ದೇಶದ ಪರಂಪರೆಯಲ್ಲಿ ದೇಗುಲಗಳ ಪಾತ್ರ ಮಹತ್ವದ್ದು

620

Get real time updates directly on you device, subscribe now.

ಮಧುಗಿರಿ: ದೇಶದ ಹಿಂದೂ ಧರ್ಮದ ಪರಂಪರೆಯಲ್ಲಿ ದೇಗುಲಗಳ ಪಾತ್ರ ಮಹತ್ವದ್ದಾಗಿದ್ದು, ಆ ಪರಂಪರೆ ಉಳಿಸಲು ಯುವ ಪೀಳಿಗೆ ಸದಾ ಸಿದ್ಧರಾಗಿರಬೇಕೆಂದು ಎಲೆರಾಂಪುರದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಸಬಾ ಭಕ್ತರಹಳ್ಳಿಯಲ್ಲಿ ಶೆಟ್ಟೆನವರ ಕುಲದೇವತೆ ಅಮ್ಮಾಜಿ ಕಾವಲ್ಲೇಶ್ವರಿ ದೇಗುಲದ ನೂತನ ಗೋಪುರದ ಕುಂಬಾಭಿಷೇಕ ಹಾಗೂ ನಾಗರಕಲ್ಲಿನ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯು ಸನಾತನ ಧರ್ಮವಾಗಿದೆ. ಇಲ್ಲಿ ದೇಗುಲಗಳು ಹಾಗೂ ಮಠಗಳು ಮಹತ್ತರ ಪಾತ್ರವಹಿಸುತ್ತಿವೆ, ಗ್ರಾಮೀಣ ಭಾಗದಲ್ಲಿ ಹಬ್ಬ, ಆಚರಣೆಗಳು ಮನುಷ್ಯನ ಸಾಮಾಜಿಕ ಬದುಕಿನಲ್ಲಿ ಪ್ರಾಮಾಣಿಕತೆ ಇರುವಂತೆ ಮಾಡಿವೆ, ಇದರಿಂದ ನೆಮ್ಮದಿಯ ಬದುಕನ್ನು ಕಾಣುತ್ತಿರುವ ಭಕ್ತರಿಂದ ಇಂತಹ ದೇವತಾ ಕಾರ್ಯ ನಡೆಯುತ್ತಿದ್ದು, ಲೋಕ ಕಲ್ಯಾಣಕ್ಕಾಗಿ ಮುಂದುವರೆಸಬೇಕು. ಕುಂಚಿಟಿಗ ಸಮಾಜದ ಶೆಟ್ಟೆನವರ ಕುಲದ ಸದ್ಭಕ್ತರು ಈ ಕಾರ್ಯ ನಡೆಸುತ್ತಿದ್ದು, ಸಮಾಜದ ಎಲ್ಲಾ ಕುಲದಲ್ಲೂ ಈ ಪರಂಪರೆಯಿರುವುದು ನನ್ನ ಸಮಾಜದ ಹೆಮ್ಮೆಯಾಗಿದೆ ಎಂದರು.
ಕುಂಚಿಟಿಗ ಸಮಾಜವು ತನ್ನದೆ ಆದ ಪರಂಪರೆ ಹಾಗೂ ದೈವಿ ಗುಣವನ್ನು ಹೊಂದಿದ್ದು, ಅನ್ನ ನೀಡುವ ಸಮಾಜ, ಈ ಸಮಾಜ ಭೂಮಿಯನ್ನು, ಕಾಮದೇನುವನ್ನು ದೇವರಂತೆ ಪ್ರೀತಿಸುವ ಸಮಾಜವಾಗಿದ್ದು, ಯಾರಿಗೂ ನೋವುಂಟು ಮಾಡಲ್ಲ, ಆದರೆ ನಮ್ಮ ಸಮಾಜಕ್ಕೆ ನೋವಾದರೆ ಸಮಾಜದ ಒಳಿತಿಗಾಗಿ ಎಂತಹ ಹೋರಾಟಕ್ಕೂ ಸಿದ್ಧ, ಎಲ್ಲಾ ಕಡೆಯೂ ಉತ್ತಮ ಮಳೆಯಾಗಿ ರೈತರು ಸುಖವಾಗಿರಬೇಕು, ದುಡಿದ ಸಂಪತ್ತನ್ನು ಸ್ವಲ್ಪವಾದರೂ ದಾನ ಮಾಡಬೇಕು, ಮಕ್ಕಳಿಗೆ ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣವನ್ನು ಪೋಷಕರು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ದೇಗುಲದ ಟ್ರಸ್ಟಿನ ಅಧ್ಯಕ್ಷ ಡಾ.ರಾಜಶೇಖರ್‌, ರಂಗನಾಥ್‌, ಪುಟ್ಟಸ್ವಾಮಯ್ಯ, ಚಂದ್ರು, ರಾಜಣ್ಣ ಹಾಗೂ ಇತರೆ ಕುಲದ ಭಕ್ತರು ಇದ್ದರು.

Get real time updates directly on you device, subscribe now.

Comments are closed.

error: Content is protected !!