ಭಕ್ತರಿಗೆ ಸಿಗಲಿಲ್ಲ ಗೊರವನಹಳ್ಳಿ ಮಹಾಲಕ್ಷ್ಮೀ ದರ್ಶನ

723

Get real time updates directly on you device, subscribe now.

ಕೊರಟಗೆರೆ: ಪವಿತ್ರ ಶ್ರಾವಣ ಮಾಸದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಅಂತಾನೇ ಮೀಸಲಿರುವ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಕೊರೊನಾ 3ನೇ ಅಲೆಯ ಕಾರ್ಮೋಡ ಕವಿದಿದೆ, ಮಹಿಳೆಯರ ಅಚ್ಚುಮೆಚ್ಚಿನ ಪವಿತ್ರ ಕ್ಷೇತ್ರವಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಿರುವ ಪರಿಣಾಮ ಪುಣ್ಯಕ್ಷೇತ್ರದಲ್ಲಿ ಶುಕ್ರವಾರ ನಿರವಮೌನ ಆವರಿಸಿದೆ.
ಕಲ್ಪತರು ನಾಡಿನ ಕಮಲ ಪ್ರೀಮೆ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯಕ್ಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಸಲ ವರಮಹಾಲಕ್ಷ್ಮೀ ಹಬ್ಬದ ದಿನದಂದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ನಿಷೇಧಿಸಿ ದೇವಾಲಯಕ್ಕೆ 3 ದಿನಗಳ ಕಾಲ ಬೀಗ ಹಾಕಲಾಗಿದೆ. ಬೆಂಗಳೂರು, ತುಮಕೂರು, ಹಾಸನ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ದೇವಿಯ ದರ್ಶನಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದರ್ಶನ ಸೀಗದೆ ನಿರಾಸೆ ಉಂಟಾಗಿದೆ.
ಕೊರೊನಾ ರೋಗದ 3ನೇ ಅಲೆಯ ಮುಂಜಾಗ್ರತಾ ಕ್ರಮ ಮತ್ತು ನೆರೆ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿರುವ ಪರಿಣಾಮ ಪ್ರಸ್ತುತ ಶ್ರಾವಣ ಮಾಸ, ವರಮಹಾಲಕ್ಷ್ಮೀ ಹಬ್ಬ, ಶನಿವಾರ, ಭಾನುವಾರ, ಸೋಮವಾರ, ಮುಂಬರುವ ಹಬ್ಬದ ದಿನಗಳು ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಸಾರ್ವಜನಿಕರ ಮತ್ತು ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಿ ತುಮಕೂರುಜಿಲ್ಲಾಧಿಕಾರಿ ಆದೇಶದಂತೆ ಇಂದು ಸಹ ಗೊರವನಹಳ್ಳಿ ಕ್ಷೇತ್ರಕ್ಕೆ ಭಕ್ತಾದಿಗಳ ತಡೆಗಾಗಿ 5 ಸುತ್ತಿನ ಪೊಲೀಸರ ಪಡೆ ನಿಯೋಜಿಸಲಾಗಿತ್ತು.
ಬೆಂಗಳೂರು ಬಾಣಸವಾಡಿ ವಾಸಿಯಾದ ಶ್ರೀಲಕ್ಷ್ಮೀ ಮಾತನಾಡಿ ವರಮಹಾ ಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಸನ್ನಿದಾನಕ್ಕೆ ಮಹಿಳೆಯರು ಬರುವುದೇ ವಾಡಿಕೆಯಾಗಿದೆ. ದೇವಿಯ ದರ್ಶನಕ್ಕೆ ಬರುವಾಗ ಅಕ್ಕಿ, ಮಡಲಕ್ಕಿ, ಸೀರೆ, ಕುಪ್ಪಸವನ್ನು ದೇವಾಲಯಕ್ಕೆ ನೀಡುತ್ತೇವೆ, ದೇವಿಗೆ ತಂದಂತಹ ಕಾಣಿಕೆಯನ್ನು ರಸ್ತೆಯಲ್ಲಿಯೇ ನೀಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇತಿಹಾಸದಲ್ಲಿ ಮೊದಲ ಸಲ ನಮಗೆ ಬೇಸರ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಕ್ಷೇತ್ರದಲ್ಲಿ ಸರಿ ಸುಮಾರು 1 ಕೋಟಿಗೂ ಅಧಿಕ ವಹಿವಾಟು ನಡೆಯಲಿದೆ. ಕೊರೊನಾ ರೋಗದ 3 ಅಲೆಯ ಭಯದಿಂದ ದೇವಾಲಯಕ್ಕೆ ಭಕ್ತರ ನಿಷೇಧಾಜ್ಞೆ ಇರುವ ಹಿನ್ನಲೆಯಲ್ಲಿ ರೈತಾಪಿವರ್ಗ, ವ್ಯಾಪಾರಸ್ಥ, ವಾಹನ ಸವಾರ ಮತ್ತು ದೇವಿಗೆ ಕಾಣಿಗೆ ರೂಪದಲ್ಲಿ ಬರುವಂತಹ 1 ಕೋಟಿಗೂ ಅಧಿಕ ವಹಿವಾಟು ನಷ್ಟವಾಗಿದೆ. ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕ್ಷೇತ್ರಕ್ಕೆ ಆಗಮಿಸಿದ ಸಾವಿರಾರು ಭಕ್ತರನ್ನುತಡೆಯಲು ಪೊಲೀಸರು 5 ಕಡೆಗಳಲ್ಲಿ ಪೊಲೀಸ್‌ ಪಹರೆ ನಿರ್ಮಿಸಿ ಭದ್ರತೆಯ ವ್ಯವಸ್ಥೆ ಮಾಡಿದ್ದರು.

Get real time updates directly on you device, subscribe now.

Comments are closed.

error: Content is protected !!