ವಾದ ಯಾತ್ರೆಗೆ ಅದ್ದೂರಿ ಸ್ವಂದನೆ ಸಿಕ್ಕಿದೆ. ದೇಶದೆಲ್ಲೆಡೆ ನೂತನ ಸಚಿವರಿಗೆ ಇದೇ ಮಾದರಿಯಲ್ಲಿ ಅದ್ದೂರಿ ಸ್ವಾಗತ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದಿದ್ದೇನೆ. ಸಿದ್ಧಗಂಗಾ ಪುಣ್ಯಕ್ಷೇತ್ರಕ್ಕೆ ಬಂದಾಗ ಸಂಸಸ್ಕೃತಿ ಹಾಗೂ ಸಾಮಾಜಿಕ ಪ್ರಜ್ಞೆ ಜಾಗೃತವಾಗಲಿದೆ. ಆ ಮೂಲಕ ಜನಪರ ಕಾಳಜಿ ಮತ್ತಷ್ಟು ಹೆಚ್ಚಲಿದೆ. ಜಿಲ್ಲೆಯ ಜನರ ಪ್ರೀತಿ, ಅಭಿಮಾನ ನನಗೆ ಸಂತಸ ತಂದಿದೆ ಎಂದರು.
ಇದೇ ಪ್ರಥಮ ಬಾರಿ ಕೇಂದ್ರದ ಸಚಿವನಾಗಿ ಆಯ್ಕೆಯಾಗಿದ್ದ ನನಗೆ ದೆಹಲಿಯಲ್ಲಿ ಪ್ರತಿಯೊಂದೂ ಹೊಸದಾಗಿತ್ತು, ಈ ಸಂದರ್ಭದಲ್ಲಿ ಹಿರಿಯ ಸಂಸದರೆಲ್ಲಾ ಮಾರ್ಗದರ್ಶನ ನೀಡಿದ್ದಾರೆ. ಪ್ರಧಾನ ಮಂತ್ರಿಗಳ ನೇತೃತ್ವದ ಸರ್ಕಾರ ಹಾಗೂ ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು.
ಆಫ್ಘಾನಿಸ್ತಾನದಲ್ಲಿರುವ ಹಿಂದುಗಳ ರಕ್ಷಣೆಗೆ ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಆಫ್ಘಾನಿಸ್ತಾನಕ್ಕೆ ನೆರವು ನೀಡುವ ಬಗ್ಗೆ ಪ್ರಧಾನ ಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ, ವಿಶ್ವದಲ್ಲೇ ದೊಡ್ಡದಾಗಿರುವ ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತೆ ಹಾಗೂ ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಜನಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಬಳಿಕ ನಗರದ ಮಹಾಲಕ್ಷ್ಮಿ ನಗರದ ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದ್ದ ನರಸಿಂಹಮೂರ್ತಿ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ನಂತರ ಎಸ್ಐಟಿ ಬಡಾವಣೆ ನ್ಯಾಯಬೆಲೆ ಅಂಗಡಿಗೆ ಭೇಟಿ ಫಲಾನುಭವಿಗಳಿಗೆ ಪಡಿತರ ವಿತರಿಸಿದರು. ಬಳಿಕ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ವೀಕ್ಷಿಸಿದರು.
ಸಚಿವರಾದ ಬಿ.ಸಿ.ನಾಗೇಶ್, ಮಾಧುಸ್ವಾಮಿ, ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಂ, ರಾಜೇಶ್ಗೌಡ, ಚಿದಾನಂದ್ ಎಂ.ಗೌಡ, ಟೂಡಾ ಅಧ್ಯಕ್ಷ ಬಿ.ಸಿ.ನಾಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇದ್ದರು.

Get real time updates directly on you device, subscribe now.

Comments are closed.

error: Content is protected !!